ಸಾರ್ಥಕ ಜೀವನ; ಬೆಡ್ ತ್ಯಾಗ ಮಾಡಿ 85 ವರ್ಷದ RSS ಸ್ವಯಂ ಸೇವಕ ನಿಧನ
ಮಧ್ಯವಯಸ್ಕನಿಗೆ ಬೆಡ್ ಬಿಟ್ಟು ಕೊಟ್ಟ ಹಿರಿಯ ಜೀವ/ ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತರ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ವೈರಲ್/ ತನ್ನ ಪ್ರಾಣ ಹೋದರೂ ಅಡ್ಡಿಇಲ್ಲ/
ನಾಗಪುರ(ಏ. 27) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ನಜಕ್ಕೂ ನಮ್ಮನ್ನು ಮೂಕರನ್ನಾಗಿಸುತ್ತದೆ. ಶೇಫಾಲಿ ವೈದ್ಯ ಎನ್ನುವವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅವರ ಮಾತುಗಳಲ್ಲೇ ಕೇಳಿ..
ನಿಜ ಜೀವನದ ಈ ಕತೆಯನ್ನು ಕೇಳಿ ನನಗೆ ಮಾತು ಬರದಾಗಿದೆ. 85 ವರ್ಷದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ನಾಗಪುರದ ನಾರಾಯಣ ದಾಭಡ್ಕರ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಅವರ ಮಗಳು ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು, ಬೆಡ್ ಗಾಗಿ ಹೋರಾಟ ಮಾಡಿದ್ದಾರೆ. ಕೊನೆಗೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಒಂದು ಬಬೆಡ್ ಸಿಕ್ಕಿದೆ.
ಕುಂಭಮೇಳದಲ್ಲಿ ಆರ್ ಎಸ್‌ಎಸ್ ಸಾಮಾಜಿಕ ಕಾರ್ಯ
ಆಸ್ಪತ್ರೆಗೆ ದಾಖಲಿಸುವ ವೇಳೆ ನಾರಾಯಣ ಅವರ ಆಕ್ಸಿಜನ್ ಲೇವಲ್ ಕುಸಿದಿದೆ. ತನ್ನಮರಿ ಅಳಿಯನ ಜತೆ ನಾರಾಯಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಉಸಿರಾಟದ ಸಮಸ್ಯೆ ತೀವ್ರವಾಗಿದೆ.
ನಾರಾಯಣ ಅವರನ್ನು ಆಡ್ಮಿಟ್ ಮಾಡಿಕೊಳ್ಳುವ ಕೆಲಸಗಳು ನಡೆಯುತ್ತಿದ್ದಾಗ ಮಹಿಳೆಯೊನಬ್ಬಳು ಬೆಡ್ ಗಾಗಿ ಅಲೆದಾಡುತ್ತಿರುವುದು ಗಮನಕ್ಕೆ ಬಂದಿದೆ. ಆಕೆಯ 40 ವರ್ಷದ ಪತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ದಂಪತಿಯ ಮಕ್ಕಳು ಅಳುತ್ತಿರುವ ದೃಶ್ಯವೂ ನಾರಾಯಣ ಅವರ ಗಮನಕ್ಕೆ ಬಂದಿದೆ.
ನಾರಾಯಣ ಅವರನ್ನು ನೋಡಿಕೊಳ್ಳಲು ಬಂದ ವೈದ್ಯ ಸಿಬ್ಬಂದಿಯನ್ನು ತಡೆದ ಹಿರಿಯ ಜೀವ, ಮನನಗೀಗ 85 ವರ್ಷ, ನಾನು ನನ್ನ ಜೀವನವನ್ನು ಕಂಡಿದ್ದೇನೆ. ನನಗೆ ಎಂದು ಮೀಸಲಿಟ್ಟ ಬೆಡ್ ನ್ನು ಮಹಿಳೆಯ ಪತಿಗೆ ನೀಡಿ, ಆ ವ್ಯಕ್ತಿಯ ಅಗತ್ಯ ಕುಟುಂಬಕ್ಕೆ ಇದೆ ಎಂದು ಹೇಳಿದ್ದಾರೆ. ಮಹಿಳೆ ಮೊದಲು ಬೆಡ್ ತೆಗೆದುಕೊಳ್ಳಲು ಒಪ್ಪದಿದ್ದರೂ ನಂತರ ಸಮ್ಮತಿ ಸೂಚಿಸಿದ್ದಾರೆ.
ದಾಖಲಾತಿಗಳಿಗೆ ಸಹಿ ಮಾಡಿದ ನಾರಾಯಣ ತಮಗೆ ಮೀಸಲಿಟ್ಟಿದ್ದ ಬೆಡ್ ನ್ನು ಬೇರೆಯವರಿಗೆ ನಿಡಿ ಮನೆಗೆ ಹಿಂದಿರುಗಿದ್ದಾರೆ. ಅವರನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಮೂರು ದಿನದ ನಂತರ ಹಿರಿಯ ಜೀವ ಈ ಲೋಕವನ್ನು ತೊರೆದಿದೆ.