Asianet Suvarna News Asianet Suvarna News

ಗದಗ: ಕುಡಿದು ಕಿರಿಕ್ ಮಾಡ್ತಿದ್ದ ತಂದೆಯನ್ನೇ ಬರ್ಬರವಾಗಿ ಕೊಂದ ಮಗ

ಈ ಸಂಬಂಧ ಗದಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ. 

Son Killed Father in Gadag grg
Author
Bengaluru, First Published Aug 18, 2022, 8:08 AM IST

ಗದಗ(ಆ.18):  ಮಲಗಿದ್ದ ತಂದೆಯ ತಲೆಗೆ ಮಗನೇ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಗದಗ ತಾಲೂಕಿನ ಹುಲಕೋಟೆ ಗ್ರಾಮದಲ್ಲಿ ನಿನ್ನೆ(ಬುಧವಾರ) ರಾತ್ರಿ ನಡೆದಿದೆ. ಕುಡಿದು ಗಲಾಟೆ ಮಾಡ್ತಿದ್ದ ತಂದೆಯ ವರ್ತನೆಯಿಂದ ಬೇಸತ್ತ ಮಗ ವಿಜಯ್ ಚಿಕ್ಕನಟ್ಟಿ ತನ್ನ ತಂದೆ ಗಣೇಶ್ ಚಿಕ್ಕನಟ್ಟಿ(51) ಎಂಬಾತನ ಹತ್ಯೆ ಮಾಡಿದ್ದಾನೆ.

ಗಣೇಶ್ ಕಳೆದ ಕೆಲ ವರ್ಷದಿಂದ ಕುಡಿತದ ದಾಸನಾಗಿದ್ದ, ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಗಣೇಶ್ ಸಂಜೆ ಆಗ್ತಿದ್ದಂತೆ ಕಂಠಮಟ ಕುಡಿದು ಬೇಜಾನ್ ಕಿರಿಕ್ ಮಾಡುತ್ತಿದ್ದನಂತೆ. ಹೆಂಡತಿ ಮಕ್ಕಳನ್ನ ಪೀಡಿಸೋದು ಗಣೇಶನ ನಿತ್ಯದ ಕಾಯಕವಾಗಿತ್ತು. ಇದ್ರಿಂದ ಬೇಸತ್ತಿದ್ದ ಗಣೇಶನ ಕಿರಿಯ ಮಗ, ಊರು ಬಿಟ್ಟು ಅಕ್ಕನ ಮನೆ ಸೇರಿದ್ದ. ಆದ್ರೆ ಊರಲ್ಲೇ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದ ವಿಜಯ್ ತಂದೆ ತಾಯಿಯನ್ನ ನೋಡ್ಕೊಂಡಿದ್ದ. ಆದ್ರೆ ಅತಿಯಾದ ತಂದೆಯ ಕಿರಿಕಿರಿಯಿಂದ ವಿಜಯ್ ಬೇಸತ್ತು ಊರು ಬಿಟ್ಟು ಹೋಗಾದಾಗಿ ತಾಯಿಯ ಬಳಿಯೂ ಹೇಳ್ಕೊಂಡಿದ್ದ. ಆದ್ರೆ ನಿನ್ನೆ ಕೆಲಸಕ್ಕೆ ರಜೆ ಹಾಕಿದ್ದ ವಿಜಯ್ ಸಂಜೆ ತಂದೆಯನ್ನ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. 

KG Halli Murder: ಪೆನ್‌ ವೆಪನ್‌ ಬಳಸಿ ಅರ್ಬಾಜ್‌ನ ಕೊಲೆ ಮಾಡಿದ್ದ ಸಾದ್‌!

ಮೂರು ವರ್ಷದ ಹಿಂದೆ ಮನೆ ಕಟ್ಟಿಸಿದ್ದ ವಿಜಯ್ ಭವಿಷ್ಯದ ಬಗ್ಗೆ ಕನಸ್ಸು ಕಟ್ಟಿಕೊಂಡವ. ವಿಜಯ್‌ಗೆ ಎಲ್ಲರಂತೆ ಜೀವನ ಮಾಡ್ಬೇಕು ಅಂತಾ ಉತ್ಸಹ ಇಟ್ಕೊಂಡಿದ್ನಂತೆ. ಆದ್ರೆ ತಂದೆ ಎನಿಸಿಕೊಂಡಿದ್ದ ಆಸಾಮಿ ಕುಡಿದು ಗಲಾಟೆ ಮಾಡ್ತಾ ಕುಟುಂಬಸ್ಥರಿಗೆ ದೊಡ್ಡ ತಲೆನೋವಾಗಿದ್ದ. ನಿರಂತರ ಕಿರುಕುಳಕ್ಕೆ ಬೇಸತ್ತಿದ್ದ ವಿಜಯ್ ಏಕಾಏಕಿ ತಂದೆಯನ್ನ ಹತ್ಯೆ ಮಾಡಿದ್ದಾನೆ ಅಂತಾ ಕುಟುಂಬಸ್ಥರು ಹೇಳ್ತಿದಾರೆ. 

ಘಟನೆ ನಂತರ ವಿಜಯ್ ಪೊಲೀಸರಿಗೆ ಶರಣಾಗಿದ್ದಾನೆ.‌ ಘಟನಾ ಸ್ಥಳಕ್ಕೆ ಧಾವಿಸಿದ್ದ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಸಿಎನ್ ಹರಿಹರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಣೇಶ್ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಗದಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗ್ತಿದೆ. 
 

Follow Us:
Download App:
  • android
  • ios