ಕಲಬುರಗಿ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ರೌಡಿ ಶೀಟರ್‌ ಹೆಸರು ಶಿಫಾರಸು..!

ಕಲಬುರಗಿ ಮಹಾನಗರ ಪಾಲಿಕೆಗೆ ಅಧಿಕಾರೇತರ ನಾಮನಿರ್ದೇಶನಕ್ಕೆ ಮುಂದಾದ ನಗರಾಭಿವೃದ್ಧಿ ಇಲಾಖೆ, ಪಾಲಿಕೆ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭ, ಈ ಪ್ರಕ್ರಿಯೆಯಲ್ಲಿನ ಮೂರು ಹೆಸರುಗಳಲ್ಲಿ ರೌಡಿ ಶೀಟರ್‌ ಪ್ರದೀಪ ಕುಮಾರ್‌ ಹೆಸರು ಪ್ರತ್ಯಕ್ಷ

Rowdy Sheeter name Recommended for Kalaburagi City Corporation Membership grg

ಕಲಬುರಗಿ(ಡಿ.22): ಇಲ್ಲಿನ ಮಹಾನಗರ ಪಾಲಿಕೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು ಈ ಪಟ್ಟಿಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಬೋರಾಬಾಯಿ ನಗರದ ನಿವಾಸಿ, ರೌಡಿ ಶೀಟರ್‌ ಪ್ರದೀಪ ಕುಮಾರ್‌ ಭಾವೆ ಹೆಸರು ಪ್ರತ್ಯಕ್ಷವಾಗಿರೋದು ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಕಲಂ 7 (1), (ಬಿ) ರಲ್ಲಿನ ಅವಕಾಶದಂತೆ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿದ್ದವರು, ಪೌರಾಡಳಿತ, ಆರೋಗ್ಯ, ನಗರ ಯೋಜನೆ, ಶಿಕ್ಷಣ ಸಂಬಂಧಿಸಿದಂತೆ ಅಪಾರ ಜ್ಞಾನ, ಅನುಭವ ಹೊಂದಿರುವ, ಸಮಾಜ ಸೇವಾ ಕಾರ್ಯಕರ್ತರಾಗಿದ್ದವರಿಗೆ ಪಾಲಿಕಯ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲು ಅವಕಾಶವಿದೆ.

ಈ ನಿಯಮದಂತೆಯೇ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಿ. ರಾಜು ಎಂಬುವವರು ಕಲೆದ ನ. 18 ರಂದೇ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಾಮನಿರ್ದೇನಕ್ಕೆ ಶಿಫಾರಸು ಆದಂತಹ ಜಯನಗರ ಡಾಕ್ಟರ್ಸ್‌ ಕಾಲೋನಿಯ ಉದಯ ಕಿರಣ ರೇಶ್ಮಿ, ಅರುಣ ಕಮಲಾಪುರ ಅಲಿಯಾಸ್‌ ರವಿಂದ ಬಸವನ ನಗರ ಹಾಗೂ ಬೋರಾಬಾಯಿ ನಗರದ ಪ್ರದೀಪ ಕುಮಾರ್‌ ಭಾವೆ ಎಂಬ ಮೂವರ ಹೆಸರಗಳಿರುವ ಪಟ್ಟಿರವಾನಿಸಿ ಮೇಲಿನ ಮಾನದಂಡಗಳು ಪೂರೈಸಿರುವ ಬಗ್ಗೆ ದಾಖಲೆಗಳ ಸಮೇತ ಮರು ಟÜಪಾಲಿನಲ್ಲಿ ತಿಳಿಸುವಂತೆ ಕೋರಿದ್ದರು.

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಸದಸ್ಯತ್ವ ರದ್ದು: ಬಿಜೆಪಿಗೆ ಡಬಲ್ ಶಾಕ್!

ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಪತ್ರದನ್ವಯ ಇಲ್ಲಿನ ಜಿಲ್ಲಾಡಳಿತ ಕಾಯೋರ್‍ನ್ಮುಖವಾಗಿದ್ದು ಪಾಲಿಕೆ ಆಯುಕ್ತರು ಡಿ. 13 ರಂದು ವಲಯ ಆಯುಕ್ತರು ವಲಯ ಕಚೇರಿ 1 ಮತ್ತು 2 ಕ್ಕೆ ಪತ್ರ ಬರೆದು ಮೇಲಿನ ಹೆಸರುಗಳಲ್ಲಿರುವವರ ವಿಳಾಸಕ್ಕೆ ಖುದ್ದು ಭೇಟಿ ನೀಡಿ ಪೂರಕ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಲ್ಲಿಸಲು ಆದೇಶಿಸಿದ್ದಾರೆ. ಈ ಹಂತದಲ್ಲೇ ಪಾಲಿಕೆಯ ನಾಮನಿರ್ದೇಶನ ಸಸ್ಯರ ಪಟ್ಟಿಯಲ್ಲಿ ರೌಡಿ ಶೀಟರ್‌ ಪ್ರದೀಪ ಕುಮಾರ್‌ ಭಾವೆ ಹೆಸರು ಶಿಫಾರಸು ಆಗಿರೋದು ಬಹಿರಂಗವಾಗಿದೆ.

ರೌಡಿ ಶೀಟರ್‌ ಪ್ರದೀಪ ಹೆಸರು ಪಾಲಿಕೆ ನಾಮನಿರ್ದೇಶನ ಸದಸ್ಯರ ಪಟ್ಟಿಲ್ಲಿ ಹೇಗೆ ಬಂತು ಎಂಬುದೇ ನಿಗೂಢವಾಗಿದೆ. ಇದೇ ಸಂಗತಿ ನಗರದಲ್ಲಿ ಸ್ಥಳೀಯವಾಗಿ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೂ ಗ್ರಾಸವಾಗಿದೆ. ರಾಜಕೀಯವಾಗಿ ಆರೋಪ- ಪ್ರತ್ಯಾರೋಪಗಳಿಗೂ ಈ ಬೆಳವಣಿಗೆ ಕಾರಣವಾಗಿದೆ. ಬರವು ಇನಗಳಲ್ಲಿ ಈ ವಿಆರದಲ್ಲಿ ಸರ್ಕಾರದ ಅಂತಿಮ ನಿರ್ಧಾರ ಅದೇನಾಗಿರಬಹುದು ಎಂಬುದು ಕುತೂಹಲ ಮೂಡಿಸಿದೆ.

Kalaburagi| 'ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ವಾಮಮಾರ್ಗ'

ಪ್ರದೀಪ ಕುಮಾರ್‌ ಅಲಿಯಾಸ್‌ ಸೇವನ್‌ ಸ್ಟಾರ್‌ ಈತನ ವಿರುದ್ಧ ಆರ್‌ಜಿ ನಗರ ಠಾಣೆಯಲ್ಲಿ ರೌಡಿ ಶೀಟ್‌ ಇದೆ. ಈತನ ವಿರುದ್ಧ ಕೊಲೆಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಪೋಕ್ಸೋ ಸೇರಿದಂತೆ ಹಲವಾರು ಪ್ರಕರಣಗಳು ನಗರದ ಹಲವು ಠಾಣೆಗಳಲ್ಲಿ 20 ಪ್ರರಣಗಳು ದಾಖಲಾಗಿದ್ದು ಎಲ್ಲವೂ ವಿಚಾರಣೆ ಹಂತದಲ್ಲಿವೆ ಅಂತ ಕಲಬುರಗಿ ಉಪ ಪೊಲೀಸ್‌ ಆಯುಕ್ತ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ. 

ಕಲಬುರಗಿ ಮಹಾ ನಗರ ಪಾಲಕೆಗೆ ಸಸ್ಯರ ನಾಮ ನಿರ್ದೇಶನ ಮಾಡಲು ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಮುಖಂಡರ ಸಹಮತಿ ಇರಲೇಬೇಕು. ಅದಿರದಿದ್ದರೆ ನಾಮನಿದೇಶನ ಮಾಡೋದೇ ಸಾಧ್ಯವಿಲ್ಲ. ಕಲಬುರಗಿ ಪಾಲಿಕೆಗೆ ಸದಸ್ಯತ್ವಕ್ಕೆ ರೌಡಿ ಶೀಟರ್‌ ಹೆಸರು ಢಾಳವಾಗಿ ಶಿಫಾರಸು ಆಗಿರೋದು ನೋಡಿದರೆ ಬಿಜೆಪಿ ರೌಡಿ ಶೀಟರ್‌ ರಾಜಕೀಯಕ್ಕೆ ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತೆ. ಪ್ರದೀಪ್‌ ಮೇಲೆ ದೊಂಬಿ, ಕಲಹ, ಸುಲಿಗೆ, ಕೊಲೆ ಯತ್ನದಂತಹ 30 ಕ್ಕೂ ಹೆಚ್ಚು ಪ್ರಕರಣಗಲಿವೆ. ಇಂತಹವರಿಗೆ ಸಮಾಜ ಸೇವಕರೆಂದು ಪಾಲಿಕೆಯಲ್ಲಿ ಸ್ವಾಗಿತಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ದನ್ನು ನೋಡಿ ನಗರವಾಸಿಗಳು ಅಳಬೇಕೋ, ನಗಬೇಕೋ ಎಂದು ಒಂದೂ ತಿಳಿಯದಂತೆ ಕಂಗಾಲಾಗಿದ್ದಾರೆ ಅಂತ ಕಲಬುರಗಿ ಎಎಪಿ ಮುಖಂಡ ಶರಣ ಅಂಬೆಸಿಂಗೆ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios