Asianet Suvarna News Asianet Suvarna News

ಗುಳೇದಗುಡ್ಡದಲ್ಲಿ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ

ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ| ನಗರದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಿಂದ ಆರಂಭಗೊಂಡ ಪಥಸಂಚಲನ ನಗರದ ಕಮತಗಿ ರಸ್ತೆ, ಸಾಲೇಶ್ವರ ದೇವಸ್ಥಾನ, ಪುರಸಭೆ, ಸರಾಫ್‌ ಬಜಾರ, ಕಂಠಿ ಪೇಟೆ, ಚೌ ಬಜಾರ, ಗುಗ್ಗರಿ ಪೇಟೆಯ ಮೂಲಕ ಹಾಯ್ದು ಭಂಡಾರಿ ಹಾಗೂ ರಾಠಿ ಕಾಲೇಜು ಮೈದಾನ ತಲುಪಿತು| ನಗರದ ಕಟ್ಟಡಗಳ ಮೇಲೆ ಭಗವಾಧ್ವಜ ರಾರಾಚಿಸುತ್ತಿದ್ದವು| ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು|

RSS Marching Was Held at Guledgudda in Bagalkot District
Author
Bengaluru, First Published Oct 7, 2019, 11:21 AM IST

ಗುಳೇದಗುಡ್ಡ(ಅ.7): ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಭಾನುವಾರ ನಡೆಯಿತು.

ನಗರದ ಭಂಡಾರಿ ಹಾಗೂ ರಾಠಿ ಮಹಾವಿದ್ಯಾಲಯದಿಂದ ಆರಂಭಗೊಂಡ ಪಥಸಂಚಲನ ನಗರದ ಕಮತಗಿ ರಸ್ತೆ, ಸಾಲೇಶ್ವರ ದೇವಸ್ಥಾನ, ಪುರಸಭೆ, ಸರಾಫ್‌ ಬಜಾರ, ಕಂಠಿ ಪೇಟೆ, ಚೌ ಬಜಾರ, ಗುಗ್ಗರಿ ಪೇಟೆಯ ಮೂಲಕ ಹಾಯ್ದು ಭಂಡಾರಿ ಹಾಗೂ ರಾಠಿ ಕಾಲೇಜು ಮೈದಾನ ತಲುಪಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪಥಸಂಚಲನದಲ್ಲಿ ನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿದ ಗಣವೇಷಧಾರಿ ಸ್ವಯಂಸೇವಕರು, ಘೋಷ ಸಹಿತ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಕಟ್ಟಡಗಳ ಮೇಲೆ ಭಗವಾಧ್ವಜ ರಾರಾಚಿಸುತ್ತಿದ್ದವು. ಸಾರ್ವಜನಿಕರು ರಸ್ತೆಗಳಲ್ಲಿ ರಂಗೋಲಿ, ಹೂವಿನ ಅಲಂಕಾರ ಮಾಡಿ ಪಥ ಸಂಚಲನವನ್ನು ಸ್ವಾಗತಿಸಿದರು. ಶಿವಾಜಿ, ಸುಭಾಷಚಂದ್ರ ಭೋಸ್‌, ವಿವೇಕಾನಂದ, ಝಾನ್ಸಿರಾಣಿ ಲಕ್ಷ್ಮೀ, ಒನಕೆ ಓಬವ್ವ, ಭಗತ್‌ಸಿಂಗ, ಶ್ರೀರಾಮ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ರಾಷ್ಟ್ರನಾಯಕರ ವೇಷಧಾರಿ ಮಕ್ಕಳು ಪಥ ಸಂಚಲನವನ್ನು ಸ್ವಾಗತಿಸಿದರು. ಅಲ್ಲಿಲಿ ಪಟಾಕಿ ಸಿಡಿಸಿ ಪಥಸಂಚಲನಕ್ಕೆ ಸಂಭ್ರಮದ ಸ್ವಾಗತ ನೀಡಲಾಯಿತು.

ಬಾಗಲಕೋಟೆಯಲ್ಲಿ ಮನೆಯ ಮೇಲ್ಛಾವಣಿ ಕುಸಿತ: ಒಂದೇ ಕುಟುಂಬದ ಮೂವರ ಸಾವು

ಕಲ್ಯಾಣ ಮರಳಿ, ವಿಠ್ಠಲ ಪತ್ತಾರ, ಈರಣ್ಣ ಕಂಠಿ, ಬಸವರಾಜ ಕುಂಬಾರ, ವಿವೇಕಾನಂದ ದೇವಾಂಗಮಠ, ಬಸವರಾಜ ಒಣರೊಟ್ಟಿ, ಮಾಜಿ ಶಾಸಕ ರಾಜಶೇಖರ ಶೀಲವಂತ. ಪೋಲಿಸಪ್ಪ ರಾಮದುರ್ಗ, ರವಿ ಶೇಬಿನಕಟ್ಟಿ, ಸುಧೀರ ಗುಡ್ಡದ, ಸಿದ್ದು ಅರಕಾಲಚಿಟ್ಟಿ, ಸಂಜಯ ಕಾರಕೂನ, ಭುವನೇಶ ಪೂಜಾರ, ಶಿವಕುಮಾರ ಅಚನೂರ, ಪ್ರವೀಣ ದೇವಗಿರಿಕರ, ಶಂಕರ ಕಾಟವಾ, ಮಹಾದೇವ ಜಗತಾಪ, ಮುತ್ತು ಚಿಕ್ಕನರಗುಂದ, ಮಲ್ಲಿಕಾರ್ಜುನ ಶೀಲವಂತ, ಸಂಪತಕುಮಾರ ರಾಠಿ, ಅತ್ರೇಶ ದೊಡಮನಿ, ರಾಜು ಚಿತ್ತರಗಿ, ಜ್ಞಾನೇಶ್ವರ ಬೊಂಬಲೇಕರ, ಪುರುಷೋತ್ತಮ ಪಸಾರಿ, ವಿಷ್ಣು ಬಳಿಗೇರ, ಆರ್‌.ಎಸ್‌. ಜಿರ್ಲಿ, ಸೇರಿದಂತೆ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.
 

Follow Us:
Download App:
  • android
  • ios