'ಕೋವಿಡ್‌ ಹೆಸರಿನಲ್ಲಿ ಹಣ ಲೂಟಿ : ಅನುಮಾನ'

ಕೋವಿಡ್  ಹೆಸರಿನಲ್ಲಿ ಹಣ ಲೂಟಿ ಆಗುತ್ತಿದೆ.  ಒಂದೇ ಕೇಸ್‌ ವರ್ಕರ್‌ ಹೆಸರಿನಲ್ಲಿ ಒಂದು ಕೋಟಿ ಬಿಲ್‌ ಆಗಿದೆ. ನನಗೆ ಅನುಮಾನ ಬಂದ ಬಳಿಕ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ ಎಂದು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ. 

Sa Ra Mahesh alleges Covid scam in Mysuru snr

 ಮೈಸೂರು (ಮೇ.05):  ಕೋವಿಡ್‌ ಹೆಸರಿನಲ್ಲಿ ಹಣ ಲೂಟಿ ಆಗುತ್ತಿದೆ. ಈ ಬಗ್ಗೆ ನನಗೆ ಸಾಕಷ್ಟುಅನುಮಾನ ಬಂದಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೆಲವು ಮಾಹಿತಿ ಪ್ರದರ್ಶಿಸಿ ಮಾತನಾಡಿದ ಅವರು, 40 ಜನ ಬಿಲ್‌ ಮಾಡಲು ಡಿಸಿ ಕಚೇರಿಯಲ್ಲಿದ್ದಾರೆ. ಹೋಂ ಕ್ವಾರೈಂಟನ್‌ನಲ್ಲಿರುವವರ ಹೆಸರಿನಲ್ಲಿ ಹಣ ಮಾಡಿದ್ದಾರೆ. ಬಕೆಟ್‌, ಮನೆ ಒರೆಸುವ ಬಟ್ಟೆ, ಹೆಸರಿನಲ್ಲಿ ಬಿಲ್‌ ಹಾಕಲಾಗಿದೆ. ಇದು ಒಂದೇ ಕೇಸ್‌ ವರ್ಕರ್‌ ಹೆಸರಿನಲ್ಲಿ ಒಂದು ಕೋಟಿ ಬಿಲ್‌ ಆಗಿದೆ. ನನಗೆ ಅನುಮಾನ ಬಂದ ಬಳಿಕ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ. ಕಾನೂನು ಪ್ರಕಾರ ಹಣ ಕಟ್ಟಿನಾನು ಬಿಲ್‌ ಪಡೆದಿದ್ದೇನೆ ಎಂದರು.

7 ತಿಂಗಳಿಂದ ಈವರೆಗೂ ನನಗೆ ಮಾಹಿತಿ ಕೊಟ್ಟಿಲ್ಲ. 10ನೇ ತಿಂಗಳಿಂದ ಇಲ್ಲಿಯವರೆಗೂ ಬಿಲ್‌ಗಳನ್ನು ಕೊಟ್ಟಿಲ್ಲ. ಉಸ್ತುವಾರಿ ಸಚಿವರೇ ದಯವಿಟ್ಟು ಗಮನಿಸಿ. ಪ್ರತಿ ದಿನ ಖರ್ಚಾಗುವ ವೆಚ್ಚವನ್ನು ಜನರಿಗೆ ಮಾಹಿತಿ ನೀಡಿ. ನೀವು ಮಾಹಿತಿಯನ್ನ ಕೊಟ್ಟಿದ್ರೆ ನಾವ್ಯಾಕೆ ಆಯೋಗದ ಕದ ತಟ್ಟಬೇಕಿತ್ತು ಎಂದು ಅವರು ಪ್ರಶ್ನಿಸಿದರು.

ಮೈಸೂರು ಡೀಸಿ ವಿರುದ್ಧ ಸಾರಾ ಮತ್ತೊಂದು ಗಂಭೀರ ಆರೋಪ ...

ನಾವು ಮೈಸೂರಿಗೆ ಬರುವ ಯಾವ ಅಧಿಕಾರಿಯ ಬಗ್ಗೆಯೂ ಮಾತಾಡಲ್ಲ. ಮೈಸೂರು ಜಿಲ್ಲಾಡಳಿತ ಆಕ್ಸಿಜನ್‌ ಕೊಡಲಿಲ್ಲ ಎಂಬುದಾದ್ರೆ. ಇವರ ಮೇಲೆ 302, 306 ಪ್ರಕರಣ ದಾಖಲಿಸಬೇಕು. ಮೊನ್ನೆ ಒಂದು ಕೋಟಿ ಬಿಲ್‌ ಆಗಿರುವ ಬಗ್ಗೆ ದಾಖಲೆ ಇದೆ. ಹಾಗಿದ್ದರೇ ಈ ಹಣ ಮೈಸೂರಿನ ನಾಗರೀಕರ ತೆರಿಗೆ ಹಣ, ಲೆಕ್ಕ ಕೊಡಿ ಎಂದು ಅವರು ಆಗ್ರಹಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios