ಹಿಂದೂ ಜನರನ್ನು ಸಾಧು ಸಂತರ ಎಚ್ಚರಿಸುತ್ತಿದ್ದಾರೆ: ಮನೋಹರ್‌ ಮಠದ್‌

ಹಿಂದೂ ಸಮಾಜದ ಜನರು ತನ್ನ ಮೂಲ ಸಂಸ್ಕೃತಿಯನ್ನು ಮರೆತು ಗಾಢನಿದ್ರೆಗೆ ಜಾರಿದಾಗಲೆಲ್ಲ, ಅವರನ್ನು ಎಚ್ಚರಿಸಿ ಸರಿಯಾದ ದಾರಿಯಲ್ಲಿ ಮುನ್ನಡೆಸುವ ಕೆಲಸವನ್ನು ಸಮಾಜದ ಮಠ ಮಂದಿರಗಳ ಸಾಧು ಸಂತರು ಹಿಂದಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಮನೋಹರ್‌ ಮಠದ್ ತಿಳಿಸಿದರು.

Sadhu saints are warning Hindu people: Manohar Mathad snr

ತುಮಕೂರು: ಹಿಂದೂ ಸಮಾಜದ ಜನರು ತನ್ನ ಮೂಲ ಸಂಸ್ಕೃತಿಯನ್ನು ಮರೆತು ಗಾಢನಿದ್ರೆಗೆ ಜಾರಿದಾಗಲೆಲ್ಲ, ಅವರನ್ನು ಎಚ್ಚರಿಸಿ ಸರಿಯಾದ ದಾರಿಯಲ್ಲಿ ಮುನ್ನಡೆಸುವ ಕೆಲಸವನ್ನು ಸಮಾಜದ ಮಠ ಮಂದಿರಗಳ ಸಾಧು ಸಂತರು ಹಿಂದಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಮನೋಹರ್‌ ಮಠದ್ ತಿಳಿಸಿದರು.

ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆ ವತಿಯಿಂದ ರಾಷ್ಟ್ರ ಜಾಗೃತಿ ಅಭಿಯಾನ-2024ರ ಸಾಧು ಸಂತರ ಸಮಾವೇಶವನ್ನು ನಗರದ ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗಿತ್ತು.

ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಿಂದಲೂ ಸಾಧು ಸಂತರ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತಿದ್ದೇವೆ. ನಮ್ಮ ದೇಶದ ಸಂಸ್ಕೃತಿಗೆ ವಿದೇಶಿಯರು ಕೂಡಾ ಮನಸೋತಿದ್ದಾರೆ. ಆದರೆ ನಮ್ಮ ಸಮಾಜದ ಕೆಲವು ಮಂದಿ ವಿರೋಧ ಮಾಡುತ್ತಿರುವುದು ವಿಪರ್ಯಾಸ.

ದೇಶದಲ್ಲಿ 72 ಸಾವಿರ ಸಾಧು ಸಂತರು ಸಮಾಜದ ಪರಿವರ್ತನೆಗಾಗಿ ತಮ್ಮ ಮಠಗಳಲ್ಲಿ ಶಿಕ್ಷಣದ ಜೊತೆಗೆ ಧಾರ್ಮಿಕ ಸಂಸ್ಕೃತಿಯನ್ನು ಕಲಿಸುತ್ತಾ ಬಂದಿವೆ ಎಂದರು.

ಹಿಂದು ಸಮಾಜದಲ್ಲಿರುವ ಬಡಕುಟುಂಬಗಳನ್ನು ಗುರುತಿಸಿ ಅವರಿಗೆ ಆಸೆ ಆಮಿಷಗಳನ್ನೊಡ್ಡಿ ಬೇರೆ ಧರ್ಮಕ್ಕೆ ಮತಾಂತರ ಮಾಡುತ್ತಿರುವುದು ಖೇದಕರ ಸಂಗತಿ ಎಂದರು.

ವಿವಾದ ಸೃಷ್ಟಿಸಿದ ಹೇಳಿಕೆ

ದಕ್ಷಿಣ ಕನ್ನಡ (ಫೆ.9): ಕೇಂದ್ರದ ಮೋದಿ ಸರ್ಕಾರದ (Modi Govt) ವಿರುದ್ಧದ ರಾಜ್ಯದ ಕಾಂಗ್ರೆಸ್ ಸರ್ಕಾರ (Congress Govt) ನಡೆಸುತ್ತಿರುವ 'ನನ್ನ ತೆರಿಗೆ... ನನ್ನ ಹಕ್ಕು' ವಿಚಾರ ಹಸಿರಾಗಿರುವಂತೆಯೇ ಇತ್ತ ರಾಜ್ಯದ ಬಿಜೆಪಿ ಶಾಸಕರೊಬ್ಬರು ಹಿಂದೂಗಳ ತೆರಿಗೆ.. ಹಿಂದೂಗಳ ಹಕ್ಕು ಎಂಬ ಹೊಸ ವಾದದ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಹೌದು.. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು (Hindus Right ) ಹಿಂದೂಗಳ ಹಣ ಹಿಂದೂ ಅಭಿವೃದ್ಧಿಗೆ (Hindus Development) ಮಾತ್ರ ಬಳಸಬೇಕು. ಹಿಂದೂಗಳು ಕಟ್ಟಿದ ತೆರಿಗೆ ಹಣ ಇತರ ಧರ್ಮದ ಜನರಿಗೆ ಸೇರುವುದು ಅನ್ಯಾಯ ಎಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್​ ಪೂಂಜಾ (BJP MLA Harish Poonja) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 

ಶೂದ್ರರು ರಾಮಾಯಣದಂಥ ಮಹಾನ್ ಗ್ರಂಥ ಬರೆಯಬಲ್ಲರು ಎಂದು ತೋರಿಸಿಕೊಟ್ಟವರು ವಾಲ್ಮೀಕಿ ಋಷಿಗಳು: ಸಿದ್ದರಾಮಯ್ಯ

ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗ ಆಗಬೇಕು. ಹಿಂದುಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದುಗಳಿಗೆ ಆಗುವ ಅನ್ಯಾಯ. ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು. ದೇಶದಲ್ಲಿರುವ ತೆರಿಗೆ ಸಂಗ್ರಹಣದಲ್ಲಿ ಹಿಂದೂಗಳ ಪಾಲು ಎಷ್ಟು? ಇದರಲ್ಲಿ ಹಿಂದೂಗಳ ಅಭಿವೃದ್ಧಿಗೆ ಉಪಯೋಗವಾಗುತ್ತಿರುವುದು ಎಷ್ಟು? ಹಿಂದೂಗಳ ತೆರಿಗೆ ಹಿಂದುಗಳಿಗೆ ಸಲ್ಲಬೇಕು' ಎಂದು ಹರೀಶ್ ಪೂಂಜಾ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ಸಮರ್ಥಿಸಿಕೊಂಡ ಶಾಸಕ
ಇನ್ನು ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪೂಂಜಾ ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡರು. 'ಹಿಂದೂಗಳ ತೆರಿಗೆ ಹಣವನ್ನು ಹಿಂದೂಗಳ ಅಭಿವೃದ್ಧಿಗೆ ವಿನಿಯೋಗಿಸಲು ಕೇಳುವುದರಲ್ಲಿ ತಪ್ಪೇನಿದೆ. ಡಿ ಕೆ ಸುರೇಶ್ (ಕಾಂಗ್ರೆಸ್ ಸಂಸದ) ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಕಾಂಗ್ರೆಸ್ ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಪ್ರತಿಯೊಬ್ಬ ಹಿಂದೂಗಳ ಹೆಸರಿನಲ್ಲಿ ಧರ್ಮವನ್ನು ನಮೂದಿಸಿರುವುದರಿಂದ ಹಿಂದೂಗಳ ತೆರಿಗೆ ಹಣವನ್ನು ಲೆಕ್ಕಾಚಾರ ಮಾಡುವುದು ಕಷ್ಟವೇನಲ್ಲ. ತೆರಿಗೆ ವಿಷಯ ಒಂದು ಸಣ್ಣ ವಿಷಯ. ಆದರೆ ಕಾಂಗ್ರೆಸ್ ಈ ವಿಷಯವನ್ನು ಬಳಸಿಕೊಂಡು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ' ಎಂದರು.

ನಮ್ಮ ಸರ್ಕಾರದಲ್ಲಿ 40% ಕಮಿಷನ್ ಇದ್ರೆ ಕೆಂಪಣ್ಣ ದಾಖಲೆ ನೀಡಲಿ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಖಂಡನೆ
ಶಾಸಕ ಹರೀಶ್ ಪೂಂಜಾ ಪೋಸ್ಟ್​ಗೆ ವ್ಯಾಪಕ‌ ಖಂಡನೆ ವ್ಯಕ್ತವಾಗುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಇದು ಮೂರ್ಖತನದ ಪರಮಾವಧಿ. ನಮ್ಮ ದೇಶದ ಸಂವಿಧಾನ ಬೆಳ್ತಂಗಡಿ ಶಾಸಕರಿಗೆ ಗೊತ್ತಿಲ್ಲಾ ಅನಿಸುತ್ತೆ. ಶಾಸಕರಾಗೋಕೆ ಅವರು ಅರ್ಹರಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios