ಮಂಗಳೂರು(ಜ.14): ಸಚಿವನಾಗುವ ಸಂತಸದಲ್ಲಿ ಸುಳ್ಯ ಶಾಸಕ ಅಂಗಾರ ಅವರು ಬುಧವಾರ ಬೆಂಗಳೂರಿನಲ್ಲಿ ತನ್ನ ಬೆಂಬಲಿಗರಿಗೆ ತಾನೇ ಸ್ವತಃ ಅಡುಗೆ ಮಾಡಿ ಬಡಿಸಿದ್ದಾರೆ. ಅಂಗಾರ ಅವರು ಅಡುಗೆ ತಯಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲಿ ವೈರಲ್‌ ಆಗಿದೆ.

ಗುರುವಾರ ವಿಧಾನಸೌಧದಲ್ಲಿ ಎಸ್‌ಸಿ ಎಸ್‌ಟಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಅಂಗಾರ ಅವರು ಸಭೆ ನಡೆಸಲು ಮಂಗಳವಾರವೇ ಆಗಮಿಸಿದ್ದರು. ಅಂಗಾರ ಅವರು ಸಚಿವರಾಗುತ್ತಾರೆ ಎಂಬ ಸುದ್ದಿ ತಿಳಿದ ಅವರ ಬೆಂಬಲಿಗರು ಅಂದು ರಾತ್ರಿಯೇ ಬೆಂಗಳೂರಿಗೆ ಹೊರಟು ಬಂದಿದ್ದರು.

ಧರ್ಮಸ್ಥಳ ಕ್ಷೇತ್ರದಿಂದ ಶ್ರೀರಾಮ ಮಂದಿರಕ್ಕೆ 25 ಲಕ್ಷ ನಿಧಿ: ವೀರೇಂದ್ರ ಹೆಗ್ಗಡೆ

ಮರುದಿನ ಬುಧವಾರ ಬೆಳಗ್ಗೆ ಅಂಗಾರ ಸಚಿವರಾಗುವುದು ಖಚಿತವಾದ ಕೂಡಲೇ ಮತ್ತಷ್ಟುಬೆಂಬಲಿಗರು ಆಗಮಿಸಿದ್ದರು. ಇವರಿಗೆಲ್ಲ ಅಂಗಾರ ಅವರು ಬೆಂಗಳೂರಿನ ಶಾಸಕರ ಭವನದಲ್ಲಿ ಸ್ವತಃ ಅಡುಗೆ ತಯಾರಿಸಿ ಬಡಿಸಿದ್ದಾರೆ.