ಧಾರವಾಡ(ಅ.08): ಅಕ್ರಮವಾಗಿ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಅವರ ಸಂಬಂಧಿಗಳ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಬರೀ ತೋರಿಕೆಗೆ ಈ ದಾಳಿ ಆಗದೇ ಅವರ ಮೇಲೆ  ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದ್ದಾರೆ. 

ಪ್ರಸ್ತುತ ಡಿ.ಕೆ. ಶಿವಕುಮಾರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸುವ ಜತೆಗೆ ಜೈಲಿಗೆ ಕಳುಹಿಸಬೇಕೆಂದುರ ಮನೆಯ ಮೇಲಿನ ಸಿಬಿಐ ದಾಳಿ ಸ್ವಾಗತಾರ್ಹ ಕ್ರಮ. ಡಿಕೆಶಿ ಅಕ್ರಮ ಆಸ್ತಿಗಳ ಬಾಹು ಬಹಳ ವಿಸ್ತಾರವಿದೆ. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಿಕೆಶಿ ಮತ್ತು ಕೆಫೆ ಕಾಫಿ ಡೇ ವಿ.ಜಿ. ಸಿದ್ಧಾರ್ಥ ಅಕ್ರಮ ಗಳಿಕೆ ಮಾಡಿದ್ದರು ಎಂದು ನಾವು ಈ ಹಿಂದೆಯೇ ಆರೋಪ ಮಾಡಿದ್ದೇವು. ಅವರಿಬ್ಬರು ಸೇರಿ ಇತ್ಯಾದಿ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

'ಲೆಕ್ಕಪತ್ರ ಸರಿಯಿದ್ದರೆ ಡಿ.ಕೆ. ಶಿವಕುಮಾರ ಸಿಬಿಐಗೆ ಹೆದರಬೇಕಿಲ್ಲ'

ಡಿಕೆಶಿ ಕುಟುಂಬದ ಸದಸ್ಯರು ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಸಂಪಾದಿಸಿದ್ದು, ಸಿಬಿಐ ದಾಳಿಯಿಂದ ತಿಳಿದು ಬಂದಿದೆ. ಸಾರ್ವಜನಿಕ ಕ್ಷೇತ್ರದಲ್ಲಿರುವ ಯಾವುದೇ ಮುಖಂಡರು ಇಂಥ ದುಸ್ಸಾಹಸಕ್ಕೆ ಕೈಹಾಕದಂತೆ ಇವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು. ಅವರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದಾಗಿ ತಿಳಿಸಿದ್ದಾರೆ. 

ಉತ್ತರ ಪ್ರದೇಶದ ಹತ್ರಾಸ್‌ ನ ಮನಿಷಾ ವಾಲ್ಮೀಕಿ ಮೇಲಿನ ಅತ್ಯಾಚಾರ, ನಾಲಿಗೆ ಕತ್ತರಿಸಿ ಹೀನ ಕೃತ್ಯ ಮೆರೆದಿದ್ದು ಖೇದಕರ. ಈ ವಿಷಯವಾಗಿ ಮಾಧ್ಯಮ ಹತ್ತಿಕ್ಕುವ ಕೆಲಸ ನಾಚಿಗೇಡಿತನ. ಪ್ರಕರಣ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಜತೆಗೆ ಮನಿಷಾ ಕುಟುಂಬಕ್ಕೆ ಭದ್ರತೆ ನೀಡವಂತೆಯೂ ಹಿರೇಮಠ ಆಗ್ರಹಿಸಿದ್ದಾರೆ.

ಸಿಟಿಜನ್‌ ಫಾರ್‌ ಡೆಮಾಕ್ರಸಿ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ಹಾಗೂ ಜನ ವಿರೋಧಿ ಧೋರಣೆಗಳ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಅ. 2ರಿಂದ ಈಗಾಗಲೇ ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಇದೇ ಅ. 11ರಂದು ಈ ಜನಜಾಗೃತಿ ಅಭಿಯಾನದ ಸಮಾರೋಪ ಧಾರವಾಡದಲ್ಲಿ ನಡೆಯಲಿದೆ. ದೇಶದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಸೇರಿದಂತೆ ದೇಶಧ ವಿವಿಧ ಭಾಗಗಳ ಚಿಂತಕರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.