ಸರ್ಕಾರದ ಯೋಜನೆಗಳ ಸದ್ಬಳಕೆಯಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ: ಶಾಸಕ
ಇಲ್ಲಿನ ಸ್ಥಳೀಯ ಶಾಸಕ ಎಚ್.ವಿ. ವೆಂಕಟೇಶ್ ಅವರ ತಂದೆ, ಮಾಜಿ ಸಚಿವ ವೆಂಕಟರಮಣಪ್ಪ ಅವರು ಭಾನುವಾರ ತಾಲೂಕಿನ ದೊಮ್ಮತಮರಿ ಗ್ರಾಪಂ ವ್ಯಾಪ್ತಿಯ ಗುಮ್ಮಘಟ್ಟ ಇತರೆ ಗ್ರಾಮಗಳಲ್ಲಿ ವಿವಿಧ ಯೋಜನೆಯ ಪ್ರಗತಿ ಕಾಮಗಾರಿಗಳನ್ನು ವೀಕ್ಷಿಸಿದರು.
ಪಾವಗಡ : ಇಲ್ಲಿನ ಸ್ಥಳೀಯ ಶಾಸಕ ಎಚ್.ವಿ. ವೆಂಕಟೇಶ್ ಅವರ ತಂದೆ, ಮಾಜಿ ಸಚಿವ ವೆಂಕಟರಮಣಪ್ಪ ಅವರು ಭಾನುವಾರ ತಾಲೂಕಿನ ದೊಮ್ಮತಮರಿ ಗ್ರಾಪಂ ವ್ಯಾಪ್ತಿಯ ಗುಮ್ಮಘಟ್ಟ ಇತರೆ ಗ್ರಾಮಗಳಲ್ಲಿ ವಿವಿಧ ಯೋಜನೆಯ ಪ್ರಗತಿ ಕಾಮಗಾರಿಗಳನ್ನು ವೀಕ್ಷಿಸಿದರು.
ಬೆಳಗ್ಗೆ ಕಾರ್ಯಕ್ರಮ ನಿಮಿತ್ತ ತಾಲೂಕಿನ ದೊಮ್ಮತ ಮರಿ ಗ್ರಾಪಂ ವ್ಯಾಪ್ತಿಯ ಗುಮ್ಮ ಘಟ್ಟ ಹಾಗೂ ಸುತ್ತಮುತ್ತ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆ ನಲ್ಲಿ ಅಳವಡಿಕೆಯ ಜೆಜೆಎಂ ಹಾಗೂ ವಿವಿಧ ಯೋಜನೆಯ ಜಿಪಂನ ರಸ್ತೆ , ಸೇತುವೆ ಕಾಮಗಾರಿ ಮತ್ತು ಶಾಲಾ ಕಾಲೇಜು ಕಟ್ಟಡಗಳ ಪ್ರಗತಿಯ ವೀಕ್ಷಣೆ ಸೇರಿದಂತೆ ನರೇಗಾ ಇತರೆ ಯೋಜನೆಯ ಕಾಮಗಾರಿಗಳ ವಿವರ ಪಡೆದರು.
ಬಳಿಕ ಸರ್ಕಾರದ ಯೋಜನೆಗಳು ಸದ್ಬಳಕೆ ಆಗಬೇಕು. ಗ್ರಾಮೀಣ ಪ್ರದೇಶ ಪ್ರಗತಿ ಕಾಣಬೇಕಾದರೆ, ಮೊದಲು ರಸ್ತೆ ಹಾಗೂ ಶಾಲಾ ಕಾಲೇಜು ಅಂಗನವಾಡಿ ಪ್ರಗತಿ ಕಾಣಬೇಕು. ನರೇಗಾ ಒಂದು ಅತ್ಯುತ್ತಮ ಯೋಜನೆ, ಇದರ ಅಡಿಯಲ್ಲಿ ರೈತರು ನೀರಾವರಿ ಮತ್ತು ಖುಷ್ಕಿ ಜಮೀನುಗಳಲ್ಲಿ ಬದು ಮತ್ತು ಕಂದಕ ಹಾಗೂ ಹಳ್ಳಕೊಳ್ಳಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ಗ್ರಾಪಂನಿಂದ ಅವಕಾಶ ಕಲ್ಪಿಸಿಕೊಡಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ರೈತ ಮತ್ತು ಗ್ರಾಮೀಣ ಜನತೆಯ ಪ್ರಗತಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಸರ್ಕಾರದ ಯೋಜನೆ ಸರಿಯಾದ ರೀತಿಯಲ್ಲಿ ಸದ್ಬಳಿಕೆ ಆದರೆ ಗ್ರಾಮೀಣ ಪ್ರಗತಿಗೆ ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ತಾಪಂ ಮಾಜಿ ಸದಸ್ಯ ರವಿಕುಮಾರ್, ಗುಮ್ಮಘಟ್ಟ ಈಶ್ವರಪ್ಪ ಸಂಜೀವರಾಯಪ್ಪ, ಹನುಮಂತರಾಯಪ್ಪ, ಮತ್ತಿತರರು ಇದ್ದಾರೆ.