Asianet Suvarna News Asianet Suvarna News

ಎಡನೂ ಅಲ್ಲ ಬಲನೂ ಅಲ್ಲ, ನಾನು ಭಾರತೀಯ ಪಂಕ್ತಿಯಲ್ಲಿ ದೇಶ ಭಕ್ತ: ಚೇತನ್ ಅಹಿಂಸಾ

ನಮ್ಮ ದೇಶವೆಂದರೆ ಎಲ್ಲಾ ಭಾಷೆ, ಗಡಿಗಳಿಗೂ ಮೀರಿದ್ದು, ಇಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅವಶ್ಯಕತೆಯಿದೆ. ಸಮಾನ- ಸಮಾಜ ನಿರ್ಮಾಣವಾಗಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಚಿತ್ರನಟ ಚೇತನ್ ಅಹಿಂಸಾ 

sandalwood actor Chetan Kumar talks over Leftist or Rightist grg
Author
First Published Aug 11, 2024, 4:42 AM IST | Last Updated Aug 11, 2024, 4:42 AM IST

ಶ್ರೀರಂಗಪಟ್ಟಣ(ಆ.11): ನಾನು ಎಡ ಪಂಥೀಯ ಅಥವಾ ಬಲಪಂಥೀಯನಲ್ಲ. ಭಾರತೀಯ ಪಂಕ್ತಿಯಲ್ಲಿ ದೇಶ ಭಕ್ತನಾಗಿದ್ದೇನೆ ಎಂದು ಚಿತ್ರನಟ ಚೇತನ್ ಅಹಿಂಸಾ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಜ್ಞಾವಂತ ವೇದಿಕೆ ವತಿಯಿಂದ ಪ್ರಜ್ಞಾವಂತ ಮತದಾರ ಪ್ರಶಸ್ತಿ ಪ್ರದಾನ ಸಮಾರಂಭದ 2ನೇ ವರ್ಷದ ಸಮಾವೇಶದಲ್ಲಿ ಮಾತನಾಡಿ, ನಮ್ಮ ದೇಶವೆಂದರೆ ಎಲ್ಲಾ ಭಾಷೆ, ಗಡಿಗಳಿಗೂ ಮೀರಿದ್ದು, ಇಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅವಶ್ಯಕತೆಯಿದೆ. ಸಮಾನ- ಸಮಾಜ ನಿರ್ಮಾಣವಾಗಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರಿನ ಇತಿಹಾಸ ತಜ್ಞ ಪ್ರೊ. ನಂಜರಾಜ್ ಅರಸ್ ಮಾತನಾಡಿ, ಮೈಸೂರಿನ ಜಿಲ್ಲಾಧಿಕಾರಿ ಮಣಿವಣ್ಣನ್ ಕಾಲಾವಧಿಯಲ್ಲಿ ಜಸ್ಕೊ ಕಂಪನಿಯವರಿಗೆ ನೀರು ಸರಬರಾಜು ಖಾಸಗಿ ಕರಣವಾಗುವುದನ್ನು ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿದರು. ಪ್ರಜ್ಞಾವಂತ ವೇದಿಕೆಯಿಂದ ನೀಡಲಾದ ಪ್ರಜ್ಞಾವಂತ ಮತದಾರ ಪ್ರಶಸ್ತಿಯನ್ನು ಬಾಬುರಾಯನ ಕೊಪ್ಪಲು ಗ್ರಾಮದ ರೈತ ಬಿ.ಎಸ್ ರಮೇಶ್, ಕಡುತನಾಳು ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೆ.ಎಸ್. ಜಯಶಂಕರ್ ಅವರಿಗೆ ನೀಡಿ ಗೌರವಿಸಲಾಯಿತು.

ಅಹಿಂದಾ ಪರ ಎನ್ನುವ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ನಟ ಚೇತನ್ ಅಹಿಂಸಾ

ಕಾರ್ಯಕ್ರಮ ಆಯೋಜಕ, ವಕೀಲ ಸಿ.ಎಸ್ ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಚಿಕ್ಕ ತಮ್ಮೇಗೌಡ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಡಿಎಸ್‌ಎಸ್ ಸಂಚಾಲಕ ರವಿ ಚಂದ್ರ, ರೈತ ಮುಖಂಡ ಪಾಂಡು ಸೇರಿ ಇತರರು ಇದ್ದರು.

Latest Videos
Follow Us:
Download App:
  • android
  • ios