ಬೆಂಗಳೂರು, [ಸೆ.12]: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಸಂಚಾರ ಪೊಲೀಸರೊಬ್ಬರು ಡಬಲ್ ದಂಡ ಕಟ್ಟಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

PSI ಹಾಗೂ 6 ಪೊಲೀಸರಿಗೆ ಬಿತ್ತು ಭಾರೀ ದಂಡ

ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಬಳಿ ಅದೇ ಏರಿಯಾದ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಎನ್ನುವರು ಇಂದು [ಗುರುವಾರ] ನೋ ಪಾರ್ಕಿಂಗ್ ನಲ್ಲಿ KA02 G1577 ನಂಬರಿನ ಸರ್ಕಾರಿ ಜೀಪ್‌ ನಿಲ್ಲಿಸಿದ್ದರು.

ಇದರಿಂದ ಸ್ಥಳಿಯರಿಗೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇದನ್ನು ಗಮನಿಸಿದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಕೂಡಲೇ ಇನ್ಸ್ ಪೆಕ್ಟರ್  ಶಿವಕುಮಾರ್ ಅವರಿಗೆ 2 ಸಾವಿರ ರು. ದಂಡ ವಿಧಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಪೊಲೀಸರು ಎನ್ನುವ ಕಾರಣಕ್ಕೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.