Asianet Suvarna News Asianet Suvarna News

ಹೈದ್ರಾಬಾದ್‌ನಿಂದ ಕಾರಿನಲ್ಲೇ ವಿಜಯಪುರಕ್ಕೆ ಆಗಮಿಸಿ ಸಂಗೀತ ಸುಧೆ ಹರಿಸಿದ್ದ ಎಸ್‌ಪಿಬಿ

2017, ಫೆ.8ರಂದು ಗುಮ್ಮಟ ನಗರಿ ವಿಜಯಪುರಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಗಾನ ಗಾರುಡಿಗ ಎಸ್‌ಪಿಬಿ| ಬಡವರು, ಮಧ್ಯಮ ಹಾಗೂ ಅಸಹಾಯಕರಿಗೆ ನೆರವು ನೀಡುವಲ್ಲಿ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ದೇಶದ ಉದ್ದಗಲಕ್ಕೂ ನಡೆಸಿಕೊಟ್ಟಿದ್ದ ಬಾಲಸುಬ್ರಮಣ್ಯಂ| 

S P Balasubrahmanyam Held Music Concert in Vijayapura
Author
Bengaluru, First Published Sep 26, 2020, 2:03 PM IST

ರುದ್ರಪ್ಪ ಆಸಂಗಿ 

ವಿಜಯಪುರ(ಸೆ.26): ಗಾನ ಗಂಧರ್ವ ದಿ.ಎಸ್‌.ಪಿ.ಬಾಲಸುಬ್ರಮಣ್ಯಂ ಅವರು ವಿಜಯಪುರದಲ್ಲಿ ತಮ್ಮ ಗಾನಸುಧೆ ಹರಿಸಿ ಎಲ್ಲರ ಮನವನ್ನು ಉಲ್ಲಾಸಗೊಳಿಸಿದ್ದರು. ಅಂಥವರ ಅಗಲಿಕೆ ಗುಮ್ಮಟ ನಗರಿ ವಿಜಯಪುರದಲ್ಲೂ ಬರ ಸಿಡಿಲು ಬಡಿದಂತಾಗಿದೆ.

ಎಸ್‌.ಬಿ.ಬಾಲಸುಬ್ರಮಣ್ಯಂ ಅವರ ಹಾಡುಗಾರಿಕೆ ಪ್ರೇಕ್ಷಕರನ್ನು, ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸಿ ಸಂಗೀತ ಲೋಕದಲ್ಲಿ ತೇಲುವಂತೆ ಮಾಡುತ್ತಿತ್ತು. ಎಸ್‌.ಪಿ. ಬಾಲಸುಬ್ರಮಣ್ಯಂ ಅವರ ಅಗಲಿಕೆ ಎಲ್ಲರನ್ನೂ ದುಃಖದ ಮಡುವಿನಲ್ಲಿ ಮುಳುಗಿಸಿದೆ. ಆದರೆ ಅವರ ನೆನಪು ಎಲ್ಲರಲ್ಲೂ ಶಾಶ್ವತ ಉಳಿಯುವಂತಾಗಿದೆ. ಗಾನ ಗಾರುಡಿಗ ದಿ.ಎಸ್‌ಪಿಬಿ ಅವರು 2017, ಫೆ.8ರಂದು ಗುಮ್ಮಟ ನಗರಿ ವಿಜಯಪುರಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.

"

ವಿಜಯಪುರದ ವಿದ್ಯಾಭಾರತಿ ಶಾಲೆಯ ಸಹಾಯಾರ್ಥ ಆಯೋಜಿಸಿದ್ದ ಸ್ವರ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಹಾಡುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದರು. ವಿಜಯಪುರದ ಡಾ.ಬಿ.ಆರ್‌.ಅಂಬೇಡ್ಕರ ಕ್ರೀಡಾಂಗಣದಲ್ಲಿ ಸಜ್ಜುಗೊಳಿಸಿದ್ದ ವೇದಿಕೆಯಲ್ಲಿ ಸುಮಾರು 4 ತಾಸುಗಳವರೆಗೆ ಗಾನಲಹರಿ ಹರಿಸಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದರು. ಅವರ ಅಂದಿನ ಹಾಡುಗಳನ್ನು ಗುಮ್ಮಟ ನಗರಿ ಜನರು ಇಂದಿಗೂ ಮೆಲುಕು ಹಾಕುತ್ತಿದ್ದಾರೆ.

ಎಸ್‌ಪಿಬಿ ಧ್ವನಿ, ಸ್ವರ, ಆಲಾಪ, ಸಜ್ಜನಿಕೆ, ಬದುಕಿನ ಕ್ರಮ ಒಂದಿಡೀ ತಲೆಮಾರಿಗೇ ಮಾದರಿ:ಮಂಡ್ಯ ರಮೇಶ್‌

ಸ್ವರ ಸಂಗೀತ ಲೋಕದ ಮೋಡಿಗಾರರೆಂದೇ ಖ್ಯಾತರಾಗಿದ್ದ ಎಸ್‌ಪಿಬಿ ಅವರ ಹಾಡು ಆಲಿಸಲು ಡಾ.ಬಿ.ಆರ್‌. ಅಂಬೇಡ್ಕರ ಕ್ರೀಡಾಂಗಣ ಕಲಾಪೋಷಕರಿಂದ ಕಿಕ್ಕಿರಿದು ತುಂಬಿತ್ತು. ಅದು ಈಗ ನೆನಪಾಗಿ ಉಳಿದಿದೆ. ಎಸ್‌ಪಿಬಿ ಅವರು ಒಂದೇ ಬಾರಿ ವಿಜಯಪುರ ನಗರಕ್ಕೆ ಆಗಮಿಸಿದ್ದರು. ಅದು ಶಾಶ್ವತ ದಾಖಲೆಯಾಗಿ ಉಳಿಯಿತು.

ಕಾರಿನಲ್ಲಿ ಬಂದಿದ್ದ ಗಾರುಡಿಗ:

ಗಾನ ಗಾರುಡಿಗ ದಿ.ಎಸ್‌.ಪಿ. ಬಾಲಸುಬ್ರಮಣ್ಯಂ ಬಡವರು, ಮಧ್ಯಮ ಹಾಗೂ ಅಸಹಾಯಕರಿಗೆ ನೆರವು ನೀಡುವಲ್ಲಿ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ದೇಶದ ಉದ್ದಗಲಕ್ಕೂ ನಡೆಸಿಕೊಟ್ಟಿದ್ದಾರೆ. ಆದರೆ ಒಂದು ಶಾಲೆಯ ಸಹಾಯಾರ್ಥ ಎಸ್‌ಪಿಬಿ ಅವರು ವಿಜಯಪುರಕ್ಕೆ ಆಗಮಿಸಿದ್ದರು. ಇದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಸ್‌ಪಿಬಿ ಶಿಕ್ಷಣ ಪ್ರೇಮಿಯೂ ಆಗಿದ್ದರು ಎಂಬುವುದನ್ನು ಬೇರೆ ಹೇಳಬೇಕಿಲ್ಲ.

"

ದೇವರು ನಮ್ಮೆಲ್ಲರ ಪ್ರಾರ್ಥನೆಗಳನ್ನು ವ್ಯರ್ಥ ಮಾಡಿದ: ಅನಂತ್ ನಾಗ್

ಚೆನ್ನೈನಿಂದ ಹೈದ್ರಾಬಾದ್‌ವರೆಗೆ ವಿಮಾನದ ಮೂಲಕ ಆಗಮಿಸಿದ ಎಸ್‌ಪಿಬಿ ಹೈದ್ರಾಬಾದ್‌ನಿಂದ ಕಾರಿನಲ್ಲಿ ಸುದೀರ್ಘ ಪ್ರಯಾಣ ಬೆಳೆಸಿ ವಿಜಯಪುರ ನಗರಕ್ಕೆ ಬಂದಿದ್ದರು. ಅವರು ಇತ್ತೀಚಿನ 15 ವರ್ಷದೊಳಗೆ ಕಾರಿನಲ್ಲಿ ಪ್ರಯಾಣಿಸಿ ಗುಮ್ಮಟ ನಗರಿ ವಿಜಯಪುರಕ್ಕೆ ಆಗಮಿಸಿದ್ದರು. ಎಸ್‌ಪಿಬಿ ಅವರು ಈಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರ ನೆನಪು ಮಾತ್ರ ಎಲ್ಲರಲ್ಲೂ ಅಚ್ಚಳಿಯದೇ ಉಳಿಯುವಂತಾಗಿದೆ.
 

Follow Us:
Download App:
  • android
  • ios