ರಿತೇಶ್ ಕುಮಾರ್ ಸಿಂಗ್ ಉತ್ತರಕನ್ನಡ ಜಿಲ್ಲೆಯ ಸೆಟ್ಲ್‌ಮೆಂಟ್ ಕಾರ್ಯದರ್ಶಿ: ಸಚಿವ ಮಂಕಾಳು ವೈದ್ಯ ಆರೋಪ
ಶಿರಸಿ - ಕುಮಟಾ ಹೆದ್ದಾರಿ ಬಂದ್ ಮಾಡಲು ನನ್ನ ವಿರೋಧ ಇದೆ. ಇಲ್ಲಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬರಿದ್ದಾರೆ ರಿತೇಶ್ ಕುಮಾರ್ ಸಿಂಗ್ ಅಂತ, ಉಸ್ತವಾರಿನೋ ಅಥವಾ RNS, IRB ಕಂಪನಿಗಳ ಸೆಟ್ಲಮೆಂಟ್‌ಗೆ ಬರುತ್ತಾರೋ ಗೊತ್ತಿಲ್ಲ. ನಮ್ಮ ಯಾವ ಮೀಟಿಂಗ್‌ಗೂ ಉಸ್ತುವಾರಿ ಕಾರ್ಯದರ್ಶಿ ಬಂದಿಲ್ಲ. ಈಗ ಹೆದ್ದಾರಿ ಬಂದ್ ಮಾಡಲು ಹೇಳಿ ಹೋಗಿದ್ದಾರೆ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ
ಕಾರವಾರ(ನ.01): ರಿತೇಶ್ ಕುಮಾರ್ ಸಿಂಗ್ ಉತ್ತರಕನ್ನಡ ಜಿಲ್ಲೆಯ ಸೆಟ್ಲ್‌ಮೆಂಟ್ ಕಾರ್ಯದರ್ಶಿ ಎಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಗಂಭಿರವಾಗಿ ಆರೋಪಿಸಿದ್ದಾರೆ. ಇಂದು(ಶುಕ್ರವಾರ) ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಮಾತನಾಡಿದ ಸಚಿವ ಮಂಕಾಳು ವೈದ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಮಿತ್ತ ಶಿರಸಿ- ಕುಮಟಾ ಹೆದ್ದಾರಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಚಿವ ಮಂಕಾಳು ವೈದ್ಯ, ಶಿರಸಿ - ಕುಮಟಾ ಹೆದ್ದಾರಿ ಬಂದ್ ಮಾಡಲು ನನ್ನ ವಿರೋಧ ಇದೆ. ಇಲ್ಲಿ ಉಸ್ತುವಾರಿ ನೋಡಿಕೊಳ್ಳಲು ಒಬ್ಬರಿದ್ದಾರೆ ರಿತೇಶ್ ಕುಮಾರ್ ಸಿಂಗ್ ಅಂತ, ಉಸ್ತವಾರಿನೋ ಅಥವಾ RNS, IRB ಕಂಪನಿಗಳ ಸೆಟ್ಲಮೆಂಟ್‌ಗೆ ಬರುತ್ತಾರೋ ಗೊತ್ತಿಲ್ಲ. ನಮ್ಮ ಯಾವ ಮೀಟಿಂಗ್‌ಗೂ ಉಸ್ತುವಾರಿ ಕಾರ್ಯದರ್ಶಿ ಬಂದಿಲ್ಲ. ಈಗ ಹೆದ್ದಾರಿ ಬಂದ್ ಮಾಡಲು ಹೇಳಿ ಹೋಗಿದ್ದಾರೆ. ನನ್ನ ಮಾಹಿತಿ ಪ್ರಕಾರ ಕಳೆದ ತಿಂಗಳು ಹೆದ್ದಾರಿ ಬಂದ್ ಆಗಬೇಕಿತ್ತು, ಆಗಿಲ್ಲ. ನವೆಂಬರ್ ನಲ್ಲಿ ಬಂದ್ ಮಾಡಿಸಲು ಮತ್ತೆ ಅನುಮತಿ ಕೊಟ್ಟಿದ್ದಾರೆ. ಉಸ್ತುವಾರಿ ಕಾರ್ಯದರ್ಶಿ ಅಂತ ನಮ್ಮಲ್ಲಿ ಒಬ್ರು ಅಧಿಕಾರಿ ಇದ್ದಾರೆ. ರಿತೇಶ್ ಕುಮಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೋ ಅಥವಾ ಸೆಟ್ಲ್‌ಮೆಂಟ್ ಉಸ್ತುವಾರಿಯೋ ಎಂದು ತಿಳಿದುಕೊಳ್ತೇನೆ ಎಂದು ಹೇಳಿದ್ದಾರೆ.
ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಮಂಕಾಳು ವೈದ್ಯ
ಯಾವುದೇ ಕಾರಣಕ್ಕೆ ಶಿರಸಿ ಕುಮಟಾ ರಸ್ತೆ ಬಂದ್ ಆಗಬಾರದು. ಕಂಪನಿಗೆ 3 ವರ್ಷ ಅಗ್ರಿಮೆಂಟ್ ಮಾಡಿ ಕೊಟ್ಟಿದ್ರೂ ಕಾಮಗಾರಿ ಪೂರ್ಣ ಆಗಿಲ್ಲ. ಮತ್ತೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಯಾವುದೇ ಅಗ್ರಿಮೆಂಟ್ ನಲ್ಲಿ ಹೆದ್ದಾರಿ ಬಂದ್ ಮಾಡಿ ಕೊಡಬೇಕು ಎಂಬುವುದು ಇಲ್ಲ. ಸಂಸದರು ಬಂದ್ ಮಾಡಬೇಕು ಎಂದು ಹೇಳಿದ್ದಾರೆ, ಅವರ ಆಸಕ್ತಿ ಏನಿದೆ ಗೊತ್ತಿಲ್ಲ. ನಮ್ಮ ಪಕ್ಷದ ಶಾಸಕರೂ ಕೂಡ ಬಂದ್‌ಗೆ ಬೆಂಬಲ ಕೊಡುತ್ತಿರುವುದರಿಂದ ನಾನು ಸುಮ್ಮನಿದ್ದೇನೆ. ಕುಮಟಾ ಶಿರಸಿ ಹೆದ್ದಾರಿ ಬಂದ್ ಮಾಡಲು ನನ್ನ ವಿರೋಧ ಇದೆ, ಬಂದ್ ಆಗಬಾರದು. ಬಂದ್ ಮಾಡಲು ಜಿಲ್ಲಾಧಿಕಾರಿ ಕೂಡ ಯಾರಿಗೂ ಸೂಚನೆ ಕೊಟ್ಟಿಲ್ಲ. ಉಸ್ತುವಾರಿ ಕಾರ್ಯದರ್ಶಿ ಮಾತ್ರ ಬಂದ್ ಗೆ ಅನುವು ಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆರೋಪಿಸಿದ್ದಾರೆ.