ರುದ್ರಮುನೇಶ್ವರ ಮಠದ ಹುಂಡಿಗೆ ಕನ್ನ

https://static.asianetnews.com/images/authors/b348a094-0bef-5801-a1f6-61e57071185f.jpg
First Published 5, Aug 2018, 3:45 PM IST
Rudhra muneshwara temple treasure box theft
Highlights

ಇಬ್ಬರು ಕಳ್ಳರು ಮಠದಲ್ಲಿನ ಕಾಣಿಕೆ ಹುಂಡಿಯನ್ನು ಒಡೆದು ಅಪಾರ ಪ್ರಮಾಣದ ಹಣವನ್ನು ದೋಚಿರುವ ದೃಶ್ಯ ಮಠದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು.

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೇಶ್ವರ ಮಠದಲ್ಲಿ ಕಾಣಿಕೆ ಹುಂಡಿಯಲ್ಲಿನ ಅಪಾರ ಪ್ರಮಾಣದ ಹಣ ಕಳ್ಳತನ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಶುಕ್ರವಾರ ಸಂಜೆ ಮಠದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ತಡರಾತ್ರಿ ಇಬ್ಬರು ಕಳ್ಳರು ಹುಂಡಿಯನ್ನು ಹೊಡೆದು ಹಣವನ್ನು ಕದ್ದು ಹೋಗುವ ಸಂದರ್ಭದಲ್ಲಿ ಗ್ರಾಮಸ್ಥರು ಕಳ್ಳರನ್ನು ಹಿಡಿಯಲುಯತ್ನಿಸಿದ್ದಾರೆ. ಆದರೆ ಕಳ್ಳರು ಗ್ರಾಮಸ್ಥರ ಕೈಗೆ ಸಿಗದೇ ಬೈಕ್ ಮತ್ತು ಹಣವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬೈಕ್‌ನಲ್ಲಿ ವ್ಯಕ್ತಿಯ ಬ್ಯಾಂಕ್ ಪಾಸ್ ಬುಕ್ ಹಾಗೂ ಇತರೆ ದಾಖಲೆಗಳು ಪತ್ತೆಯಾಗಿದ್ದು. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಆಧರಿಸಿ ಪೋಲಿಸ್‌ರು ತನಿಖೆ ನಡೆಸುತ್ತಿದ್ದು. ಕಳ್ಳರ ಪತ್ತೆಗಾಗಿ ಬಲೆ ಬಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪೋಲಿಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader