Asianet Suvarna News Asianet Suvarna News

ಲಾಕ್‌ಡೌನ್‌ ನಿಯಮ ಉಲ್ಲಂಘನೆ; ಜಿಪಂ ಸದಸ್ಯ ವಿರುದ್ಧ ಪ್ರಕರಣ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕೇರಳದ ಕಾಸರಗೋಡು ಜಿ.ಪಂ. ಸ್ಥಾಯಿ ಸಮಿತಿ ಸದಸ್ಯರೊಬ್ಬರ ವಿರುದ್ಧ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Case filed against kasaragod zila panchayath member
Author
Bangalore, First Published May 15, 2020, 2:26 PM IST

ಉಳ್ಳಾಲ(ಮೇ 15): ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕೇರಳದ ಕಾಸರಗೋಡು ಜಿ.ಪಂ. ಸ್ಥಾಯಿ ಸಮಿತಿ ಸದಸ್ಯರೊಬ್ಬರ ವಿರುದ್ಧ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಸರಗೋಡು ಜಿ.ಪಂ ಸ್ಥಾಯಿ ಸಮಿತಿ ಸದಸ್ಯ ಹರ್ಷಾದ್‌ ವರ್ಕಾಡಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೇ 12ರ ರಾತ್ರಿ ಉಳ್ಳಾಲ ಠಾಣೆಯ ಎಎಸ್ಸೈ ಶೇಖರ ಗಟ್ಟಿಎಂಬವರು ಮೇಲಧಿಕಾರಿಗಳ ಆದೇಶದಂತೆ ಇತರ ಸಿಬ್ಬಂದಿಯವರೊಂದಿಗೆ ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ಕರ್ತವ್ಯದಲ್ಲಿದ್ದರು.

ಉಡುಪಿಯಲ್ಲಿ ದುಬೈ ಕರಿನೆರಳು: ಗ್ರೀನ್ ಝೋನಲ್ಲಿ 5 ಪಾಸಿಟಿವ್ ಕೇಸ್

ಈ ವೇಳೆ ತೌಡುಗೋಳಿ ಕಡೆಯಿಂದ ನೆತ್ತಿಲಪದವು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ತಡೆದು ನಿಲ್ಲಿಸಿದ್ದು, ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದರು. ಹೀಗಾಗಿ ತಪಾಸಣೆಗೆ ಮುಂದಾಗಿ ದ.ಕ ಜಿಲ್ಲಾಧಿಕಾರಿಗಳ ಲಾಕ್‌ಡೌನ್‌ ಆದೇಶವಿರುವ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಹರ್ಷಾದ್‌ ವರ್ಕಾಡಿ ಪೊಲೀಸರ ಜೊತೆ ಉದ್ದಟತನ ತೋರಿದ್ದಾನೆ ಎಂದು ದೂರಲಾಗಿದೆ.

ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಉದ್ಧಟತನದಿಂದ ವರ್ತಿಸಿದ್ದಲ್ಲದೆ ಲಾಕ್‌ಡೌನ್‌ ನಿಮಯ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಉಳ್ಳಾಲ ಠಾಣೆಯ ಎಎಸ್ಸೆ ೖ ಶೇಖರ ಗಟ್ಟಿಎಂಬವರ ದೂರಿನಂತೆ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios