ರಸ್ತೆ ಅಪಘಾತ: ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಶಾಸಕ ಶರಣು ಸಲಗರ

ಬೈಕ್‌ಗಳ ಮಧ್ಯೆ ಸಂಭವಿಸಿದ ರಸ್ತೆ ಅಪಘಾತ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾಹನ ಸವಾರರನ್ನು ಆಸ್ಪತ್ರ ಸಾಗಿಸಿ ಮಾನವಿಯತೆ ಮೆರೆದ ಶಾಸಕ ಶರಣು ಸಲಗರ

 

Road accident MLA Sharanu Salagara showed humanity by transporting the injured to the hospital bidar rav

ಬೀದರ್ (ಆ.19) : ಜಿಲ್ಲೆಯ ಬಸವಕಲ್ಯಾಣ ಪಟ್ಟಣ ಸಸ್ತಾಪುರ ಬಂಗ್ಲಾಬಳಿ ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಡಿಕ್ಕಿಯಾದ ರಭಸಕ್ಕೆ ರಸ್ತೆ ಮೇಲೆ ದೂರ ದೂರಕ್ಕೆ ಚದುರಿ ಬಿದ್ದಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದು ರಾಷ್ಟ್ರೀಯ ಹೆದ್ದಾರಿ? ಅಲ್ಲ; ಸಾವಿನ ಹೆದ್ದಾರಿ ..!

ಮಾನವೀಯತೆ ಮೆರೆದ ಬಸವ ಕಲ್ಯಾಣ ಶಾಸಕ:  ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿ ಸವಾರರು ಗಂಭೀರ ಗಾಯಗೊಂಡು ರಸ್ತೆಯ ಮೇಲೆ ಬಿದ್ದಿದ್ದರು. ಇದೇ ಸಮಯಕ್ಕೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಶಾಸಕರು ಪ್ರಯಾಣಿಸುತ್ತಿದ್ದಾಗ ರಸ್ತೆ ಮೇಲೆ ಗಾಯಗೊಂಡು ಬಿದ್ದಿದ್ದವರನ್ನು ಕಂಡು ತಕ್ಷಣ ಸಹಾಯ ದಾವಿಸಿಬಂದ ಬಸವಕಲ್ಯಾಣ ಶಾಸಕರಾದ ಶರಣು ಸಲಗರ. ಈ ವೇಳೆ ಆಂಬ್ಯುಲೆನ್ಸ್ ಗೆ ಕಾಯದೇ ಶಾಸಕರು ತಾವೇ ಮುಂದೆ ನಿಂತು ತಮ್ಮ ಸ್ವಂತ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಿದ ಬಳಿಕವೇ ಮರಳಿದ್ದಾರೆ. ಶಾಸಕ ಶರಣು ಸಲಗರ ಅವರ ಮಾನವೀಯ ಕಾರ್ಯಕ್ಕೆ, ಸಮಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಬೈಕ್‌ಗೆ ಲಾರಿ ಡಿಕ್ಕಿ: ಮಹಿಳೆ ದಾರುಣ ಸಾವು

ಶಿವಮೊಗ್ಗ: ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಘಟನೆ ಗುರುವಾರ ಬೆಳಗ್ಗೆ ಬೈಪಾಸ್‌ ರಸ್ತೆಯ ಯಮಹಾ ಶೋ ರೂಂ ಎದುರು ನಡೆದಿದೆ. ಬೈಪಾಸ್‌ ಸಮೀಪದ ನಿವಾಸಿ ಸಯ್ಯದ್‌ ಸೈಫುಲ್ಲಾ ಹಾಗೂ ಪತ್ನಿ ಸಂಜೀದಾ ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ಸಂದರ್ಭ ಹಿಂಬದಿಯಿಂದ ಬಂದ ಲಾರಿಗೆ ದಾರಿ ಬಿಟ್ಟುಕೊಡುವ ಸಂದರ್ಭ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಿಂದ ಕೆಳಗೆ ಬಿದ್ದ ಸಂಜಿದಾ ಅವರ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಯ ಮುಂಭಾಗ ಮತ್ತು ಹಿಂಭಾಗದ ನಂಬರ್‌ ಪ್ಲೇಟ್‌ ಸಹ ಅಳಿಸಿಹೋಗಿದೆ. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದ ವೈದ್ಯಕೀಯ ಸಿಬ್ಬಂದಿ

ಲಾರಿ-ಬಸ್ ಡಿಕ್ಕಿ, ವ್ಯಕ್ತಿ ಸಾವು:

ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಡಿಕ್ಕಿಯ ಹಿನ್ನೆಲೆಯಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಘಟನೆ ಆಳಂದದಲ್ಲಿ ಸಂಭವಿಸಿದೆ. ಬೈಕ್‌ ಸವಾರ ಖಜೂರಿಯ ವೈಜನಾಥ ತಂದೆ ಸಿದ್ರಾಮಪ್ಪ ಹುಳಪಲ್ಲೆ (38) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಲಾರಿಚಾಲಕನ ಅತಿಯಾದ ಮಧ್ಯ ಸೇವನೆ ಮಾಡಿ ವೇಗವಾಗಿ ಲಾರಿ ಚಲಾಯಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆಳಂದದಿಂದ ಸ್ವಗ್ರಾಮ ಖಜೂರಿಗೆ ಬೈಕ್‌ ಮೇಲೆ ಹೊರಟ್ಟಿದ್ದ ಸವಾರನಿಗೆ ಉಮರಗಾ ಮಾರ್ಗವಾಗಿ ವೇಗವಾಗಿ ಬಂದ ಲಾರಿ ಡಿಕ್ಕಿಹೊಡೆದಿದೆ. ಪಲ್ಟಿಯಾದ ಲಾರಿಯಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಆಳಂದ ಠಾಣೆಯ ಪೊಲೀಸ್‌ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನಿಗೆ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

 

Latest Videos
Follow Us:
Download App:
  • android
  • ios