ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದ ವೈದ್ಯಕೀಯ ಸಿಬ್ಬಂದಿ
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ 30 ವರ್ಷದ ವ್ಯಕ್ತಿಯ ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಕೊಂಡೊಯ್ದಿದ್ದಾರೆ.
ಹುಬ್ಬಳ್ಳಿ (ಆ.17): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ 30 ವರ್ಷದ ವ್ಯಕ್ತಿಯ ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಕೊಂಡೊಯ್ದಿದ್ದಾರೆ. ಕಿಮ್ಸ್ ಆಸ್ಪತ್ರೆಯಿಂದ ಬೆಂಗಳೂರಿಗೆ ವಿಮಾನದ ಮೂಲಕ ರವಾನೆ ಮಾಡಲಾಗಿದ್ದು, ಅಂಗಾಂಗ ಕಸಿಗೆ ಯಕೃತ್‌ನ್ನು ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪ್ರಕಾಶ್ ಲಮಾಣಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಾಗಿದ್ದು, ಕೆಲ ದಿನಗಳ ಹಿಂದೆ ನಡೆದಿದ್ದ ರಸ್ತೆ ಅಪಘಾತವಾಗಿ, ತಲೆಗೆ ತೀವ್ರ ಪೆಟ್ಟಾಗಿ ಕಿಮ್ಸ್‌ಗೆ ದಾಖಲಾಗಿದ್ದರು.
ಪ್ರಕಾಶ್ ಅವರ ಮೆದುಳು ನಿಷ್ಕ್ರಿಯವಾಗಿದ್ದರೂ ಯಕೃತ್ ಮತ್ತು ಕಿಡ್ನಿ ಕಾರ್ಯ ನಿರ್ವಹಿಸುತ್ತಿತ್ತು. ಹಾಗಾಗಿ ಅಂಗಾಂಗ ದಾನದ ಕುರಿತು ಕಿಮ್ಸ್ ವೈದ್ಯರ ತಂಡ ಕುಟುಂಬದವರೊಂದಿಗೆ ಚರ್ಚೆ ಮಾಡಿ ಬೆಂಗಳೂರಿನ ಜೆ.ಪಿ. ನಗರದ ಆಸ್ಪತ್ರೆಯ ರೋಗಿಯೊಬ್ಬರಿಗೆ ಯಕೃತ್ ಕಸಿ ಅಗತ್ಯವಿದ್ದ ಹಿನ್ನೆಲೆಯಲ್ಲಿ ಯಕೃತ್‌ನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನಿಸಲಾಗಿದೆ. ಪ್ರಕಾಶ್ ಅವರ ಕಿಡ್ನಿಯನ್ನು ಕಿಮ್ಸ್‌ನಲ್ಲಿಯೇ ದಾಖಲಾದ 39 ವರ್ಷದ ವ್ಯಕ್ತಿಗೆ ಕಸಿ ಮಾಡುವ ಉದ್ದೇಶದಿಂದ ವೈದ್ಯರ ಕೋರಿಕೆ ಮೇರೆಗೆ ಕಿಮ್ಸ್‌ನಿಂದ ವಿಮಾನ ನಿಲ್ದಾಣದವರೆಗೆ 6.5 ಕಿ.ಮೀ. ಮಾರ್ಗವನ್ನು ಝೀರೋ ಟ್ರಾಫಿಕ್ ಮೂಲಕ ಕೇವಲ ಎರಡು ನಿಮಿಷದಲ್ಲಿ ವಿಮಾನ ನಿಲ್ದಾಣಕ್ಕೆ ಆ್ಯಂಬುಲೆನ್ಸ್ ತಲುಪಿಸಿದೆ. ಇನ್ನು ಸ್ಟಾರ್ ಏರ್ ವಿಮಾನದ ಮೂಲಕ ಬೆಂಗಳೂರಿಗೆ ಯಕೃತ್ ಅನ್ನು ವೈದ್ಯಕೀಯ ಸಿಬ್ಬಂದಿ ಕೊಂಡೊಯ್ದಿದ್ದಾರೆ.
ಬಿಜೆಪಿ ರಾಜಕೀಯ ಸಂಸ್ಕೃತಿಯ ಚಿತ್ರಣವನ್ನೇ ಬದಲಿಸಿದೆ: ಶಾಸಕ ಎನ್.ಮಹೇಶ್
ಕಾಂಪೌಂಡ್ ಗೇಟ್ ಕುಸಿದು ಮಗು ಸಾವು: ಬೈಕ್ ಡಿಕ್ಕಿಯಾಗಿ ಮನೆ ಕಾಂಪೌಂಡ್ ಗೇಟ್ ಕುಸಿದು ನಾಲ್ಕು ವರ್ಷದ ಮಗು ಸಾವನಪದಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಹಾಂತೇಶ ನಗರದಲ್ಲಿ ನಡೆದಿದೆ. ಅಜಯ್ ಸುಭಾಷ ದಂಡಗಲ್ಲ (4) ಘಟನೆಯಲ್ಲಿ ಮೃತ ಬಾಲಕ. ಮನೆ ಮುಂಭಾಗದ ಗೇಟ್ ಬಳಿ ಆಟ ಆಡುತ್ತಿದ್ದ ಬಾಲಕ ಅಜಯ್, ಅದೇ ವೇಳೆ ಕಾಂಪೌಂಡ್ ಗೇಟ್‌ಗೆ ಬೈಕ್ ಸವಾರ ಡಿಕ್ಕಿ ಹೊಡೆದ ರಭಸಕ್ಕೆ ಬಾಲಕನ ಮೇಲೆ ಗೇಟ್ ಕುಸಿದು ಬಿದ್ದಿದೆ. ತಕ್ಷಣವೇ ರಾಮದುರ್ಗ ತಾಲೂಕಾಸ್ಪತ್ರೆಗೆ ಸ್ಥಳೀಯರು ಅಜಯ್ ರವಾನಿಸಿದರು. ಆದರೆ ಚಿಕಿತ್ಸೆ ಫಲಿಸದೇ ಅಜಯ್ ಸುಭಾಷ ದಂಡಗಲ್ಲ ಸಾವನಪ್ಪಿದ್ದು, ಬೈಕ್ ಸವಾರ ಮಹ್ಮದ್‌ರೈಸ್ ಶಿರೋಳನನ್ನು ರಾಮದುರ್ಗ ಪೊಲೀಸರು ಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಕೋಲಾರದಲ್ಲಿ ತಹಶಿಲ್ದಾರ್ ಎದುರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನ: ಜಮೀನು ವಿವಾದ ಹಿನ್ನಲೆಯಲ್ಲಿ ತಹಶಿಲ್ದಾರ್ ಎದುರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರ ತಾಲೂಕಿನ ದೊಡ್ಡವಲ್ಲಬ್ಬಿ ಗ್ರಾಮದಲ್ಲಿ ನಡೆದಿದೆ. ಅಶ್ವಥ್ ನಾರಾಯಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ತಂದೆ ಮಾಜಿ ಯೋಧ ನಾಗಪ್ಪ ಎನ್ನುವರ ಕಾಲದಿಂದ ಉಳುಮೆ ಮಾಡ್ತಿದ್ದ ಗ್ರಾಮದ 3.16 ಎಕರೆ ಜಮೀನು ಸಾಗುವಳಿ ಚೀಟಿ ನೀಡುವ ವಿಚಾರಕ್ಕೆ ಜಮೀನು ಮಂಜೂರಿಗೆ ಮನವಿ ಮಾಡಿ ಅಶ್ವಥ್ ನಾರಾಯಣ ಅರ್ಜಿ ಸಲ್ಲಿಸಿದ್ದರು. ಈ ವಿಚಾರಕ್ಕೆ ಕೆಲ ಗ್ರಾಮಸ್ಥರು ತಕರಾರು ಅರ್ಜಿ ಸಲ್ಲಿಸಿದ್ದರು. ಇಂದು ಸ್ಥಳ ಪರಿಶೀಲನೆಗೆಂದು ಆಗಮಿಸಿದ್ದ ತಹಶಿಲ್ದಾರ್ ನಾಗರಾಜ್ ಎದುರು ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಅಶ್ವಥ್ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ಅಶ್ವಥ್ ನಾರಾಯಣನನ್ನು ದಾಖಲಿಸಲಾಗಿದೆ.
ವಿದ್ಯಾರ್ಥಿಗಳು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು: ಜಿಲ್ಲಾಧಿಕಾರಿ ಆರ್.ಲತಾ
ಚಿಕ್ಕೋಡಿಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣು: ಚಿಕ್ಕೊಡಿ ತಾಲೂಕಿನ ಅಂಕಲಿ ಗ್ರಾಮ ನಿವಾಸಿ ವಿರುಪಾಕ್ಷಿ ಸಿದ್ಧಪ್ಪಾ ಮಗದುಮ (56) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿರುಪಾಕ್ಷಿ ಚಿಕ್ಕೊಡಿ ತಾಲೂಕಿನ ಅಂಕಲಿ ಗ್ರಾಮ ನಿವಾಸಿಯಾಗಿದ್ದು,ಚಿಕ್ಕೋಡಿ ಪಟ್ಟಣದ ಇಂದಿರಾನಗರದ ಗುಡ್ಡದ ಗಣಪತಿ ದೇವಸ್ಥಾನ ಬಳಿ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಡೆತ್ ನೋಟ್ ಸಿಕ್ಕಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣನಾಗಿದ್ದೇನೆ ಎಂದು ಬರೆಯಲಾಗಿದ್ದು, ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.