ಶಿವಮೊಗ್ಗ (ಮಾ.17):  ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗಿ ಮಂದಿರದ ಸ್ವಾಮೀಜಿ ಅಂತಿಮ ಯಾತ್ರೆಯಲ್ಲಿ  ಸಂಸದ ಬಿ ವೈ ರಾಘವೇಂದ್ರ ರಿಂದ ಪಾಲ್ಗೊಂಡು ದರ್ಶನ ಪಡೆದರು.  

ಲಿಂಗೈಕ್ಯರಾದ ಕಾಳೇನಹಳ್ಳಿ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳವರ ಅಂತಿಮ ಯಾತ್ರೆ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ರಾಘವೇಂದ್ರ ಭಾಗಿಯಾಗಿದ್ದರು. 

ಅನಾರೋಗ್ಯದಿಂದ ಮಾರ್ಚ್ 16ರ ಬೆಳಗ್ಗೆ ಶ್ರೀ ರೇವಣಸಿದ್ಧ ಸ್ವಾಮೀಜಿ ಲಿಂಗೈಕ್ಯರಾಗಿದ್ದು ಇಂದು ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನೆರವೇಲಿದೆ.  

ಶಿಕಾರಿಪುರ ಕಾಳೇನಹಳ್ಳಿ ರೇವಣಸಿದ್ಧ ಸ್ವಾಮೀಜಿ ಲಿಂಗೈಕ್ಯ

ರೇವಣಸಿದ್ಧ ಮಹಾಸ್ವಾಮಿಗಳ  ಅಂತಿಮ ಯಾತ್ರೆಯಲ್ಲಿ ಆನಂದಪುರ ಬೆಕ್ಕಿನಕಲ್ಮಠ ಜಗದ್ಗುರು,  ಹೊಸಪೇಟೆಯ ಜಗದ್ಗುರು, ಗದುಗಿನ ತೋಂಟದಾರ್ಯ ಜಗದ್ಗುರು, ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರುಗಳು ಭಾಗಿಯಾಗಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲಿ ನಡೆದಾಡುವ ದೇವರು ಎಂದು ಖ್ಯಾತರಾಗಿದ್ದ ಸ್ವಾಮೀಜಿ ನಿಧನಕ್ಕೆ ಗಣ್ಯರ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.