Love Jihad ಆರೋಪ, ಸೌತಡ್ಕ ದೇವಾಲಯಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

ಇತಿಹಾಸ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ  ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. 

Restriction of Non-Hindus Vehicle Access to southadka mahaganapathi  Temple gow

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜೂ.7): ರಾಜ್ಯದ ಇತಿಹಾಸ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ (southadka mahaganapathi temple) ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಫಲಕ ಅಳವಡಿಸಲಾಗಿದೆ. 

ದೇವಸ್ಥಾನದ (Temple) ಪ್ರವೇಶ ದ್ವಾರದ ಬಳಿಯೇ ವಿಶ್ವ ಹಿಂದೂಪರಿಷತ್ (VHP - vishwa hindu parishad), ಬಜರಂಗದಳದ (Bajrang Dal) ಹೆಸರಿನಲ್ಲಿ ಈ ಫಲಕ ಅಳವಡಿಸಲಾಗಿದೆ. ಅಲ್ಲದೇ ದೇವಸ್ಥಾನದಲ್ಲಿ ನಿರ್ಬಂಧದ ಬ್ಯಾನರ್ ಆಳವಡಿಸಿ ಸಾಮಾಜಿಕ ತಾಣಗಳಲ್ಲಿ ವಿಎಚ್ ಪಿ ಅಭಿಯಾನ ಕೈಗೊಂಡಿದೆ‌. 

ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಮತ್ತು ವಾಹನ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಹಿಂದೂಗಳ ಶ್ರದ್ದಾಕೇಂದ್ರವಾದ ಸೌತಡ್ಕಕ್ಕೆ ಅನ್ಯಕೋಮಿನವರು ಪ್ರವೇಶಿಸಿ ಭಕ್ತಾಧಿಗಳನ್ನ ಲವ್ ಜಿಹಾದ್ (Love Jihad) ಹಾಗೂ ಇತರೆ ದುಷ್ಕೃತ್ಯ ಎಸಗಿರೋದು ಕಂಡು ಬಂದಿದೆ. ಹೀಗಾಗಿ ಹಿಂದುಗಳಲ್ಲದವರ ವಾಹನಗಳು ದೇವಸ್ಥಾನ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಫಲಕ ಹಾಕಲಾಗಿದೆ.

HIJAB ROW; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?

ನಿರ್ಬಂಧಕ್ಕೆ ಕಾರಣವಾಯ್ತಾ ಲವ್ ಜಿಹಾದ್?
ಇತ್ತೀಚೆಗೆ ಸೌತಡ್ಕದಲ್ಲಿ (southadka) ಮುಸ್ಲಿಂ ಆಟೋ ಚಾಲಕನ ಲವ್ ಜಿಹಾದ್ ಸುದ್ದಿಯೊಂದು ಹರಡಿದ್ದು, ಇದರ ಬೆನ್ನಲ್ಲೇ ಹಿಂದೂ ಸಂಘಟನೆಗಳು ಕೆಂಡವಾಗಿದ್ದವು. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ದೇವಸ್ಥಾನಕ್ಕೆ ಬಂದ ಬೆಂಗಳೂರಿನ ಹಿಂದೂ ಯುವತಿಯನ್ನ ಮುಸ್ಲಿಂ ಆಟೋ ಚಾಲಕ ಲವ್ ಜಿಹಾದ್ ಮಾಡಿರೋ ಆರೋಪ ಕೇಳಿ ಬಂದಿತ್ತು. 

ಕೊಕ್ಕಡದಿಂದ ಸೌತಡ್ಕಕ್ಕೆ ಆಟೋದಲ್ಲಿ (auto rickshaw) ಹಿಂದೂ ಯುವತಿಯನ್ನ ಮುಸ್ಲಿಂ ಆಟೋ ಚಾಲಕ ಕರೆತಂದಿದ್ದು, ಬೆಂಗಳೂರಿನಿಂದ ಆಗಮಿಸಿ ಸೌತಡ್ಕ ತೆರಳಲು ಕೊಕ್ಕಡದಲ್ಲಿ (Kokkada) ಯುವತಿ ಬಸ್ ಇಳಿದಿದ್ದಳು ಎನ್ನಲಾಗಿದೆ. ಬಳಿಕ ಆಕೆಯ ನಂಬರ್ ಪಡೆದು ಪ್ರೇಮ ಜಾಲಕ್ಕೆ ಬೀಳಿಸಿ ವಶೀಕರಣ ಆರೋಪ ವ್ಯಕ್ತವಾಗಿತ್ತು.

Chikkamagaluru; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!

ಸದ್ಯ ಬೆಂಗಳೂರಿನ ರಿಜಿಸ್ಟರ್ ಕಚೇರಿಯಲ್ಲಿ ಹಾಕಲಾದ ಇಬ್ಬರ ಫೋಟೋಗಳು ವೈರಲ್ ಆಗಿದ್ದು, ರಿಜಿಸ್ಟರ್ ‌ಮದುವೆಯಾದ ಇಬ್ಬರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಆಟೋ ಪ್ರಯಾಣಿಕ ಹಿಂದೂ ಯುವತಿಗೆ ಮುಸ್ಲಿಂ ಯುವಕ ಲವ್ ಜಿಹಾದ್ ಮಾಡಿದ ಆರೋಪ ಕೇಳಿಬಂದಿದೆ.

"

ದ‌.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಸ್ಲಿಂ ಯುವಕನ ವಿರುದ್ದ ವಿಎಚ್ ಪಿ ದೂರು ನೀಡಿತ್ತು. ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಲವ್ ಜಿಹಾದ್ ಸುದ್ದಿ ಬೆನ್ನಲ್ಲೇ ಮುಸ್ಲಿಂ ಆಟೋ ಚಾಲಕರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ವಿವಾದಗಳ ಸುಳಿಯಲ್ಲಿ Rohith Chakrathirtha, 2016ರ ಟ್ವೀಟ್ ಬಗ್ಗೆ ಭಾರೀ ಚರ್ಚೆ!

ದೇವಸ್ಥಾನಗಳಿಗೆ ಭಕ್ತರನ್ನು ಕರೆತರದಂತೆ ಮುಸ್ಲಿಂ ಆಟೋ ಚಾಲಕರಿಗೆ ನಿರ್ಬಂಧ ಅಭಿಯಾನ ಆರಂಭಿಸಿದ್ದ ವಿಎಚ್ ಪಿ, ಆಟೋಗಳ ಜೊತೆಗೆ ಎಲ್ಲಾ ಹಿಂದೂಯೇತರರ ವಾಹನಗಳಿಗೆ ನಿರ್ಬಂಧ ವಿಧಿಸಿ ಫಲಕ ಅಳವಡಿಸಿದೆ. ಪರಿಸ್ಥಿತಿ ಕೈ ಮೀರಿದ್ರೆ ಜಿಲ್ಲಾಡಳಿತ ಹೊಣೆ ಅಂತ ವಿಎಚ್ ಪಿ ಎಚ್ಚರಿಕೆ ನೀಡಿದ್ದು, ಮುಸ್ಲಿಮರ ಆಟೋಗಳಲ್ಲಿ ಪ್ರಯಾಣಿಸದಂತೆ ಹಿಂದೂ ಹೆಣ್ಮಕ್ಕಳಿಗೆ ಕರೆ ನೀಡಿದೆ.

Latest Videos
Follow Us:
Download App:
  • android
  • ios