ಬೆಂಗಳೂರು(ಫೆ.16): ವ್ಯಕ್ತಿಯೊಬ್ಬನನ್ನು ರೌಡಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಂದಿರುವ ಘಟನೆ ಆನೇಕಲ್‌ ತಾಲೂಕಿನ ಹೆಬ್ಬಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ತಿರುಪಾಳ್ಯದಲ್ಲಿ ಮರಸೂರು ಮಡಿವಾಳದಲ್ಲಿ ನಡೆದಿದೆ.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ ಅವರ ಮಗ ರವಿ(30) ಹತ್ಯೆಯಾದ ವ್ಯಕ್ತಿ. ತಿರುಪಾಳ್ಯದಲ್ಲಿ ಬರುವಾಗ ಹಂತಕರು ರವಿ ಅವರಿಗೆ ಹಿಂದಿನಿಂದ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ.

ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.. ಭೀಮಾತೀರದ ನಿಗೂಢ ಕೊಲೆ ರಹಸ್ಯ!.

ಕೆಳಗೆ ಬಿದ್ದ ರವಿ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮನೆಯ ಮಾಲಿಕರು ಬೆಳಗ್ಗೆ ಎದ್ದು ಹೊರಗಡೆ ಬರುವಾಗ ರಕ್ತದ ಮಡುನಲ್ಲಿ ಮೃತದೇಹ ಪತ್ತೆಯಾಗಿತ್ತು. ರವಿಗೆ ಕುಡಿತ ಹಾಗೂ ಹೆಣ್ಣಿನ ಚಟ ಇದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.