ಚಾಮರಾಜನಗರದಲ್ಲಿ ಸಂಭವಿಸಿದ ದುರಂತಕ್ಕೆ  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊಣೆ. ಅಲ್ಲಿಗೆ ಆಕ್ಸಿಜನ್ ಸರಬರಾಜು ಮಾಡದಿರುವುದೇ ಕಾರಣ ಎಂದು ಆರೋಪ ಮಾಡಿದ್ದಾರೆ. 

ಮೈಸೂರು (ಮೇ.05): ಚಾಮರಾಜನಗರ ಕೋವಿಡ್‌ ಆಸ್ಪತ್ರೆ ಐಸಿಯುನಲ್ಲಾಗಿರುವ ದುರಂತಕ್ಕೆ ಸಂಬಂಧಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿರುವ ಶಾಸಕ ಸಾ.ರಾ.ಮಹೇಶ್‌, ಮೈಸೂರು ಜಿಲ್ಲಾಧಿಕಾರಿ ಅವರೇ ಡ್ರಗ್‌ ಕಂಟ್ರೋಲರ್‌ ಮೂಲಕ ಆಕ್ಸಿಜನ್‌ ತಡೆಹಿಡಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ವಾರದ ಹಿಂದೆ ಸಭೆ ಮಾಡಿ ಪೂರೈಕೆ ಮಾಡದಂತೆ ಹೇಳಿದ್ದಾರೆ ಎಂದರು. ಇದೇ ವೇಳೆ ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆ ಸಂಬಂಧ ಮೈಸೂರು ಜಿಲ್ಲಾಡಳಿತದ ನೀಡಿರುವ ಸ್ಪಷ್ಟನೆ ಸುಳ್ಳು.

ರೋಲ್ ಮಾಡೆಲ್ ಬೇಕು - ಮಾಡೆಲ್ ಅಲ್ಲ : ರೋಹಿಣಿ ವಿರುದ್ಧ ಮತ್ತೆ ಸಾ ರಾ ಗರಂ' .

 ಚಾಮರಾಜನಗರಕ್ಕೆ ಅಗತ್ಯವಿದ್ದ 350 ಸಿಲಿಂಡರ್‌ಗೆ ಬದಲಾಗಿ ಕೇವಲ 150 ಸಿಲಿಂಡರ್‌ ಮಾತ್ರ ಚಾಮರಾಜನಗರಕ್ಕೆ ಕೊಟ್ಟಿದ್ದಾರೆ. ಡ್ರಗ್‌ ಕಂಟ್ರೋಲರ್‌ ವಜಾಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಎಲ್ಲ ಸತ್ಯಾಸತ್ಯತೆ ಹೊರ ಬರಲಿದೆ ಎಂದು ದೂರಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona