ಮಂಡ್ಯ(ಆ.03): ಡಸ್ವ್‌ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್‌ಗಳನ್ನು ಅಡ್ಡಗಟ್ಟಿದರೋಡೆ ನಡೆಸಿರುವ ಘಟನೆ ಪಾಂಡವಪುರದ ತಾಲೂಕಿನ ಬೇಬಿಬೆಟ್ಟದ ಬಳಿ ಮಂಗಳವಾರ ರಾತ್ರಿ ನಡೆದಿದೆ.

ರಾಡ್‌ನಿಂದ ಹಲ್ಲೆ:

ಕಿಶೋರ್‌ ಹಾಗೂ ಸುದೀಪ್‌ ಎಂಬ ಯುವಕರು ಟಿಪ್ಪರ್‌ನಲ್ಲಿ ಕೆ.ಆರ್‌.ಪೇಟೆ ಗ್ರಾಮದ ಹರಳಹಳಿಯಿಂದ ಡಸ್ಟ್‌ ತುಂಬಿಕೊಂಡು ಮೈಸೂರು ಕಡೆಗೆ ಹೋಗುತ್ತಿದ್ದ ವೇಳೆ ತಾಲೂಕಿನ ಬೇಬಿಬೆಟ್ಟದ ಬಳಿ ಕಾರಿನಲ್ಲಿ ಬಂದ ಹೊನಗಾನಹಳ್ಳಿ ಗ್ರಾಮದ ಹೇಮಂತ್‌ ಕುಮಾರ್‌, ಸದಾಶಿವ ಸೇರಿದಂತೆ ಹಲವಾರು ಮಂದಿ ಲಾರಿ ಅಡ್ಡಗಟ್ಟಿದ್ದಾರೆ. ಲಾರಿಯನ್ನು ಅಡ್ಡಗಟ್ಟಿಲಾರಿ ಚಾಲಕನ್ನು ಕೆಳಗೆ ಎಳೆದು ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಟಿಪ್ಪರ್‌ ಚಾಲಕರ ಬಳಿ ಇದ್ದ 10 ಸಾವಿರ ಹಣವನ್ನು ಸಹ ಕಿತ್ತುಕೊಂಡು ಲಾರಿಯನ್ನು ಸಹ ತಮ್ಮ ಜೊತೆಯಲ್ಲೇ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರು ಲಾರಿ ಚಾಲಕರು ಚಿನಕುರಳಿಗೆ ಬಂದು ಮಾಲೀಕರಾದ ಹರೀಶ್‌ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ಪ್ರಕರಣ ದಾಖಲು:

ದರೋಡೆ ಮಾಡಿದ ವ್ಯಕ್ತಿಗಳ ಪೈಕಿ ಹೇಮಂತ್‌ ಕುಮಾರ್‌ ಹಾಗೂ ಸದಾಶಿವ ಅವರ ಮುಖಮಾತ್ರ ಪರಿಚಿಯವಿತ್ತು. ಉಳಿದವರು ನಮಗೆ ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಲಾರಿ ಮಾಲೀಕರ ಸೂಚನೆಯ ಮೇರೆಗೆ ಲಾರಿಚಾಲಕ ಯುವಕರು ಪಟ್ಟಣದ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಬೀಗ ಹಾಕಿದ್ರೂ ಸೇಫ್ ಅಲ್ಲ ಮನೆ: ಹಾಡಹಗಲೇ ದರೋಡೆ

ನಂತರ ಬುಧವಾರ ಬೆಳಗ್ಗೆ ಎರಡು ಲಾರಿಗಳು ಹೊನಗಾನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿವೆ. ದೂರು ದಾಖಲಾದ ಹಿನ್ನೆಲೆಯಲ್ಲಿ ಸಬ್‌ ಇನ್ಸ್‌ ಪೆಕ್ಟರ್‌ ಸುಮಾರಾಣಿ ಹೊನಗಾನಹಳ್ಳಿ ಗ್ರಾಮಕ್ಕೆ ಬಂದು ಪರಿಶೀಲಿಸಿ ಎರಡು ಲಾರಿಗಳನ್ನು ವಶಕ್ಕೆಪಡೆದು ಕೊಂಡುಕೊಂಡು ಪೊಲೀಸ್‌ ಠಾಣೆಗೆ ಕೊಂಡೊಯ್ದಿದ್ದಾರೆ.

ಘಟನೆ ಸಂಬಂಧ ಆರೋಪಿಗಳ ವಿರುದ್ಧ ದರೋಡೆ ಪ್ರಕರಣದಡಿ ದೂರು ದಾಖಲಾಗಿದೆ. ಪ್ರಕರಣದಿಂದ ಬಚಾವ್‌ ಆಗಲು ಹೇಮಂತ್‌ ಕುಮಾರ್‌ ಆತ್ಮಹತ್ಯೆಯ ನಾಟಕವಾಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ