Asianet Suvarna News Asianet Suvarna News

ಬೆಂಗಳೂರಿನಲ್ಲಿ 144, ರಾತ್ರಿ 10ಕ್ಕೆ ಎಲ್ಲ ಬಂದ್ ಆಗ್ಬೇಕು..ಯಾವುದಕ್ಕೆಲ್ಲ ಬ್ರೇಕ್?

ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ/ ಅಗತ್ಯ ಸೇವೆಗಳಿಗೆ ಟಡ್ಡಿ ಇಲ್ಲ/ ನಿಮ್ಮ ದಾಖಲೆಗಳೇ ನಿಮ್ಮ ಪಾಸ್/ ಪಾಸ್ ನೀಡುವ ಪ್ರಶ್ನೆಯೇ ಇಲ್ಲ/ ರಾತ್ರಿ ಪಾಳಿ ಕೆಲಸ ಮಾಡುವವರು ರಾತ್ರು ಹತ್ತು ಗಂಟೆ ಒಳಗೆ ತೆರಳಬೇಕು

Restrictions Under Section 144 Imposed in Bengaluru commissioner kamal pant Press meet mah
Author
Bengaluru, First Published Apr 9, 2021, 6:25 PM IST

ಬೆಂಗಳೂರು(ಏ.  08)  ಕೊರೋನಾ ನಿಯಂತ್ರಣಕ್ಕೆ ರಾಜ್ಯದ ಎಂಟು ಕಡೆ ರಾತ್ರಿ ಕೊರೋನಾ ನಿಷೇಧಾಜ್ಞೆ ಶನಿವಾರದಿಂದ  ಜಾರಿಯಾಗಲಿದೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿನಲ್ಲಿ ಶನಿವಾರದಿಂದ 144 ಸೆಕ್ಷನ್ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾತ್ರಿ ಹತ್ತು ಗಂಟೆ ನಂತರ  ಅಗತ್ಯ ಚಟುವಟಿಕೆ ಹೊರತುಪಡಿಸಿ ಉಳಿದಿದ್ದಕ್ಕೆ  ಬ್ರೇಕ್ ಹಾಕಲಾಗಿದೆ. ನಾಳೆ 144 ಸೆಕ್ಷನ್ ಜಾರಿ ಮಾಡಲಾಗುತ್ತಿದೆ.  ರಾತ್ರಿ 10 ರಿಂದ ಬೆಳಗ್ಗೆ 5 ತನಕ  ಎಲ್ಲ ಸಂಚಾರಕ್ಕೆ ತಡೆ ಹಾಕಲಾಗಿದೆ.

ಹೆಚ್ಚಾದರೆ ಬೆಡ್ ವ್ಯವಸ್ಥೆ ಮಾಡುವುದು ಕಷ್ಟ

ಆಸ್ಪತ್ರೆಗೆ ಹೋಗೋರಿಗೆ ಏನು ತೊಂದರೆ ಆಗಲ್ಲ.  ರಾತ್ರಿ ಪಾಳಿ ಕೆಲಸ ಮಾಡುವವರು ರಾತ್ರಿ10 ಕ್ಕೂ ಮುಂಚೆ ತಲುಪಬೇಕು.  ಬೆಳಗ್ಗೆ5  ರ ನಂತರ ಆಚೆ ಬರಬೇಕು. ಹೋಮ್‌ಡಿಲೆವರಿ ಗೆ ಅವಕಾಶ ಇದೆ  ಎಂದು ತಿಳಿಸಿದರು. ಸುಖಾ ಸುಮ್ಮನೆ ಓಡಾಟ ಮಾಡಿದರೆ ವಾಹನ ಸೀಜ್ ಮಾಡಲಾಗುವುದು. 

ರಾತ್ರಿ ಸಮಯದಲ್ಲಿ ಬೆಂಗಳೂರಿಗೆ ಬರುವವರು ಹೊರ ಹೋಗುವವರು ಬರಬಹುದು ಹೋಗಬಹುದು. ಆದ್ರೆ ಟ್ರಾವೆಲ್ ಡಾಕ್ಯುಮೆಂಟ್ ಕೊಡಬೇಕು. ಎಲ್ಲಾ ಫೈ ಓವರ್ ಮಾತ್ರ ಅಲ್ಲ ಇಡೀ ಸಿಟಿ ಬಂದ್ ಆಗಿರುತ್ತದೆ. ಪಾಸ್ ಗಳ‌ ನೀಡುವ ಪ್ರಶ್ನೆಯೇ ಇಲ್ಲ. ಅವ್ರ ದಾಖಲೆಗಳೇ ಅವರ ಪಾಸ್  ಎಂದು ತಿಳಿಸಿದರು.

ಹೋಟೇಲ್ 10 ಗಂಟೆ ನಂತರ ಓಪನ್ ಇದ್ರೆ ಸೀಜ್ ಮಾಡಲಾಗುತ್ತದೆ  ಎಂಡಿಎಂಎ ಆಕ್ಟ್ ಅಡಿಯಲ್ಲಿ ಕೇಸ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ನಾಳೆಯಿಂದ ಚೆಕ್ ಪಾಯಿಂಟ್ ಮಾಡಿಕೊಳ್ಳುತ್ತೇವೆ. ಇವತ್ತು ಬ್ಯಾರಿಕೇಡ್ ಹಾಕಲ್ಲ, ಚೆಕ್ ಪಾಯಿಂಟ್ ಹಾಕಲ್ಲ. ನಾಳೆ ರೆಡಿ ಮಾಡಿಕೊಳ್ಳುತ್ತೆವೆ ಈ ಬಗ್ಗೆ ಮೀಟಿಂಗ್ ಮಾಡುತ್ತೇವೆ. ಅಡಿಷನಲ್ ಸಿಪಿ ಮುರುಗನ್ ಗೆ ಇಡೀ ಉಸ್ತುವಾರಿ ವಹಿಸಲಾಗಿದೆ ಎಂದು ತಿಳಿಸಿದರು.

 

Follow Us:
Download App:
  • android
  • ios