ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಜಿ ಟಿ ದೇವೆಗೌಡ ದೇವೇಗವಡ ರಾಜಕೀಯಕ್ಕಾಗಿ ಸಾ ರಾ ಮಹೇಶ್ ಮಹತ್ವದ ನಿರ್ಧಾರ

ಮೈಸೂರು (ಆ.29): ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್‌ ಪಕ್ಷದಲ್ಲಿದ್ದರೆ ಪಕ್ಷಕ್ಕೂ ಅನುಕೂಲ ಅವರಿಗೂ ಅನುಕೂಲ. ಅವರು ಜೆಡಿಎಸ್‌ನಲ್ಲಿದ್ದರೆ ಅವರಿಗೂ ಕ್ಷೇಮ ನಮಗೂ ಕ್ಷೇಮ ಎಂದು ಜೆಡಿಎಸ್‌ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು. 

ಜಿಟಿಡಿಗೆ ಕಾಂಗ್ರೆಸ್‌ ರತ್ನಗಂಬಳಿ : ಸೀಕ್ರೇಟ್ ಒಂದನ್ನು ಹೇಳಿ ಜೆಡಿಎಸ್ ತೊರೆಯುತ್ತಿರುವ ಗೌಡರು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜಿ.ಟಿ.ದೇವೇಗೌಡರಿಗಾಗಿ ಇನ್ನೂ ಶಬರಿಯಂತೆ ಕಾಯುತ್ತಿದ್ದೇವೆ. ಕುಮಾರಣ್ಣನ ಸೂಚನೆ ಇಲ್ಲದೆ ನಾನು ಹಾಗೂ ಮಂಡ್ಯದ ಜೆಡಿಎಸ್‌ ಮುಖಂಡರು ಸಂಪರ್ಕಿಸಿದ್ದೆವು. 

ಜಿಟಿಡಿಗೆ ನನ್ನಿಂದ ತೊಂದರೆ ಆಗುತ್ತದೆ ಅನ್ನೋದಾದರೆ ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಅದರಲ್ಲೂ ನಂಬಿಕೆ ಇಲ್ಲದಿದ್ದರೆ ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡುತ್ತೇನೆ ಎಂದರು.