ಉಡುಪಿ(ಮೇ 15): ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಕಳೆದ 53 ದಿನಗಳಿಂದ ಮುಚ್ಚಿರುವ ಸೆಲೂನುಗಳನ್ನು ಮೇ 18ರಿಂದ ಷರತ್ತುಬದ್ಧವಾಗಿ ತೆರೆಯಲು ಜಿಲ್ಲಾಧಿಕಾರಿ ಅವರು ಅನುಮತಿ ನೀಡಿದ್ದಾರೆ.

ಜಿಲ್ಲಾ ಸವಿತಾ ಸಮಾಜದ ನಿಯೋಗದವು ಬುಧವಾರ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಾಗಿ ಷರತ್ತುಗಳನ್ನು ಪಾಲಿಸುವುದಾದರೆ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದು, ಇದಕ್ಕೆ ಸವಿತಾ ಸಮಾಜ ನಿಯೋಗವು ಒಪ್ಪಿಗೆ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

3ನೇ ಪ್ಯಾಕೇಜ್ ಘೋಷಿಸಿದ ಬಿಎಸ್‌ವೈ: ರೈತ, ಆಶಾ ಕಾರ್ಯಕರ್ತೆಯರಿಗೆ ಬಂಪರ್

ಮುಂಗಡ ಫೋನ್‌ ಮಾಡಿ ಸಮಯವನ್ನು ನಿಗದಿಗೊಳಿಸಿ ಬಂದ ಗ್ರಾಹಕರಿಗೆ ಮಾತ್ರ ಕ್ಷಾೌರ ಮಾಡಬೇಕು, ಸೆಲೂನ್‌ನಲ್ಲಿ ಗ್ರಾಹಕರನ್ನು ಕುಳ್ಳಿರಿಸಿ ಕಾಯಿಸುವಂತಿಲ್ಲ, ಎಸಿ ಬಳಸುವಂತಿಲ್ಲ, ಕ್ಷಾೌರಿಕ ಮತ್ತು ಗ್ರಾಹಕರ ನಡುವೆ 2 ಅಡಿ ಅಂತರ ಕಾಯಬೇಕು, ಕೇವಲ ಇಬ್ಬರು ಗ್ರಾಹಕರಿಗೆ ಮಾತ್ರ 6 ಅಡಿ ಅಂತರದಲ್ಲಿ ಸೇವೆ ನೀಡಬೇಕು.

ಕ್ಷಾೌರಿಕರು ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ಗಳನ್ನು ಕಡ್ಡಾಯವಾಗಿ ಬಳಸಬೇಕು, ಪ್ರತಿ ಗ್ರಾಹಕರ ಕೈಗೆ ಸ್ಯಾನಿಟೈಸರ್‌ ನೀಡಬೇಕು, ಕ್ಷಾೌರಕ್ಕೆ ಬಳಸುವ ಬಟ್ಟೆಮತ್ತು ಅಂಗಡಿಯಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಕಾಪಾಡಬೇಕು, ಒಮ್ಮೆ ಬಳಸಿದ ಬಟ್ಟೆಯನ್ನು ಒಗೆಯದೇ ಪುನಃ ಬಳಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಇದಕ್ಕೆ ತಮ್ಮ ಒಪ್ಪಿಗೆ ಇದೆ ಎಂದು ಸವಿತಾ ಸಮಾದಜ ಅಧ್ಯಕ್ಷ ಭಾಸ್ಕರ ಭಂಡಾರಿ ತಿಳಿಸಿದ್ದಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘನೆ; ಜಿಪಂ ಸದಸ್ಯ ವಿರುದ್ಧ ಪ್ರಕರಣ

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ, ಕೋಶಾಧಿಕಾರಿ ಶೇಖರ ಸಾಲ್ಯಾನ್‌, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ರಾಜು ಭಂಡಾರಿ, ಯು.ಶಂಕರ ಸಾಲ್ಯಾನ್‌ ಉಪಸ್ಥಿತರಿದ್ದರು.