Jal Jeevan Mission : ಅವೈಜ್ಞಾನಿಕ ಕಾಮಗಾರಿ; ಹೈವೇ ರಸ್ತೆ ಅಗೆದು ಬಿಟ್ಟು ಹೋದ ಗುತ್ತಿಗೆದಾರ!

  • ಜಲಜೀವನ ಯೋಜನೆಯ ಕಾಮಗಾರಿ ಅವೈಜ್ಞಾನಿಕ
  • ಕಾಮಗಾರಿ ಮಾಡಿದ ಗುತ್ತಿಗೆದಾರ ವಿರುದ್ಧ ಗ್ರಾಮಸ್ಥರು ಆಕ್ರೋಶ
  • ಟೆಂಡರ್ ‌ನಿಯಮ ಪಾಲನೆ ಮಾಡದೇ ಕಾಮಗಾರಿ ಮಾಡಿದ ಗುತ್ತಿಗೆದಾರ
  • ರಾಜ್ಯ ಹೆದ್ದಾರಿ ಅಗೆದು ಬಿಟ್ಟು ಹೋದ ಗುತ್ತಿಗೆದಾರ
  • PWD ಅಧಿಕಾರಿಗಳ ಅನುಮತಿ ‌ಇಲ್ಲದೆ ರಾಜ್ಯ ಹೆದ್ದಾರಿ ರಸ್ತೆ ಅಗೆದ ಗುತ್ತಿಗೆ
Jal Jeevan Mission Unscientific work raichuru rav

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಆ.11) : ಜಿಲ್ಲೆಯಾದ್ಯಂತ ಜಲಜೀವನ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಲ್ಲಿ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯ ಬಹುತೇಕ ಗುತ್ತಿಗೆದಾರರು ತಮ್ಮ ಮನಬಂದಂತೆ ಕಾಮಗಾರಿ ನಡೆಸಿದ್ದಾರೆ. ಅದರಲ್ಲೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕರಡಿಗುಡ್ಡ ಗ್ರಾಮದ ಬಳಿಯ ಜಲ ಜೀವನ ಮಿಷನ್(Jal Jeevan Mission) ಯೋಜನೆಗಾಗಿ ರಾಜ್ಯ ಹೆದ್ದಾರಿ ಅಗೆದು ಹಾಗೇ ಬಿಟ್ಟಿದ್ದಾರೆ. ಇದು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆ ಆಗಿದೆ. ಪ್ರತಿಯೊಂದು ‌ಮನೆಗೂ ಶುದ್ಧ ಕುಡಿಯುವ ನೀರು(Drinking water) ಕೊಡುವ ಮಹಾ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಲಜೀವನ ಮಿಷನ್ ‌ಯೋಜನೆ ಜಾರಿಗೆ ಬಂದಿದೆ. ಆದ್ರೆ ಕೆಲ ಗುತ್ತಿಗೆದಾರರು ‌ಮಾತ್ರ ಮನಬಂದಂತೆ ‌ರಸ್ತೆಗಳು ಅಗೆದು ಪೈಪ್ ಗಳು ಹಾಕಿ ಹತ್ತಾರು ಸಮಸ್ಯೆಗಳು ಉಂಟು ಮಾಡುತ್ತಿದ್ದಾರೆ. 

ರಾಯಚೂರು: ಹಳ್ಳ ಹಿಡಿದ ಜಲಜೀವನ ಮಿಷನ್ ಕಾಮಗಾರಿ

 ರಾಜ್ಯ ಹೆದ್ದಾರಿ ಅಗೆದು ಕೈ ಬಿಟ್ಟ ಗುತ್ತಿಗೆದಾರ : 

ರಾಯಚೂರು(Raichur) ಜಿಲ್ಲೆ ದೇವದುರ್ಗ(Devadurga) ತಾಲೂಕಿನ ‌ಕರಡಿಗುಡ್ಡ(Karadigudda)ದ ಬಳಿ ಜಲಜೀವನ ಮಿಷನ್ ‌ಯೋಜನೆ(Jal Jeevan Mission)ಯ ಕಾಮಗಾರಿ ನಡೆದಿದೆ. 1 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮದ ಪ್ರತಿಯೊಂದು ‌ಮನೆಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ರೆ ಗುತ್ತಿಗೆ ಪಡೆದ ಗುತ್ತಿಗೆದಾರ ಯಾರ ಅನುಮತಿಯೂ ಇಲ್ಲದೆ ಕಲ್ಮಲಾ- ತಿಂಥಣಿ(Kalmala-Tintani) ರಾಜ್ಯ ಹೆದ್ದಾರಿ ಅಗೆದು ಕೈಬಿಟ್ಟಿದ್ದಾನೆ. ಹೀಗಾಗಿ ವಾಹನ ಸವಾರರು ‌ಗುತ್ತಿಗೆದಾರನ ವಿರುದ್ಧ ಹಿಡಿಶಾಪ ಹಾಕುತ್ತಾ ಓಡಾಟ ‌ನಡೆಸಿದ್ದಾರೆ. 

 ಅವೈಜ್ಞಾನಿಕ ಕಾಮಗಾರಿ ಹೇಗೆ ಆಗುತ್ತಿದೆ: 

ಟೆಂಡರ್ ನಿಯಮದಂತೆ ರಾಜ್ಯ ಹೆದ್ದಾರಿ ಅಗೆದು ಕಾಮಗಾರಿ ಮಾಡಬೇಕು ಅಂದ್ರೆ ಕಡ್ಡಾಯವಾಗಿ ‌PWD ಇಲಾಖೆಯ ಅನುಮತಿ ‌ಪಡೆಯಬೇಕು. ಆದ್ರೆ ಗುತ್ತಿಗೆದಾರ ಯಾವುದೇ ‌ಅನುಮತಿ ಪಡೆಯದೇ ರಾಜ್ಯ ಹೆದ್ದಾರಿ ಅಗೆದು ಪೈಪ್ ಹಾಕಿ ಕೈಬಿಟ್ಟಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಗಳ ಓಡಾಟ ಇರುವುದರಿಂದ ರಸ್ತೆಯ ಅಕ್ಕ- ಪಕ್ಕದ 10 ಅಡಿ ದೂರದಲ್ಲಿ ನೀರಿನ ಪೈಪ್ ಗಳು ಹಾಕಬೇಕು. ಆದ್ರೆ ಗುತ್ತಿಗೆದಾರ ಕೇವಲ ರಸ್ತೆಯ ಎರಡು ಅಡಿ ದೂರದಲ್ಲಿ ಪೈಪ್ ಗಳು ಹಾಕಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ ಮಾಡಿದ್ರೆ, ನೀರಿನ ಪೈಪ್ ಗಳು ಒಡೆದು ಹೋಗುತ್ತವೆ. ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ವಿರುದ್ಧ ತನಿಖೆ ನಡೆಸಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.

ಕರ್ನಾಟಕದಲ್ಲಿ ನಿತ್ಯ 7,000 ಮನೆಗೆ ನಲ್ಲಿ ನೀರು ಸಂಪರ್ಕ: ಸಿಎಂ ಬೊಮ್ಮಾಯಿ

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರತಿಯೊಬ್ಬರೂ ಕುಡಿಯುವ ನೀರು ನೀಡುವ ಸಲುವಾಗಿ ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ. ಆದ್ರೆ ಇದೇ ಬಂಡವಾಳ ‌ಮಾಡಿಕೊಂಡ ಕೆಲ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸಾಮೀಲಾಗಿ ಯೋಜನೆಯಲ್ಲಿ ಹಣ ಲೂಟಿ ಮಾಡುವ ಕೆಲಸ ನಡೆಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ‌ಮಾಡಿ ಇಂತಹ ಅವೈಜ್ಞಾನಿಕ ‌ಕಾಮಗಾರಿ‌ ಮಾಡುತ್ತಿರುವ ಗುತ್ತಿಗೆದಾರ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.

Latest Videos
Follow Us:
Download App:
  • android
  • ios