ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪ್ರವಾಸಿ ತಾಣಗಳಿಗೆ ನಿರ್ಬಂಧ, ಪ್ರವಾಸಿಗರಿಗೆ ನಿರಾಸೆ..!

ಚಿಕ್ಕಮಗಳೂರು ಜಿಲ್ಲಾಡಳಿತ ಡಿಸೆಂಬರ್ 17 ರಿಂದ 26 ರವರೆಗೆ ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಜಯಂತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯದಾರ ಸೀತಾಳ್ಳಯ್ಯನಗಿರಿ ಸೇರಿದಂತೆ ಹಲವು ತಾಣಗಳಿಗೆ ಜಿಲ್ಲಾಡಳಿತ ಪ್ರವಾಸಿಗರನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. 

Restrictions on Western Ghat Tourist Spots in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.14):  ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಕ್ರಿಸ್ ಮಸ್ ಆಚರಿಸೋಣ, ಡಿಸೆಂಬರ್ 4ನೇ ವಾರ ಕಾಫಿನಾಡ ಪ್ರಕೃತಿ ಸೌಂದರ್ಯ ಸವಿಯೋದಕ್ಕೆ ಟ್ರಿಪ್ ಹೋಗೋಣ ಅಂತ ಪ್ಲಾನ್ ಮಾಡಿದ್ರೆ ಕಾಫಿನಾಡಿನ ಮುಳ್ಳಯ್ಯನಗಿರಿಯತ್ತ ಹೋಗೋದಕ್ಕೆ ಹೋಗ್ಬೇಡಿ. ಇದೇ ಡಿಸೆಂಬರ್ 22 ರಿಂದ 27ರವರೆಗೆ 6 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ.

6 ದಿನಗಳ ಕಾಲ ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು ನಿರ್ಬಂಧ : 

ಚಿಕ್ಕಮಗಳೂರು ಜಿಲ್ಲಾಡಳಿತ ಡಿಸೆಂಬರ್ 17 ರಿಂದ 26 ರವರೆಗೆ ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತ ಜಯಂತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯದಾರ ಸೀತಾಳ್ಳಯ್ಯನಗಿರಿ ಸೇರಿದಂತೆ ಹಲವು ತಾಣಗಳಿಗೆ ಜಿಲ್ಲಾಡಳಿತ ಪ್ರವಾಸಿಗರನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ಡಿ.22ರಿಂದ 26 ರ ವರೆಗೆ ನಗರದಾದ್ಯಂತ ಶೋಭಾ ಯಾತ್ರೆ, ದತ್ತ ಪೀಠದಲ್ಲಿ ಸಾವಿರಾರು ಮಾಲಾಧಾರಿಗಳು ಆಗಮಿಸುವ ಹಿನ್ನೆಲೆ ಜಿಲ್ಲಾಡಳಿತ ಆರು ದಿನಗಳ ಕಾಲ ಟೂರಿಸ್ಟ್ ಬ್ಯಾನ್ ಮಾಡಿದೆ.

ಪ್ರೀತಿಸಿ ಮದುವೆಯಾದವಳಿಗೆ ವಿಷ ಉಣಿಸಿದ ಗಂಡ..!ಮುದ್ದೆಯಲ್ಲಿ ಸೈನೈಡ್ ಹಾಕಿದ್ನಾ ಪಾಪಿ ಗಂಡ..?

ರಾಜ್ಯದ ವಿವಿಧ ಭಾಗಗಳಿಂದ ಬರುವ ದತ್ತ ಭಕ್ತರು 

ಇನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಈ ಎಲ್ಲಾ ಪ್ರವಾಸಿ ತಾಣಗಳಿಗೆ ನಿಷೇಧ ಹೇರಿರುವುದರಿಂದ ಎಲ್ಲವೂ ಬಂದ್ ಆಗಲಿದ್ದು, ಮಾಹಿತಿ ಹರಿಯದೆ ಕಾಫಿ ನಾಡಿನ ಪ್ರವಾಸಿ ತಾಣಗಳಿಗೆ ಎಂಜಾಯ್ ಮಾಡ್ಬೇಕು ಅಂತ ದೂರದೂರುಗಳಿಂದ ಬರೋ ಟೂರಿಸ್ಟ್ ಸಮಸ್ಯೆಗೆ ಸಿಲುಕೋದು ನಿಶ್ಚಿತ. ಇನ್ನು ಈ ಬಾರಿ ದತ್ತ ಜಯಂತಿಗೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದ್ದು, ರಾಜ್ಯದ ಪ್ರಮುಖ ಸಾಧು ಸಂತರು ಭಾಗವಹಿಸಲಿದ್ದಾರೆ. 

ಈ ಬಾರಿಯ ದತ್ತ ಜಯಂತಿಯನ್ನು ನಾಡ ಉತ್ಸವದಂತೆ ಆಚರಿಸಲು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ. 

ಕಾಫಿನಾಡು ಶಾಕ್‌, ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಗೆ ರಾಗಿಮುದ್ದೆಯಲ್ಲಿ ಸೈನೈಡ್ ಬೆರೆಸಿ ಕೊಂದ ಪತಿ!

ಕಿರಿದಾದ ರಸ್ತೆಗಳಲ್ಲಿ ವಾಹನಗಳು ಸಿಲುಕಿ ಪ್ರವಾಸಿಗರು ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿಂದ  ಈ ಕ್ರಮ ಕೈಗೊಳ್ಳಲಾಗಿದೆ.ಒಟ್ಟಾರೆ ಒಂದು ವಾರಗಳ ಕಾಲ ಕಾಫಿ ನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣಗಳು ಬ್ಯಾನ್ ಆಗಲಿದ್ದು, ಒಂದು ವೇಳೆ ಚಿಕ್ಕಮಗಳೂರಿಗೆ ಬಂದು ಪ್ರವಾಸಿಗರು ಪರದಾಡುವ ಬದಲು ನಿಮ್ಮ ಪ್ಲಾನ್ ಅನ್ನ ಈಗಲೇ ಬದಲಾಯಿಸಿಕೊಳ್ಳಿ. 

ಚಿಕ್ಕಮಗಳೂರು ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದತ್ತ ಜಯಂತಿಯನ್ನು ಆಚರಿಸಲು ಜಿಲ್ಲಾಡಳಿತ ಈಗಲೇ ಪ್ಲಾನ್ ಮಾಡಿಕೊಂಡಿದೆ.

Latest Videos
Follow Us:
Download App:
  • android
  • ios