ಮಂಡ್ಯ(ಆ.24): ನಗರದ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ನೆರೆ ಸಂತ್ರಸ್ತರಿಗೆ 740 ಸೀರೆ ಹಾಗೂ 25 ಸಾವಿರ ರು. ಚೆಕ್‌ ಅನ್ನು ನಗರಸಭೆ ಪೌರಾಯುಕ್ತ ಲೋಕೇಶ್‌ ನೇತೃತ್ವದಲ್ಲಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು.

ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ, ಕಾಳಿಕಾಂಬ ದೇವಸ್ಥಾನಕ್ಕೆ ಸಾರ್ವಜನಿಕರು ನೀಡಲಾಗಿದ್ದ ಸೀರೆ ಹಾಗೂ ಸಮಿತಿಯಿಂದ 25 ಸಾವಿರ ರು.ಗಳನ್ನು ನೆರೆ ಸಂತ್ರಸ್ತರಿಗೆ ನೀಡಲಾಗುತ್ತಿದೆ. ಇದು ಜಿಲ್ಲೆಯ ಜನರ ಪ್ರೀತಿ ವಿಶ್ವಾಸದ ಕೊಡುಗೆಯಾಗಿದೆ. ನೆರೆ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ.

ಮಂಡ್ಯ: 'ಶಾಸಕರ ಸ್ಪೀಡ್ ನೋಡಿದ್ರೆ ಅವ್ರೇ ಬಿಎಸ್‌ವೈ ಅವ್ರನ್ನ ಬೀಳ್ಸೋ ಹಾಗಿದೆ’

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರೆ ಸಂತ್ರಸ್ತರ ದುಃಖ ದುಮ್ಮಾನಗಳಿಗೆ ಹಾಗೂ ಅವರ ಪುನರ್ವಸತಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಪ್ರತಿಯೊಬ್ಬರು ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯವನ್ನು ಜನರು ಮಾಡಬೇಕು ಎಂದು ಮನವಿ ಮಾಡಿದರು.

ಸಚಿವ ಆರ್‌.ಅಶೋಕ್‌ ಹೆಗಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ?

ಈ ಸಂದರ್ಭದಲ್ಲಿ ಕಾಳಿಕಾಂಬ ಸೇವಾ ಸಮಿತಿಯ ಶಂಕರ್‌, ಪ್ರಸನ್ನ ಕುಮಾರ್‌, ಎಂ.ಎನ್‌.ವೆಂಕಟೇಶ್‌, ಎಂ.ಬಿ.ಶ್ರೀನಿವಾಸ್‌, ರಾಮಕೃಷ್ಣ, ಜಗದೀಶ್‌ ಭಾಗವಹಿಸಿದ್ದರು.