Asianet Suvarna News Asianet Suvarna News

ಹುಬ್ಬಳ್ಳಿ : ಆರ್‌ಎಸ್ಸೆಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ

  • ರಾಜ್ಯದಲ್ಲಿ ಏರುತ್ತಲೇ ಇದೆ ಕೊರೋನಾ ಮಹಾಮಾರಿ ಅಟ್ಟಹಾಸ
  •  ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ 
  •  ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಎರಡು ತಂಡಗಳಿಂದ ಶವ ಸಂಸ್ಕಾರ
RSS Workers Perform Last Rites For Covid Victims in  Hubli snr
Author
Bengaluru, First Published May 10, 2021, 8:43 AM IST

ವರದಿ : ಶಿವಾನಂದ ಗೊಂಬಿ

 ಹುಬ್ಬಳ್ಳಿ (ಮೇ.10):  ಕೊರೋನಾ ಸೋಂಕಿತರು ಮರಣ ಹೊಂದಿದರೆ ಅಥವಾ ಬೇರೆ ಕಾರಣಗಳಿಂದ ಯಾರಾದರೂ ಮೃತಪಟ್ಟರೂ ಹೆಣ ಹೊರಲು ಯಾರೊಬ್ಬರೂ ಬರುತ್ತಿಲ್ಲ. ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದ್ದು ಇಂತಹ ಸಮಯದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರ ಎರಡು ತಂಡಗಳು ಕಳೆದ ಒಂದು ವಾರದಿಂದ ಶವಸಂಸ್ಕಾರ ನೆರವೇರಿಸುವ ಕಾರ‍್ಯದಲ್ಲಿ ನಿರತವಾಗಿವೆ.

ಹುಬ್ಬಳ್ಳಿಯಲ್ಲಿನ ತಂಡದಲ್ಲಿ 10 ಮಂದಿ, ಧಾರವಾಡದಲ್ಲಿನ ತಂಡದಲ್ಲಿ 8-10 ಮಂದಿಯಿದ್ದಾರೆ. ಧಾರವಾಡದಲ್ಲಿ ಕೋವಿಡ್‌ ಮತ್ತು ಕೋವಿಡೇತರ ಸೇರಿ ಈವರೆಗೆ 9 ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಹುಬ್ಬಳ್ಳಿಯಲ್ಲಿ ಈವರೆಗೆ 6 ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಸಾರ್ಥಕ ಜೀವನ; ಬೆಡ್ ತ್ಯಾಗ ಮಾಡಿ 85 ವರ್ಷದ RSS ಸ್ವಯಂ ಸೇವಕ ನಿಧನ

ಸೇವಾ ಭಾರತಿ ಟ್ರಸ್ಟ್‌ ಸಹಯೋಗದಲ್ಲಿ ಈ ಕಾರ್ಯನಿರ್ವಹಿಸಲಾಗುತ್ತಿದೆ. ಸಹಾಯವಾಣಿಗೆ ಅಥವಾ ತಂಡದಲ್ಲಿರುವ ಯಾರಿಗಾದರೂ ಕರೆ ಮಾಡಿ ಹೇಳಿದರೆ ಅವರ ತಂಡ ಅಲ್ಲಿಗೆ ತೆರಳಿ ಮೃತದೇಹವನ್ನು ಅವರು ಹೇಳಿದ ಧಾರ್ಮಿಕ ವಿಧಿಪ್ರಕಾರ ಅಂತ್ಯಸಂಸ್ಕಾರ ನಡೆಸಿಕೊಡುತ್ತಾರೆ. ಶವ ಸಾಗಾಟಕ್ಕೂ ಉಚಿತ ವಾಹನದ ವ್ಯವಸ್ಥೆಯನ್ನೂ ಈ ತಂಡವೇ ಮಾಡುತ್ತದೆ.

ಕುಂಭಮೇಳದಲ್ಲಿ ಸ್ಪೆಷಲ್ ಪೋಲಿಸ್ ಆಫೀಸರ್‌ಗಳಾಗಿ RSS ಕಾರ್ಯಕರ್ತರು! ..

ಉಚಿತ ಆಟೋ:  ಕೋವಿಡ್‌ ಹೊರತುಪಡಿಸಿ ಬೇರೆ ಕಾಯಿಲೆಗಳಿಂದ ಬಳಲುವ ರೋಗಿಗಳ ಆಸ್ಪತ್ರೆಗೆ ತೆರಳಲು ಧಾರವಾಡದ ತಂಡ ಉಚಿತ ಆಟೋಗಳನ್ನು ಒದಗಿಸುತ್ತಿದೆ. ಜೊತೆಗೆ ವಯಸ್ಸಾದವರಿಗೆ ಕಿರಾಣಿ, ಮೆಡಿಸಿನ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಯಾರಿಗಾದರೂ ನೆರವು ಬೇಕಾದರೆ ಧಾರವಾಡ- 9845799027, 7899935709, ಹುಬ್ಬಳ್ಳಿ- 9845820065 ಈ ಮೊಬೈಲ್‌ಗಳಿಗೆ ಕರೆ ಮಾಡಬಹುದಾಗಿದೆ.

Follow Us:
Download App:
  • android
  • ios