ಮಂಗಳೂರು(ನ.30): ಯುವಕನನ್ನು ಬರ್ಬರವಾಗಿ ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ನಡೆಸಿದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಮಂಗಳೂರಿನ ಉಳ್ಳಾಲದಲ್ಲಿ ಘಟನೆ ನಡೆದಿದ್ದು ಕೊಲೆ ಮಾಡಿದ ರೌಡಿ ಪೊಲೀಸರಿಗೆ ಕರೆ ಮಾಡಿದ್ದಾನೆ.

ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ಪರಾರಿಯಾಗಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ತನ್ನ ಪ್ರಿಯತಮೆಗೆ ಕಿರುಕುಳ ನೀಡಿದನೆಂದು ಆರೋಪಿಸಿ ಎರಡು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಕೊಲೆ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸುಟ್ಟ ಸ್ಥಿತಿಯಲ್ಲಿ ಮತ್ತೋರ್ವ ಮಹಿಳೆ ಶವ ಪತ್ತೆ!

ಕಾಸರಗೋಡು ಪುತ್ತಿಗೆ ನಿವಾಸಿ  ಸುದರ್ಶನ್ (20) ಹತ್ಯೆಯಾದ ಯುವಕ. ತೊಕ್ಕೊಟ್ಟು ನಿವಾಸಿ ಡಿ.ಕೆ. ರಕ್ಷಿತ್ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಡರಾತ್ರಿ 11 ರ ಸುಮಾರಿಗೆ ಕೆಂಪು ಬಣ್ಣದ ಕಾರಿನಲ್ಲಿ ಬಂದು ಸುದರ್ಶನ್  ಶವವನ್ನು  ಕಾಪಿಕಾಡು ಬಳಿಯಿರುವ  ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಬಿಸಾಡಿ ಪರಾರಿಯಾಗಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡಿದ್ದ ರೌಡಿ :

ರೌಡಿ ರಕ್ಷಿತ್  ಸುದರ್ಶನ್ ಮೃತದೇಹವನ್ನು ಎಸೆದು ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ತಾನು ರಕ್ಷಿತ್ ಎಂಬುದಾಗಿ ತಿಳಿಸಿ, ತನ್ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಎಚ್ಚರಿಸಿದ್ದರೂ ಚಾಳಿ ಮುಂದುವರಿಸಿದ್ದನು. ಧಿಕ್ಕು ತೋಚದೆ ಹತ್ಯೆ ನಡೆಸಿ ಕಾಪಿಕಾಡು ಸಮೀಪ ಎಸೆದಿರುವೆ. ಇಂದು ತಮ್ಮ ಕೈಗೆ ಸಿಗುವುದಿಲ್ಲ. ಎನ್ ಕೌಂಟರ್ ಮಾಡುವಿರಾ ಅನ್ನುವ ಸಂಶಯವಿದೆ. ನಾಳೆ (ಇಂದು) ತಾನೇ ಬಂದು ಸರೆಂಡರ್ ಆಗುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.

ಪುತ್ತೂರು ರೇಪ್‌: 4ನೇ ಆರೋಪಿ ಪ್ರಜ್ವಲ್‌ಗೆ ಜಾಮೀನು

ತೊಕ್ಕೊಟ್ಟು ನಿವಾಸಿ ರಕ್ಷಿತ್ ಯಾನೆ ಡಿ.ಕೆ ರಕ್ಷಿತ್  2014 ರಲ್ಲಿ ಕುಂಪಲ ನಿವಾಸಿ ಮುಖೇಶ್ ಕೊಲೆಯತ್ನ ಪ್ರಕರಣ ನಡೆಸಿ ಅಪರಾಧ ಜಗತ್ತಿಗೆ ಎಂಟ್ರಿ ಪಡೆದಿದ್ದ. ಬಳಿಕ 2016ರಲ್ಲಿ ಹಿಂಜಾವೇ ಮುಖಂಡ ಯತೀಶ್ ಪೂಜಾರಿ ಹತ್ಯೆಯಲ್ಲಿ ಭಾಗಿಯಾಗಿದ್ದ ಲ್ಯಾನ್ಸಿ ಎಂಬಾತನನ್ನು ಚೆಂಬುಗುಡ್ಡೆ ಸಮೀಪ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿದ್ದನು.

ಕೆನಡಾದಿಂದ ತರಿಸಿ ಇದನ್ನ ಅಕ್ರಮವಾಗಿ ಆನ್‌ಲೈನ್‌ನಲ್ಲಿ ಮಾರ್ತಾರೆ!

ಘಟನಾ ಸ್ಥಳಕ್ಕೆ ಎಸಿಪಿ ಕೋದಂಡರಾಮ್, ಉಳ್ಳಾಲ ಠಾಣಾಧಿಕಾರಿ  ಗೋಪಿಕೃಷ್ಣ, ಭೇಟಿ ನೀಡಿ ಸ್ಥಳ ತನಿಖೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.