ಶಿಕಾರಿಪುರ (ಮಾ.16): ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದ  ಶ್ರೀ ರೇವಣಸಿದ್ದ ಮಹಾಸ್ವಾಮಿಗಳು ನಿಧನರಾಗಿದ್ದಾರೆ. 

ಅಖಿಲ ಭಾರತ ವೀರಶೈವ ಮಹಾಸಭಾ ಶಿಕಾರಿಪುರ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾಗಿದ್ದ ಅವರು ಇಂದು ಬೆಳಗಿನ ಜಾವ  ಲಿಂಗೈಕ್ಯರಾಗಿದ್ದಾರೆ.   

ಬಿಜಾಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಜನಿಸಿದ ಸ್ವಾಮೀಜಿ ಅವರು ಬಾಲ್ಯಾವಸ್ಥೆಯಲ್ಲಿಯೇ ಸನ್ಯಾಸ ಸ್ವೀಕರಿಸಿ, ಆಧ್ಯಾತ್ಮಿಕ ಉನ್ನತಿ ಸಾಧಿಸಿದ್ದರು.  

ಏ.1ಕ್ಕೆ 114 ಮಕ್ಕಳಿಗೆ ಶಿವಕುಮಾರ ಶ್ರೀ ಹೆಸರು .

ಅವರು ತಮ್ಮ ಸಮಾಜಮುಖಿ ಚಿಂತನೆಗಳ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಎಲ್ಲಾ ಧರ್ಮದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಸ್ವಾಮೀಜಿ ಇದೀಗ ಅಪಾರ ಭಕ್ತ ವೃಂದ ಅಗಲಿದ್ದಾರೆ.

 ಕಾಳೇನಹಳ್ಳಿಯ ರೇವಣಸಿದ್ಧ ಮಹಾಸ್ವಾಮಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 ಕಾಳೇನಹಳ್ಳಿಯ ಸ್ವಾಮೀಜಿ ನಿಧನರಾದ ಹಿನ್ನೆಲೆ ಸ್ವಾಮೀಜಿ ಅವರು ಅಂತಿಮ ದರ್ಶನ ಪಡೆಯಲು ಸಿಎಂ ಶಿಕಾರಿಪುರಕ್ಕೆ ತೆರಳುವ ಸಾಧ್ಯತೆ ಮಧ್ಯಾಹ್ನ ಶಿಕಾರಿಪುರಕ್ಕೆ ತೆರಳಿ ಸ್ವಾಮೀಜಿ ಅಂತಿಮದರ್ಶನ ಪಡೆದುಕೊಂಡು ಬೆಂಗಳೂರಿಗೆ ವಾಪಸ್ ಅಗಲಿದ್ದಾರೆ. 
 
ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.