ಪುತ್ತೂರು (ಡಿ.16) : ಅಪರಿಚಿತ ವಾಹನ ಡಿಕ್ಕಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ ಮಂಗಳೂರು ವಿಭಾಗ ಪ್ರಮುಖ್‌, ಬಂಟ್ವಾಳ ಅಗರ್ತಬೈಲು ನಿವಾಸಿ ವೆಂಕಟ್ರಮಣ ಹೊಳ್ಳ (59) ಮೃತಪಟ್ಟಿದ್ದಾರೆ. 

 ಮಂಗಳವಾರ ನಸುಕಿನ ಜಾವ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ಪೋಳ್ಯ ಎಂಬಲ್ಲಿ ಸಂಭವಿಸಿದೆ.

 ಸೋಮವಾರ ರಾತ್ರಿ ಪುತ್ತೂರು ಪಂಚವಟಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರದಲ್ಲಿ ತಂಗಿದ್ದ ವೆಂಕಟ್ರಮಣ ಹೊಳ್ಳ ಅವರು ಮಂಗಳವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಮರಳುವ ವೇಳೆ ಈ ಅವಘಡ ಸಂಭವಿಸಿದೆ.

ರಾಮಮಂದಿರ ಹೋರಾಟಗಾರರ ಹತ್ಯೆಗೆ ಸಂಚು! ...

 ಪೋಳ್ಯ ಸಮೀಪದ ಪೊಲೀಸ್‌ ಬ್ಯಾರಿಕೇಡ್‌ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.