ಕೆ.ಆರ್‌. ನಗರ (ಮೇ.02): ಕೆ.ಆರ್‌. ನಗರ ಮತ್ತು ಸಾಲಿಗ್ರಾಮ ತಾಲೂಕಿನಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟ96 ಕುಟುಂಬಗಳಿಗೆ ಸಾ.ರಾ. ಸ್ನೇಹ ಬಳಗದ ಮೂಲಕ ತಲಾ 25 ಸಾವಿರ ನೆರವು ನೀಡುವುದಾಗಿ ಶಾಸಕ ಸಾ.ರಾ. ಮಹೇಶ್‌ ತಿಳಿಸಿದ್ದಾರೆ. 

ಸಾ.ರಾ. ಮಹೇಶ್‌ ಅವರು ಈಗಾಗಲೇ ತಾಲೂಕಿನ ಕಗ್ಗರೆಯಲ್ಲಿ ಸ್ವಂತ ಖರ್ಚಿನಲ್ಲಿ ಕೋವಿಡ್‌ ಕೇರ್‌ ಕೇಂದ್ರ ತೆರೆದು, ವೈದ್ಯರನ್ನು ನೇಮಿಸಿಕೊಂಡಿದ್ದು, ಇದೀಗ ವೈಯಕ್ತಿಕ ಪರಿಹಾರ ನೀಡಲು ಮುಂದಾಗಿರುವುದು ವಿಶೇಷ.

'ಈ ಸುಳ್ಳು ಲೆಕ್ಕ ಕೊಡಲು IAS ಬೇಕಿತ್ತಾ? SSLC ಫೇಲ್ ಆದವ ಕೊಡ್ತಾನೆ' .

ಮಿರ್ಲೆ ಗ್ರಾಮದಲ್ಲಿ ಇತ್ತೀಚೆಗೆ ಕೋವಿಡ್‌ ಸೋಂಕಿನಿಂದ ಮೃತಪಟ್ಟಗ್ರಾ.ಪಂ. ಸದಸ್ಯ ಲಕ್ಷ್ಮಣ್‌ ಕುಟುಂಬದವರಿಗೆ 25 ಸಾವಿರ ನೆರವು ನೀಡಿ ಸಾಂತ್ವನ ಹೇಳಿ ಮಾತನಾಡಿದ ಸಾ.ರಾ. ಮಹೇಶ್‌, ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಕೋವಿಡ್‌ಗೆ 96 ಮಂದಿ ಬಲಿಯಾಗಿದ್ದಾರೆ.

ಹೋದವರು ಮತ್ತೆ ಬರುವುದಿಲ್ಲ. ಆದರೆ ಕುಟುಂಬದವರಿಗೆ ನನ್ನ ಪರವಾಗಿ ಕೈಲಾದ ಸಹಾಯ ಮಾಡಬೇಕು ಎಂಬ ತೀರ್ಮಾನದಿಂದ ತಲಾ 25 ಸಾವಿರ ರು. ನೀಡುತ್ತಿದ್ದೇನೆ ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona