ಸಾಲಿಗ್ರಾಮ(ಜು.05): ಸಾಲಿಗ್ರಾಮದಲ್ಲಿ ಇಬ್ಬರು ಯುವಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ಬ್ರಾಹ್ಮಣರ ಬೀದಿ ಕೋಟೆ ಬೀದಿ ಭಾಗಗಳಲ್ಲಿ ಸೀಲ್ ಡೌನ್‌ ಮಾಡಲಾಗಿರುವ ಪ್ರದೇಶಕ್ಕೆ ಶಾಸಕ ಸಾ.ರಾ. ಮಹೇಶ್‌ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

ನಂತರ ಅವರು ಮಾತನಾಡಿ, ನಿಮ್ಮ ಜೊತೆ ನಾನಿರುವೆ ಎಂದು ಎಲ್ಲರಿಗೂ ಧೈರ್ಯ ತುಂಬಿದರು. ಸೀಲ… ಡೌನ್‌ ಆಗಿರುವ ಬ್ರಾಹ್ಮಣರ ಬೀದಿಯಲ್ಲಿ 78 ಕುಟುಂಬ ಮತ್ತು ಕೋಟೆ ಬೀದಿಯ 65 ಕುಟುಂಬಕ್ಕೆ ಪಡಿತರ ದಿನಸಿ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ಹಣದಿಂದ ಹಾಗೂ ಯಾರಿಗಾದರೂ ಮೆಡಿಸಿನ್‌ ಮಾತ್ರೆಗಳು ಬೇಕಾದಲ್ಲಿ ಅವರಿಗೂ ಸಹ ನೀಡಲಾಗುವುದು ಹಾಗೂ ಅಲ್ಲಿನ ಪ್ರದೇಶಗಳಲ್ಲಿ ದನಕರುಗಳಿಗೆ ಮೇವಿನ ತೊಂದರೆ ಆಗದಂತೆ ಕ್ರಮ ವಹಿಸಬೇಕೆಂದು ಸ್ಥಳದಲ್ಲಿಯೇ ಇದ್ದ ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಂಪಂ ಅಧಿಕಾರಿಗಳಿಗೆ ತಿಳಿಸಿ, ಮೇವನ್ನು ವಿತರಣೆ ಮಾಡಬೇಕೆಂದು ಸೂಚಿಸಿದರು.

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ ಅವರು ಸಾಲಿಗ್ರಾಮದಲ್ಲಿ ಒಟ್ಟು 400 ಜನರಿಗೆ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಿಪಿಐ ಪಿ.ಕೆ. ರಾಜು ಅವರು ತಾಲೂಕಿನಾದ್ಯಂತ ಸಾರ್ವಜನಿಕರಿಗೆ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದಾಗಿ ಶಾಸಕರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರು ಅನಾವಶ್ಯಕವಾಗಿ ಓಡಾಡಬಾರದು, ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಹೊಸ ವ್ಯಕ್ತಿಯ ಜೊತೆಗೆ ಮಾತನಾಡುವಾಗ ಎಚ್ಚರಿಕೆಯಿಂದ ಇದ್ದು, ಅಂತರ ಕಾಪಾಡಬೇಕೆಂದರು. ತಾಲೂಕು ತಹಸೀಲ್ದಾರ್‌ ಅವರಿಂದ ಮಾಹಿತಿ ಪಡೆದು ತಾಲೂಕಿನಲ್ಲಿ ಒಟ್ಟು 12 ಕೊರೋನಾ ಪ್ರಕರಣವಿದ್ದು ಎಲ್ಲರೂ ಮುಂಜಾಗ್ರತಾ ಕ್ರಮವಹಿಸಲು ಅವರು ತಿಳಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆ ದಬ್ಬಾಳಿಕೆ: ಆರೋಪ

ತಾಲೂಕು ತಹಸೀಲ್ದಾರ್‌ ಮಂಜುಳಾ, ಸಿಪಿಐ ಪಿಕೆ ರಾಜು ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ, ಎಸ್‌ಐ ಚೇತನ್‌, ಸಾಲಿಗ್ರಾಮ ಎಸ್‌ಐ ಆರತಿ, ಡೆಪ್ಯುಟಿ ತಹಸೀಲ್ದಾರ್‌ ಮಹೇಶ್‌, ಗ್ರಾಪಂ ಅಧ್ಯಕ್ಷ ಮಂಜುನಾಥ್‌, ಪಿಡಿಒ ಎಚ್‌.ಡಿ. ಮಂಜುನಾಥ್‌, ವೈದ್ಯಾಧಿಕಾರಿ ಮಂಜುನಾಥ್‌, ಜಯರಾಮ…, ಶಿವಕುಮಾರ್‌, ಆರ್‌.ಐ. ದರ್ಶನ್‌, ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾಗೇಂದ್ರ, ಮಾಜಿ ಅಧ್ಯಕ್ಷ ದಿನೇಶ್‌, ಎಸ್‌.ಆರ್‌. ಪ್ರಕಾಶ್‌, ಸತೀಶ್‌, ಮುಖಂಡರಾದ ಶ್ರೀನಿವಾಸ್‌ ಗೌಡ, ಮೆಡಿಕಲ… ರಾಜಣ್ಣ, ಮಧುಚಂದ್ರ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಇದ್ದರು.