‘ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಸಖಿ’
ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಸೂರೇ ಸಖಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಆರ್.ಪವಿತ್ರಾ ಅಭಿಪ್ರಾಯಪಟ್ಟರು.
ತುಮಕೂರು (ಅ.10): ನೊಂದ ಮಹಿಳೆಯರಿಗೆ ಸಾಂತ್ವನ ನೀಡುವ ಸೂರೇ ಸಖಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಆರ್.ಪವಿತ್ರಾ ಅಭಿಪ್ರಾಯಪಟ್ಟರು.
ತುಮಕೂರಿನ ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರದ ಶಿಬಿರಾರ್ಥಿಗಳಿಗೆ ಏರ್ಪಡಿಸಿದ್ದ ಸಖಿ ಸಂವಾದ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಯಾವುದೇ ರೀತಿಯ ದೌರ್ಜನ್ಯ ಆದರೂ ಒಂದೇ ಸೂರಿನಡಿ, ವೈದ್ಯಕೀಯ, ಕಾನೂನು, ಆಪ್ತ ಸಮಾಲೋಚನೆ, ಮುಂತಾದ ಸೌಲಭ್ಯಗಳು ಸಿಗುವ ತಾಣವೇ ಸಖಿ ಒನ್ ಸ್ಟಾಪ್ ಸೆಂಟರ್. ನೊಂದ ಮಹಿಳೆಯರಿಗೆ ಸಾಂತ್ವನ ನೀಡುವುದು ಈ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೊಂದ ಮಹಿಳೆಯರಿಗಾಗಿಯೇ ಅನೇಕ ವ್ಯವಸ್ಥೆಯನ್ನು ಮಾಡಿದ್ದು, ಸಾಂತ್ವನ, ಸ್ವೀಕಾರ, ಸ್ವಾಧಾರ್, ಸಖಿ, ಮಕ್ಕಳಿಗೆ ಸಂಬಂಧಿಸಿಂತೆ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಹಾಗೂ ಏಕ ಪೋಷಕರ ಬಡ ಮಕ್ಕಳಿಗೆ ತಿಂಗಳಿಗೆ ನಾಲ್ಕು ಸಾವಿರ ಸಹಾಯಧನದ ಸೌಲಭ್ಯವಿದೆ ಎಂದು ಇಲಾಖೆಯ ವಿವಿಧ ಸೌಲಭ್ಯಗಳ ಬಗ್ಗೆ ಪವಿತ್ರಾ ವಿವರಿಸಿದರು.
ಸಖಿ ಒನ್ ಸ್ಟಾಪ್‌ನ ಕಾನೂನು ಸಲಹೆಗಾರರಾದ ಸುಧಾ ಮಾತನಾಡಿ, ಕೌಟುಂಬಿಕ ದೌರ್ಜನ್ಯ ತಡೆ ರಕ್ಷಣಾ ಕಾಯ್ದೆಯ ಬಗ್ಗೆ ವಿವರಿಸಿದರು. ಮಹಿಳೆಯರು ಹೊರಗೆ ಮಾತ್ರವಲ್ಲ ಮನೆಯಲ್ಲೂ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಈ ದೌರ್ಜನ್ಯವು ದೈಹಿಕವಾಗಿರಬಹುದು, ಮಾನಸಿಕವಾಗಿರಬಹುದು, ಲೈಂಗಿಕವಾಗಿರಬಹುದು ಮತ್ತು ಆರ್ಥಿಕವಾಗಿಯೂ ಆಗಿರಬಹುದು. ಇಂತಹ ಯಾವುದೇ ಪ್ರಕಾರದ ದೌರ್ಜನ್ಯಗಳಾ¨ರೂ ಆ ಮಹಿಳೆ ಸ್ವಯಂ ಬಂದು ದೂರು ದಾಖಲಿಸಬಹುದು ಅಥವಾ ಸಂಘಸಂಸ್ಥೆಗಳು, ನಾಗರಿಕರು, ಯಾರೂ ಬೇಕಾದರೂ ಅವರ ಪರ ದೂರು ದಾಖಲಿಸಿದರೂ ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಉಚಿತ ಸೇವಾ ಕಾನೂನು ಪ್ರಾಧಿಕಾರಕ್ಕೆ ನೇರವಾಗಿ ನೊಂದ ಮಹಿಳೆಯರೇ ದೂರು ದಾಖಲಿಸಬಹುದು. 60 ದಿನಗಳೊಳಗೆ ಪರಿಹಾರ ಸಿಗುವಂತೆ ನ್ಯಾಯ ಒದಗಿಸುವ ವ್ಯವಸ್ಥೆ ಇದೆ ಎಂದರು. ಹಾಗೂ ಈ ನಿಟ್ಟಿನಲ್ಲಿ ಇರುವಂತ ಕಾನೂನುಗಳ ಬಗ್ಗೆ ವಿವರಿಸಿ ಮಹಿಳೆಯರಿಗೆ ಅರಿವು ಮೂಡಿಸಿದರು.
ಸಮಥ್‌ರ್ ¶ೌಂಡೇಷನ್‌ನ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ಮಾತನಾಡಿ, ಸಮಥ್‌ರ್ ¶ೌಂಡೇಷನ್ ಸಂಸ್ಥೆಯು ತನ್ನ ಶಿಬಿರಾರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡುವುದರ ಜೊತೆಗೆ ಈ ರೀತಿಯ ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ನೀಡುತ್ತದೆ. ಮಹಿಳೆಯರಿಗೆ ನಾನಾ ಬಗೆಯ ದೌರ್ಜನ್ಯಗಳು ನಡೆಯುತ್ತಿರುವುದನ್ನು ನಾವು ದಿನನಿತ್ಯವೂ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ನಮ್ಮ ಸುತ್ತಮುತ್ತ ಇಂಥಹ ಘಟನೆಗಳು ನಡೆದಾಗ ನಾವು ಎಲ್ಲಿ ಹೋಗಬೇಕು, ಯಾರ ಸಹಾಯ ಕೇಳಬೇಕು ಎಂಬ ತಿಳುವಳಿಕೆ ಇರಬೇಕಾದುದು ಬಹು ಮುಖ್ಯವಾದುದಾಗಿದೆ ಹಾಗಾಗಿ ಇಂಥಹ ಕಾರ್ಯಾಗಾರಗಳು ಪ್ರಸ್ತುತವೆನಿಸುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ರಮ್ಯ ಪ್ರಭಾಕರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಶಿಬಿರಾರ್ಥಿಗಳು ಸಂವಾದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಶಿಬಿರಾರ್ಥಿ ರೂಪ ನಿರೂಪಿಸಿ, ಶಿಕ್ಷಕಿ ಮರ್ಸಿ ಸ್ವಾಗತಿಸಿ, ಶಾಮಲ ವಂದಿಸಿದರು. ಸಿಬ್ಬಂದಿ ವರ್ಗದವರಾದ ವಿನುತ, ಶಾರೋನ್ ಇತರರಿದ್ದರು.
ವಿವಿಧ ರೀತಿಯ ದೌಜ್ಯನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಅಗತ್ಯ ಸೇವೆಗಳನ್ನು ಒದಗಿಸುವ ತಾಣವೇ ಸಖಿ ಒನ್ ಸ್ಟಾಪ್ ಸೆಂಟರ್. ಇದು ಕೌಟುಂಬಿಕ, ಸಾರ್ವಜನಿಕ ಸ್ಥಳ, ಕೆಲಸದ ಸ್ಥಳ ಹಾಗೂ ಸಮುದಾಯಗಳಲ್ಲಿ ದೌಜ್ಯನ್ಯಕ್ಕೆ ಒಳಗಾಗುತ್ತಾರೆ. ಇತ್ತೀಚೆಗೆ ಸೈಬರ್ ಕ್ರೈಂಗಳೂ ಹೆಚ್ಚಾಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದೆ. ಮಹಿಳೆಯರು ಎದುರಿಸುವ ಇಂಥ ಎಲ್ಲಾ ರೀತಿಯ ದೌರ್ಜನ್ಯಕ್ಕೂ ವೈದ್ಯಕೀಯ, ಕಾನೂನು, ಆಪ್ತ ಸಮಾಲೋಚನೆ, ಮುಂತಾದ ಸೇವೆಗಳನ್ನು ಸಖಿ ನೀಡುತ್ತಿದೆ. ಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದಾದರೂ ಘಟನೆಗಳನ್ನು ಕಂಡಲ್ಲಿ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ರಾಧಾಮಣಿ ಆಡಳಿತಾಧಿಕಾರಿ, ಸಖಿ ಒನ್ ಸ್ಟಾಪ್