Asianet Suvarna News Asianet Suvarna News

ಪ್ರವಾಹದಿಂದ ಸೇತುವೆ ಮುಳುಗಡೆ: ಮಹಿಳೆಯ ಸಹಾಯಕ್ಕೆ ಬಂದ ನಿವೃತ್ತ ನರ್ಸ್, ಸುಸೂತ್ರ ಹೆರಿಗೆ!

ನಿವೃತ್ತ ನರ್ಸ್ ನೆರವಿನಿಂದ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಗರ್ಭಿಣಿ ಶಿಲ್ಪ ಅವರಿಗೆ  ಹೆರಿಗೆ ಮಾಡಿಸಿ, ತಾಯಿ ಮಕ್ಕಳ ಜೀವ ರಕ್ಷಿಸಿದ್ದಾರೆ.

retired nurse Helped woman blessed with twins Boys at Siruguppa rbj
Author
First Published Sep 9, 2022, 2:33 PM IST

ಬಳ್ಳಾರಿ, (ಸೆಪ್ಟೆಂಬರ್.09): ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಗೆ ನಿವೃತ್ತ ನರ್ಸ್ ಒಬ್ಬರು ಸಹಾಯಕ್ಕೆ ಬಂದು ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

ವೇದಾವತಿ ನದಿ ನೀರಿನ ಪ್ರವಾಹದಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮುಳುಗಡೆಯಾಗಿ ತಾಲೂಕು ಕೇಂದ್ರದಿಂದ ಸಂಪರ್ಕ ಕಡಿತಗೊಂಡಿದ್ದರಿಂದ  ನಿವೃತ್ತ ನರ್ಸ್ ನೆರವಿನಿಂದ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಗರ್ಭಿಣಿ ಶಿಲ್ಪ ಅವರಿಗೆ  ಹೆರಿಗೆ ಮಾಡಿಸಿ, ತಾಯಿ ಮಕ್ಕಳ ಜೀವ ರಕ್ಷಿಸಿದ್ದಾರೆ.

Viral Video : 6 ತಿಂಗಳ ಮಗುವಿಗೆ ಪುಷ್ ಅಪ್ ಹೇಳ್ಕೊಟ್ಟ ತಂದೆ

ಸಿರುಗುಪ್ಪ ತಾಲೂಕಿನ ಬೆಳಗಲ್ ಗ್ರಾಮದ ಶಿಲ್ಪ ಅವರಿಗೆ ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಸಿರುಗುಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರಾರಾವಿ ಸೇತುವೆ ಮೇಲೆ ನೀರು ಹರಿದು ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಶಿಲ್ಪ ಅವರು ಗಂಡ ಮತ್ತು ಫೋಷಕರು ಆತಂಕಗೊಂಡಿದ್ದರು. ಗರ್ಭದಲ್ಲಿ ಅವಳಿ ಮಕ್ಕಳಿರುವುದರಿಂದ ಗಂಡಾಂತರ ಹೆರಿಗೆಯನ್ನು ನುರಿತ ತಜ್ಞರಿಂದಲೇ ಮಾಡಿಸಬೇಕಾಗುತ್ತದೆ. ಆದರೆ  ಅನಿವಾರ್ಯವಾಗಿ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈ ವಿಷಯ ತಿಳಿದ ಸಿರುಗುಪ್ಪ ತಾಲೂಕು ವೈದ್ಯಾಧಿಕಾರಿ ಈರಣ್ಣ ಅವರು ಕೂಡಲೇ ಇತ್ತೀಚೆಗೆ ನಿವೃತ್ತಿಯಾಗಿರುವ ನರ್ಸ್ ಮತ್ತು ಫಾರ್ಮಸಿ ಅಧಿಕಾರಿಯಾದ ಬಸವರಾಜ್ ಅವರ ಪತ್ನಿ ಗಾಯತ್ರಿ ಬಾಯಿ ಅವರಿಗೆ ಮಾಹಿತಿ ನೀಡಿದ್ದಾರೆ. ಗಾಯತ್ರಿಯವರು ಕೂಡಲೇ ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಶಿಲ್ಪ ಅವರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.

 ಅವಳಿ ಗಂಡು ಮಕ್ಕಳಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ನಿವೃತ್ತಿಯಾಗಿರುವ ನರ್ಸ್ ಗಾಯತ್ರಿ ಬಾಯಿ ಅವರ ಸಮಯಪ್ರಜ್ಞೆಯಿಂದಲೇ ಯಾವುದೇ ಸಮಸ್ಯೆ ಇಲ್ಲದೆ ಹೆರಿಗೆ ಆಗಿದೆ. ನರ್ಸ್ ಅವರ ಕಾರ್ಯಕ್ಕೆ ಶಿಲ್ಪ ಕುಟುಂಬದವರು, ಸಾರ್ವಜನಿಕರು ಮತ್ತು ತಾಲೂಕು ಆರೋಗ್ಯಾಧಿಕಾರಿ ಈರಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios