*   ಫೆ. 2ರಿಂದ ಪ್ರಾರಂಭವಾಗಿವೆ 5 ಸೇವೆ*  ಇನ್ನುಳಿದ 24 ಸೇವೆ ತಿಂಗಳಲ್ಲಿ ಲಭ್ಯ*  ಭ್ರಷ್ಟಾಚಾರ, ಏಜೆಂಟರಿಗೆ ಕಡಿವಾಣ ಹಾಕುವುದು ಮುಖ್ಯ ಉದ್ದೇಶ 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.09):  ಏಜೆಂಟರ್‌ ಹಾವಳಿಗೆ ಕಡಿವಾಣ ಹಾಕಲು ಹಾಗೂ ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಪ್ರಾದೇಶಿಕ ಸಾರಿಗೆ ಇಲಾಖೆ(Regional Transport Department) ಮುಂದಾಗಿದ್ದು ಆನ್‌ಲೈನ್‌ ಸೇವೆ ಆರಂಭಿಸಿದೆ. ಸದ್ಯ 5 ಸೇವೆ ಮಾತ್ರ ಆನ್‌ಲೈನ್‌ನಲ್ಲಿ ದೊರೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಉಳಿದ 24 ಸೇವೆಗಳು ಲಭ್ಯವಾಗಲಿವೆ.

ರಾಜ್ಯಾದ್ಯಂತ(Karnataka) ಇರುವ ಆರ್‌ಟಿಒ ಕಚೇರಿಗಳಲ್ಲಿ(RTO Office) ಏಜೆಂಟರ್‌ ಹಾವಳಿ ಹೆಚ್ಚಾಗಿದ್ದು, ಈ ಕಚೇರಿ ಭ್ರಷ್ಟಾಚಾರ(Corruption) ಕೂಪವೆಂಬ ಆರೋಪವಿದೆ. ಲರ್ನಿಂಗ್‌ ಲೈಸನ್ಸ್‌ ಸೇರಿದಂತೆ ಯಾವುದೇ ಕೆಲಸಕ್ಕೆ ಹೋದರೂ ಇಂತಿಷ್ಟು ಹಣ ನಿಗದಿಯಾಗಿರುತ್ತಿತ್ತು. ಈ ಹಿನ್ನೆಲೆ ಎಲ್ಲ ಸೇವೆಗಳನ್ನು ಆನ್‌ಲೈನ್‌ನಲ್ಲೇ ಮಾಡಲು ಸರ್ಕಾರ ಕ್ರಮಕೈಗೊಂಡಿದೆ.

Bengaluru Traffic Police: ಹಳೆ ಬಾಕಿ ವಸೂಲಿಗೆ RTO ಕಚೇರಿ ಬಳಿ ಪೊಲೀಸರ ಠಿಕಾಣಿ

ಸದ್ಯ 5 ಸೇವೆ:

2021ರ ನ. 1ರಿಂದಲೇ ಎಲ್ಲ ಸೇವೆಗಳು ಆನ್‌ಲೈನ್‌ನಲ್ಲೇ(Online) ಲಭ್ಯವಾಗುವಂತೆ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಕೆಲವೊಂದು ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ. ಫೆ. 2ರಿಂದ ರಾಜ್ಯದ 65 ಆರ್‌ಟಿಒ ಕಚೇರಿಗಳಲ್ಲಿ ಲರ್ನಿಂಗ್‌ ಲೈಸನ್ಸ್‌, ಲೈಸನ್ಸ್‌, ವಿಳಾಸ ಅಥವಾ ಹೆಸರು ಬದಲಾವಣೆ, ಡುಪ್ಲಿಕೇಟ್‌ ಲೈಸನ್ಸ್‌, ಲೈಸನ್ಸ್‌ ರಿನ್ಯೂವಲ್‌ ಸೇವೆಗಳು ಆನ್‌ಲೈನ್‌ನಲ್ಲಿ ಸಿಗುತ್ತಿವೆ. ಆಧಾರ್‌ ಕಾರ್ಡ್‌ ಅಥವಾ ತಮ್ಮ ಹೆಸರಲ್ಲಿರುವ ಮೊಬೈಲ್‌ ನಂಬರ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಅರ್ಜಿ ತುಂಬಿದಾಗ ಆಧಾರ್‌ ಕಾರ್ಡ್‌ ನಂಬರ್‌ ಕೇಳುತ್ತದೆ. ಅದನ್ನು ನಮೂದಿಸಿದರೆ ಒಟಿಪಿ ಬರುತ್ತದೆ. ಆ ಒಟಿಪಿ ಅರ್ಜಿಯಲ್ಲಿ ನಮೂದಿಸಿ ಸಬ್ಮಿಟ್‌ ಮಾಡಿದರೆ ಮುಗಿತು. ಆರ್‌ಟಿಒ ಕಚೇರಿಯಲ್ಲಿ ಅದನ್ನು ಪರಿಶೀಲಿಸಿ ನಿಮ್ಮ ವಿಳಾಸಕ್ಕೆ ಲೈಸನ್ಸ್‌ ಅಥವಾ ನೀವು ಬಯಸಿದ ಸೇವೆ ಬರುತ್ತದೆ.

ತಿಂಗಳಲ್ಲಿ ಉಳಿದವು ಲಭ್ಯ:

ಇನ್ನುಳಿದ ನಿರ್ವಾಹಕ ಲೈಸನ್ಸ್‌, ಅಂತಾರಾಷ್ಟ್ರೀಯ ಚಾಲನಾ ಪರವಾನಗಿ, ವಾಹನ ಮಾಲಿಕತ್ವ ಬದಲಾವಣೆ, ಕಂತು ಕರಾರು ಒಪ್ಪಂದ ಮುಂದುವರಿಕೆ, ತಾತ್ಕಾಲಿಕ ನೋಂದಣಿ, ವಾಹನಕ್ಕೆ ನಿರಾಕ್ಷೇಪಣಾ ಪ್ರಮಾಣ, ಮೋಟಾರ್‌ ಕ್ಯಾಬ್‌ಗೆ ಪರ್ಮಿಟ್‌, ಸರಕು ಸಾಗಾಣಿ ವಾಹನದ ಪರವಾನಗಿ ನವೀಕರಣ ಸೇರಿ ಉಳಿದ 24 ಸೇವೆಗಳು ಕೂಡ ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲೇ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಸೇವೆಗಳಿನ್ನು ತಾಂತ್ರಿಕ ಸಮಸ್ಯೆಯಿಂದ ಆನ್‌ಲೈನ್‌ನಲ್ಲಿಲ್ಲ. ಈ ಸೇವೆಗಳು ಆನ್‌ಲೈನ್‌ನಲ್ಲೇ ಸಿಗಬೇಕೆಂದರೆ ಇನ್ನೊಂದು ತಿಂಗಳು ಕಾಯಬೇಕು ಎಂದು ಇಲಾಖೆಯ ಮೂಲಗಳು ತಿಳಿಸುತ್ತವೆ.

ಒಟ್ಟಿನಲ್ಲಿ ಆರ್‌ಟಿಒ ಕಚೇರಿಗೆ ಅಲೆದಾಟ ತಪ್ಪಿಸಲು ಹಾಗೂ ಏಜೆಂಟರ್‌(Agents) ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ಸಿಗಲಿದೆ.

Driving License : ಡ್ರೈವಿಂಗ್ ಲೈಸನ್ಸ್ ನವೀಕರಣ ಬಹಳ ಸುಲಭ, ಎಲ್ಲವೂ ಆನ್ ಲೈನ್

ಫೆ. 2ರಿಂದ ಆರ್‌ಟಿಒದ 5 ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಿವೆ. ಅಲ್ಲಿಯೇ ಅರ್ಜಿ ಗುಜರಾಯಿಸಿದರೆ ಮುಗಿತು. ನಾವು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಇನ್ನುಳಿದ 24 ಸೇವೆಗಳು ಇನ್ನೊಂದು ತಿಂಗಳಲ್ಲಿ ಆನ್‌ಲೈನ್‌ನಲ್ಲೇ ಸಿಗುವಂತೆ ಮಾಡಲಾಗುತ್ತಿದೆ. ಇದರಿಂದ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಜತೆಗೆ ಏಜೆಂಟರ್‌ ಹಾವಳಿಗೂ ಕಡಿವಾಣ ಹಾಕಿದಂತಾಗುತ್ತದೆ ಅಂತ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ನಾಗೇಶ ಮುಂಡಾಸ ತಿಳಿಸಿದ್ದಾರೆ. 

ಸಿಗ್ನಲ್ ಜಂಪ್‌ ಮಾಡ್ತೀರಾ.? ಇನ್ಮುಂದೆ ಎಸ್ಕೇಪ್ ಆಗೋಕೆ ಆಗಲ್ಲ..!

ಬೆಂಗಳೂರು: ಟ್ರಾಫಿಕ್ ಪೊಲೀಸರಿಗೇ (Traffic Police) ಚಳ್ಳೆಹಣ್ಣು ತಿನ್ನಿಸುವ ಚಾಲಾಕಿಗಳೇ ಎಚ್ಚರ..! ಸಿಗ್ನಲ್ ಜಂಪ್ ಮಾಡುವ ಭೂಪರೇ ಹುಷಾರ್... ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಎಸ್ಕೇಪ್ ಆಗುವುದಕ್ಕೆ ಆಗಲ್ಲ. ಟ್ರಾಫಿಕ್ ಉಲ್ಲಂಘನೆ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ದಂಡ ವಸೂಲಿಗೆ ಹೊಸ ಪ್ಲ್ಯಾನ್ ಮಾಡಲಾಗಿದೆ. ಇನ್ಮುಂದೆ RTO ಪ್ರಾದೇಶಿಕ ಕಚೇರಿಗಳಲ್ಲೇ ದಂಡ ಬೀಳಲಿದೆ.