ಕೊರೋನಾ ಕಾಟ: ಆಂಧ್ರ-ತೆಲಂಗಾಣ ಜನರ ಪ್ರವೇಶ ನಿರ್ಬಂಧ

ನೆರೆ ರಾಜ್ಯಗಳಿಂದ ಜನರ ಪ್ರವೇಶ ನಿಯಂತ್ರಿಸಲು ಜಿಲ್ಲಾಡಳಿತ ನಿರ್ಧಾರ| ಆಂಧ್ರ-ತೆಲಂಗಾಣ ಬರುವವರು ಪಾಸ್‌ ತರುವುದು ಕಡ್ಡಾಯ: ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌| ನೆರೆಯ ರಾಜ್ಯಗಳ ಹೆಚ್ಚಿನ ಸಂಖ್ಯೆಯ ಜನರು ವಿಮ್ಸ್‌ನಲ್ಲಿ ದಾಖಲು|

Restriction of Andhra Telangana people to Ballari District due to Coronavirus

ಬಳ್ಳಾರಿ(ಜು.08): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರಾಜ್ಯಗಳಿಂದ ಬರುವವರನ್ನು ನಿರ್ಬಂಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಆಂಧ್ರ-ತೆಲಂಗಾಣದಿಂದ ಬರುವವರು ನಿರ್ದಿಷ್ಟ ಉದ್ದೇಶದ ಪಾಸ್‌ ತರುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಆದೇಶ ಹೊರಡಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿನ ವಿಮ್ಸ್‌ ಆಸ್ಪತ್ರೆಗೆ ಬರುತ್ತಿರುವುದರಿಂದ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಇಂತಹದೊಂದು ನಿರ್ಧಾರಕ್ಕೆ ಬಂದಿದೆ.

ಜಿಂದಾಲ್‌ ಲಾಕ್‌ಡೌನ್‌ ಮಾಡಿದ್ರೆ ಕೊರೋನಾ ರಾಜ್ಯ-ದೇಶಬಿಟ್ಟು ಹೋಗುತ್ತಾ?: ಸಚಿವ ಆನಂದಸಿಂಗ್‌

ಸೇವಾ ಸಿಂಧುವಿನಲ್ಲಿ ಸಿಗುವ ಇ-ಪಾಸ್‌ ಹಾಗೂ ಜಿಲ್ಲಾಡಳಿತ ನೀಡುವ ಪಾಸ್‌ಗಳಿಲ್ಲದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು. ಸೇವಾ ಸಿಂಧುವಿನಲ್ಲಿ ಪಾಸ್‌ಗಳನ್ನು ಪಡೆದವರು ಮಾತ್ರ ಆಂಧ್ರದಿಂದ ಬರುವ ಬಸ್‌ಗಳಲ್ಲಿ ಪ್ರವೇಶ ಕಲ್ಪಿಸುವಂತೆ ಸೂಚಿಸಲಾಗಿದೆ. ಈ ಆದೇಶ ಸರಕು- ಸಾಗಣೆಗೆ ಅನ್ವಯವಾಗುವುದಿಲ್ಲ. ಜುಲೈ 7 ರಿಂದಲೇ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios