Asianet Suvarna News Asianet Suvarna News

‘ಚುನಾವಣಾ ಸಮಯದಲ್ಲಿ ಜನಿವಾರ ಹಾಕ್ಕೊಂಡ್ರೆ ಪ್ರಯೋಜನವಿಲ್ಲ’

ಧಾರವಾಡದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ. ಹಿಂದುತ್ವ, ಗೋಹತ್ಯೆ ನಿಷೇಧ ಮತ್ತು ರಾಮಮಂದಿರ ವಿಚಾರದ ಬಗ್ಗೆ ಮಾತನಾಡಿದರು.

RSS leader Kalladka Prabhakar Bhat Slams Congress President Rahul Gandhi
Author
Bengaluru, First Published Dec 3, 2018, 11:47 PM IST

ಧಾರವಾಡ[ಡಿ.03]  ಧಾರವಾಡದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್  ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಗೋಹತ್ಯೆ ಮಹಾ ಪಾಪ, ಗೋಮಾತೆಗೆ‌ ನಾವು ತಾಯಿ ದೇವರು ಎಂದು ಪೂಜೆ ಮಾಡುತ್ತೇವೆ. ಹಿಂದಿನ ಸಿಎಂ ಸಿದ್ಧರಾಮಯ್ಯ ಅವರು ಅದು ಆಹಾರ ಎಂದು ಹೇಳಿದ್ದರು. ಬೇರೆ ಮುಸ್ಲಿಂ ದೇಶಗಳಲ್ಲಿ ಗೋಹತ್ಯೆ ಇಲ್ಲ ಆದರೆ ನಮ್ಮ ದೇಶದಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ‌ಕೆಲಸ ಮಾಡಲಾಗುತ್ತಿದೆ ಎಂದರು.

ಗಾಂಧೀಜಿ ಅವರ ಹೆಸರಿನಲ್ಲಿ ಓಟು ಪಡಿತಾರೆ, ಆದರೆ ಅವರ ಮಾತು ಕೇಳಲ್ಲ. ನಮ್ಮ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಅಪರಾಧ ಗೋಹತ್ಯೆಯೇ ತಪ್ಪು, ಈ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದೆ. ಪೊಲೀಸರು ರಾಜಕೀಯ ತಂದು  ಧರ್ಮದ್ರೋಹಿಗಳನ್ನ ತಡೆಯುವ ಕೆಲಸ ಮಾಡಬೇಕು.ಪೊಲೀಸರ ಸಹಕಾರ ನಮಗೆ ಸಿಗುತ್ತೆ ಅನ್ನುವ ಭರವಸೆ ನನಗೆ ಇದೆ ಎಂದರು.

  ಚುನಾವಣೆ ಬಂತಲ್ಲ ಅದಕ್ಕೆ ಬಿಜೆಪಿಯಿಂದ ರಾಮ ಜಪ

ರಾಮ‌ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ಸ್ವಲ್ಪ ಕಾನೂನು ತೊಡಕಿದೆ. ನಾನು ನ್ಯಾಯಾಲಯದ ಬಗ್ಗೆ ಮಾತನಾಡಲ್ಲ. ಯಾವುದಕ್ಕೆ ಆದ್ಯತೆ ಕೊಡಬೇಕು ಅದಕ್ಕೆ ಕೊಡಲಿಲ್ಲ ಅಂದರೆ ನಮ್ಮ ನಂಬಿಕೆ ಹೊರಟು ಹೋಗುತ್ತೆ. ಕಸಬ್ ಮರಣ ದಂಡನೆಗೆ ರಾತ್ರಿ ಚರ್ಚೆ ಮಾಡ್ತಾರೆ, ಇಡಿ ಜಗತ್ತಿಗೆ ಬೇಕಾದ ರಾಮನ ಬಗ್ಗೆ ಆದ್ಯತೆ‌ ಸಿಗಲ್ಲ, ಇದು ನೋವಿನ ಸಂಗತಿ ಎಂದರು.

ನಮ್ಮ ಗೌರವದ ಪ್ರಶ್ನೆ ಇದರಲ್ಲಿದೆ. ಮೋದಿ ಸರ್ಕಾರ ನ್ಯಾಯಾಲಯ ಮಾಡಬಹುದು ಅಂತಾ ಇತ್ತು. ಆದರೆ ನ್ಯಾಯದಾನ ತ್ವರಿತ ಗತಿಯಲ್ಲಿ ಇದು ಆಗಬೇಕು. ಪ್ರತಿ ಊರಲ್ಲಿ ರಾಮಮಂದಿರಕ್ಕೆ ಆಗ್ರಹ ಇದೆ. 490  ವರ್ಷಗಳಿಂದ ಇದು‌ ನಡೆದಿದೆ, ಈಗ ಮತ್ತೇ ಹೋರಾಟ ಆರಂಭವಾಗಿದೆ ಎಂದರು.

ಕೆಲವರು ಹುಚ್ಚು ಹುಚ್ಚಾಗಿ ವರ್ತನೆ ಮಾಡುತ್ತ ಚುನಾವಣಾ ಸಮಯದಲ್ಲಿ ಜನಿವಾರ ಹಾಕಿಕೊಳ್ಳುತ್ತಾರೆ. ಆದರೆ ಇಂಥ ಯಾವ ಸಂಗತಿಗಳು ಜನರ ಮೇಲೆ ಪ್ರಭಾವ ಬೀರುವುದೇ ಇಲ್ಲ ಎಂದು ಸಮರ್ಥಿಸಿಕೊಂಡರು.

Follow Us:
Download App:
  • android
  • ios