ರಾಯಚೂರು: ಆರ್ಟಿಪಿಎಸ್‌ ಬಂಕರ್‌ ಕುಸಿತ, ತಪ್ಪಿದ ಅನಾಹುತ

ರಾಜ್ಯದಾದ್ಯಂತ ಭಾರಿ ಮಳೆಯಿಂದಾಗಿ ಜಲ, ಪವನ ಮೂಲದಿಂದ ವಿದ್ಯುತ್‌ ಉತ್ಪಾದನೆ 

RTPS Bunker Collapse in Raichur grg

ರಾಯಚೂರು(ಆ.11): ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಕಲ್ಲಿದ್ದಲು ಬಂಕರ್‌ ಬುಧವಾರ ಬೆಳಗ್ಗೆ ಕುಸಿದಿದ್ದು, ದೇವರ ದಯೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಆರ್ಟಿಪಿಎಸ್‌ನ ಒಟ್ಟು ಎಂಟು ಘಟಕಗಳಿಂದ ವಿದ್ಯುತ್‌ ಉತ್ಪಾದಿಸುವುದಕ್ಕಾಗಿ ಕಲ್ಲಿದ್ದಲನ್ನು ಬಳಸಲು ಒಟ್ಟು ಆರು ಫೀಡರ್‌ಗಳಿದ್ದು ಅವುಗಳಲ್ಲಿ ಒಂದು ಮತ್ತು ಎರಡನೇ ಘಟಕಗಳಿಗೆ ಕಲ್ಲಿದ್ದಲು ಸರಬರಾಜು ಮಾಡುವ ಫೀಡರ್‌ನ ಬಂಕರ್‌ ಕುಸಿದಿದ್ದರಿಂದ ಘಟಕದ ನಿಯಂತ್ರಣಾ ಕೇಂದ್ರದ ಮೇಲ್ಛಾವಣಿ ಜಖಂಗೊಂಡಿದೆ. ಎಲ್ಲೆಡೆ ಮಳೆಯಾಗುತ್ತಿರುವುದರಿಂದ ಉಷ್ಣ ವಿದ್ಯುತ್‌ ಸ್ಥಾವರದ ಬೇಡಿಕೆಯಿಲ್ಲದಕ್ಕೆ ಆರ್ಟಿಪಿಎಸ್‌ನ ಎಲ್ಲ ಎಂಟು ಘಟಕಗಳನ್ನು ಬಂದ್‌ ಮಾಡಿದ್ದರಿಂದ ಬಂಕರ್‌ ಕುಸಿದರು ಸಹ ಯಾವುದೇ ರೀತಿಯ ಪ್ರಾಣಹಾನಿಯು ನಡೆದಿಲ್ಲ.

ಮೂರು ದಶಕಗಳ ಹಿಂದೆ ಆರ್ಟಿಪಿಎಸ್‌ ನಿರ್ಮಾಣದ ಸಮಯದಲ್ಲಿಯೇ ಇವುಗಳನ್ನು ನಿರ್ಮಿಸಲಾಗಿತ್ತು ಅದ್ದರಿಂದ ಈ ಫೀಡರ್‌ನ ಬಂಕರ್‌ ಹಳೆಯದಾಗಿದ್ದವು ಇದರ ಜೊತೆಗೆ ಎಲ್ಲೆಡೆ ಮಳೆಯಾಗುತ್ತಿರುವುದರಿಂದ ದೇಶದ ವಿವಿಧ ಕಲ್ಲಿದ್ದಲು ಗಣಿ ಕಂಪನಿಗಳಿಂದ ಬರುತ್ತಿರುವ ತೋಯ್ದ ಕಲ್ಲಿದ್ದಲನ್ನು ಫೀಡರ್‌ ಮೂಲಕ ಸರಬರಾಜು ಮಾಡಿದ ಕಾರಣಕ್ಕೆ ಬಂಕರ್‌ ಕುಸಿಯಲು ಕಾರಣವಾಗಿದೆ ಎಂದು ಪ್ರಾಥಮಿಕ ಮಾಹಿತಿಯನ್ನು ಕೆಪಿಸಿಎಲ್‌ ಅಧಿಕಾರಿಗಳು ಕಲೆಹಾಕಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹಾನಿ ಹಾಗೂ ಹಳೆ ನಿರ್ಮಾಣವು ಸಹ ಆಗಿರುವುದರಿಂದ ಯಾವ ರೀತಿಯಾಗಿ ದುರಸ್ತಿ ಮಾಡಬೇಕು ಎನ್ನುವುದನ್ನು ತಜ್ಞರು ಅವಲೋಕಿಸುತ್ತಿದ್ದಾರೆ.

JAL JEEVAN MISSION : ಅವೈಜ್ಞಾನಿಕ ಕಾಮಗಾರಿ; ಹೈವೇ ರಸ್ತೆ ಅಗೆದು ಬಿಟ್ಟು ಹೋದ ಗುತ್ತಿಗೆದಾರ!

ಉಷ್ಣ ವಿದ್ಯುತ್‌ ಘಟಕಗಳೆಲ್ಲವು ಬಂದ್‌

ರಾಜ್ಯದಾದ್ಯಂತ ಭಾರಿ ಮಳೆಯಿಂದಾಗಿ ಜಲ, ಪವನ ಮೂಲದಿಂದ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಬೇಡಿಕೆ ಇಲ್ಲದ ಕಾರಣಕ್ಕೆ ಉಷ್ಣ ವಿದ್ಯುತ್‌ ಸ್ಥಾವರಗಳ ಎಲ್ಲ ಘಟಕಗಳನ್ನು ಬಂದ್‌ ಮಾಡಲಾಗಿದೆ. ಆರ್ಟಿಪಿಎಸ್‌ನ 8, ವೈಟಿಪಿಎಸ್‌ನ 2 ಮತ್ತು ಬಿಟಿಪಿಎಸ್‌ನ 3 ಘಟಕಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಬೇಡಿಕೆಯಾನುಸಾರ ಘಟಕಗಳನ್ನು ಆರಂಭಿಸುವ ಸಾಧ್ಯತೆಗಳಿವೆ.
 

Latest Videos
Follow Us:
Download App:
  • android
  • ios