Big3 ಕಾಮಗಾರಿ ಮುಗಿದ್ರೂ ಉದ್ಘಾಟನೆ ಇಲ್ಲ ಯಾಕೆ? ಸಾಗರ ಮಾರುಕಟ್ಟೆ, ಜನರ ಚಿಂತೆ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಇಲ್ಲಿನ ಜನರದ್ದು. ಕೋಟಿಗಟ್ಟಲೇ ಹಣ ಸುರಿದು ನಿರ್ಮಿಸಿದ ಕಟ್ಟಡ ಪಾಳುಬಿದ್ದಿದೆ. ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬಡವರ ಬಂಡವಾಳ ನೀರಲ್ಲಿ ಕೊಚ್ಚಿ ಹೋಗುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ?
ಶಿವಮೊಗ್ಗ, (ಮೇ.05): ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಇಲ್ಲಿನ ಜನರದ್ದು. ಕೋಟಿಗಟ್ಟಲೇ ಹಣ ಸುರಿದು ನಿರ್ಮಿಸಿದ ಕಟ್ಟಡ ಪಾಳುಬಿದ್ದಿದೆ. ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಬಡವರ ಬಂಡವಾಳ ನೀರಲ್ಲಿ ಕೊಚ್ಚಿ ಹೋಗುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ?
Big3 Impact: ಚನ್ನಪಟ್ಟಣ ಹೊಂಗನೂರು ಕೆರೆ ಏರಿಯಲ್ಲಿ ಕಾಮಗಾರಿ ಶುರು
ಉದ್ಘಾಟನೆಯಾಗದೇ ಖಾಲಿ ಬಿದ್ದ ಮಾರುಕಟ್ಟೆ, ಪುಂಡ ಪೋಕರಿಗಳದ್ದೇ ಅಡ್ಡೆಯಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಸಂಕಷ್ಟ ಕಥೆ.. ಮಾಜಿ ಸಿಎಂ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಸಂಸದ ರಾಘವೇಂದ್ರ, ಹರತಾಳು ಹಾಲಪ್ಪ ಸೇರಿದಂತೆ ಶಿವಮೊಗ್ಗದ ಜಿಲ್ಲೆಯಲ್ಲಿ ಘಟಾನುಘಟಿ ನಾಯಕರುಗಳು ಇದ್ದು, ಸಾಗರದ ಒಂದು ಮಾರ್ಕೆಟ್ ಓಪನ್ ಮಾಡಿಸಲು ಆಗಿಲ್ಲ. ಮಳೆ ಬಂದ್ರೆ ಸಾಕು ವಾಪಾರಸ್ಥರು ಹಾಗೂ ಗ್ರಾಹಕರು ಕೆಸರಿನಲ್ಲೇ ವಹಿವಾಟು ಮಾಡ್ತಾರೆ.. ಸುಮಾರು 6.5 ಕೋಟಿ ರೂ. ವೆಚ್ಚದಲ್ಲಿ ಮಾರ್ಕೆಟ್ ನಿರ್ಮಿಸಲಾಗಿದೆ. ಆದ್ರೆ, ಇದಕ್ಕೆ ಉದ್ಘಾಟನೆ ಭಾಗ್ಯ ಬಂದಿಲ್ಲ..ಇದನ್ನು ನಿಮ್ಮ ಬಿಗ್-3 ತೆಗೆದುಕೊಂಡಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಬೇಗ ಉದ್ಘಾಟನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಸಹ ಡೆಡ್‌ಲೈನ್ ಕೊಟ್ಟಿದೆ. ಈ ಬಗ್ಗೆ ಒಂದು ವರದಿ ಈ ಕೆಳಗಿನಂತಿದೆ ನೋಡಿ
BIG 3: ಕಾಮಗಾರಿ ಆರಂಭವಾಗಿ 8 ವರ್ಷ, ಜನರಿಗಿಲ್ಲ ಸಂತೆ ಮಾರ್ಕೆಟ್ ಸೌಲಭ್ಯ!
"
BIG 3: ಪುಂಡ ಪೋಕರಿಗಳ ಅಡ್ಡೆ ಸಾಗರ ಮಾರುಕಟ್ಟೆ, ನಗರಸಭೆ ಅಧ್ಯಕ್ಷರ ಮಾತು ಕೇಳಿ!
"