ಮಂಡ್ಯ(ಆ.23): ಬಿಜೆಪಿ ಸಚಿವ ಸ್ಥಾನ ವಂಚಿತರ ವೇಗ ನೋಡಿದರೆ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿದ್ದಂತೆ ಕಾಣುವುದಿಲ್ಲ ಎಂದು ಮಾಜಿ ಸಚಿವ ಸಿ. ಎಸ್‌ ಪುಟ್ಟರಾಜು ಗುರುವಾರ ಹೇಳಿದರು. ಸಂಪುಟ ರಚನೆಯಾದ ನಂತರ ಸಚಿವ ಸ್ಥಾನ ಕೖಪ್ಪಿದ ಶಾಸಕರ ಬಗ್ಗೆ ಮಾತನಾಡಿ, ಬಿಜೆಪಿಗೆ ಉಳಿಗಾಲ ಇಲ್ಲ ಎಂದವರು ಹೇಳಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ಮುಖ್ಯಮಂತ್ರಿ ಯಡಿಯೂರಪ್ಪನವರ ಕಟ್ಟಾಬೆಂಬಲಿಗರೆ ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು. ಶಾಸಕರ ಸ್ಪೀಡ್‌ ಗಮನಿಸಿದರೆ ಅವರುಗಳೇ ಸಿಎಂ ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸಲು ರೆಡಿಯಾಗಿದ್ದಾರೆ ಎಂದು ಭವಿಷ್ಯ ನುಡಿದರು.

ಸಚಿವ ಆರ್‌.ಅಶೋಕ್‌ ಹೆಗಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ?

ಮೖತ್ರಿ ಸರ್ಕಾರದಲ್ಲಿ ಅತೃಪ್ತರೇ ತಿರುಗಿಬಿದ್ದಂತೆ ಬಿಜೆಪಿಯಲ್ಲೂ ಏನಾದರೂ ಆಗುವ ಸಾಧ್ಯಾಸಾಧ್ತೆ ಬಗ್ಗೆ ಪ್ರತಿಕ್ರಿಯಿಸಿ, ನಾವೇನೂ ಬಿಜೆಪಿ ನಾಯಕರಂತೆ ಬಿಜೆಪಿ ಶಾಸಕರನ್ನು ಅಪರೇಶನ್‌ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ಸ್ಪಷ್ಟಉತ್ತರ ನೀಡಿದರು.

KRS ಜಲಾಶಯದ ಸುತ್ತ ಮುತ್ತ ನಿಷೇಧಾಜ್ಞೆ ಜಾರಿ