Karnataka Politics: ಕೈ ಅಭ್ಯರ್ಥಿಗಳ ಶಿಫಾರಸು ಹೊಣೆ ಉಗ್ರಪ್ಪ ಹೆಗಲಿಗೆ
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಪ್ರಕಟಿಸಿದ ಬೆನ್ನಲೇ ಕಾಂಗ್ರೆಸ್ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ಶಿಫಾರಸು ಮಾಡುವಂತೆ ಜಿಲ್ಲಾ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು, ಸಭೆ ನಡೆಸುವ ಹೊಣೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿ.ಎಸ್.ಉಗ್ರಪ್ಪ ಹೆಗಲಿಗೆ ನೀಡಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಪ್ರಕಟಿಸಿದ ಬೆನ್ನಲೇ ಕಾಂಗ್ರೆಸ್ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ಶಿಫಾರಸು ಮಾಡುವಂತೆ ಜಿಲ್ಲಾ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು, ಸಭೆ ನಡೆಸುವ ಹೊಣೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿ.ಎಸ್.ಉಗ್ರಪ್ಪ ಹೆಗಲಿಗೆ ನೀಡಿದೆ.
ಈಗಾಗಲೇ ಕೆಪಿಸಿಸಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಾ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಇದೀಗ ಸಲ್ಲಿಕೆಯಾದ ಅರ್ಜಿಗಳನ್ನು ಪುನಃ ಕೆಪಿಸಿಸಿ ಜಿಲ್ಲಾ ಕಾಂಗ್ರೆಸ್‌ಗೆ ಕಳುಹಿಸಿ ಕೊಟ್ಟಿದ್ದು ಕ್ಷೇತ್ರಕ್ಕೆ 1 ರಿಂದ 3 ಸೂಕ್ತ ಅಭ್ಯರ್ಥಿಗಳ ಹೆಸರನ್ನು ಮತದಾರರ ಒಲವು, ಪಕ್ಷದ ನಾಯಕರ, ಕಾರ್ಯಕರ್ತರೊಂದಿಗೆ ಅಭಿಪ್ರಾಯ ಸಂಗ್ರಹಿಸಿ ಗೌಪ್ಯವಾಗಿ ಕೆಪಿಸಿಸಿಗೆ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ.
ಜಿಲ್ಲಾ ಚುನಾವಣಾ ಸಮಿತಿ ನೇಮಕ: ರಾಜ್ಯ ಮಟ್ಟದ ಚುನಾವಣಾ (Election) ಸಮಿತಿ ಮಾದರಿಯಲ್ಲಿಯೆ ಇದೀಗ ಕೆಪಿಸಿಸಿ ಜಿಲ್ಲೆಯ ಉಸ್ತುವಾರಿಗಳಾದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಕ್ತಾರ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಚುನಾವಣಾ ಸಮಿತಿ ರಚಿಸಲಾಗಿದ್ದು ಪ್ರಮುಖವಾಗಿ ಸಮಿತಿಯಲ್ಲಿ ಎಐಸಿಸಿ ಜಿಲ್ಲಾ ಉಸ್ತುವಾರಿ ಅಭಿಷೇಕ್ ದತ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ಉಸ್ತುವಾರಿ ಹಾಗೂ ಉಪಾಧ್ಯಕ್ಷರಾದ ವಿ.ಎಸ್.ಉಗ್ರಪ್ಪ ಜೊತೆಗೆ ಅಭ್ಯರ್ಥಿಗಳ ಬಗ್ಗೆ ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು, ಸಂಯೋಜಕರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಮಾತ್ರ ಆಹ್ವಾನ ನೀಡಿದೆ. ವಿಶೇಷವಾಗಿ ಟಿಕೆಟ್ ಆಕಾಂಕ್ಷಿಗಳು ಬಯಸಿದ ಕ್ಷೇತ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಕೆಪಿಸಿಸಿ ಸ್ಪಷ್ಟವಾಗಿ ಸೂಚಿಸಿದೆ.
14 ಮಾರ್ಗಸೂಚಿಗಳ ಪ್ರಕಟ
ಜಿಲ್ಲಾ ಚುನಾವಣಾ ಸಮಿತಿ ಕೆಪಿಸಿಸಿಗೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ಒಟ್ಟು 14 ಮಾರ್ಗಸೂಚಿಗಳ ಮಾನದಂಡವನ್ನು ಜಿಲ್ಲಾ ಚುನಾವಣಾ ಸಮಿತಿಗೆ ನೀಡಿದ್ದು, 2023ರ ಜನವರಿ 1ರೊಳಗೆ ಕ್ಷೇತ್ರವಾರು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡುವಂತೆ ಸೂಚಿಸಿದೆ. ವಿಶೇಷವಾಗಿ ಪ್ರತಿ ಅಭ್ಯರ್ಥಿಯ ಶಕ್ತಿ ಹಾಗೂ ದೌರ್ಬಲ್ಯಗಳನ್ನು ಗುರುತಿಸುವಂತೆ ಸಮಿತಿಗೆ ಸೂಚಿಸಿದ್ದು, ಸ್ಥಳಿಯ ಮಟ್ಟದಲ್ಲಿ ಜನರ ವಿಶ್ವಾಸ ಹಾಗೂ ಅಭಿಮಾನಗಳಿಸಿರುವ ಅಭ್ಯರ್ಥಿಗಳನ್ನು ಶಿಫಾರಸು ಮಾಡಬೇಕೆಂದು ಕೆಪಿಸಿಸಿ ಸೂಚಿಸಿದೆ.
ಕೈಗೆ ಮೊದಲ ಹೊಡೆತ
ನವದೆಹಲಿ(ಡಿ.19): 2023ರಲ್ಲಿ ಕರ್ನಾಟಕ ಸೇರಿ ಸಾಲು ಸಾಲು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಹೊಸ ಹುರುಪಿನಲ್ಲಿದೆ. ಇದೀಗ ಪಕ್ಷ ಸಂಘಟನೆ, ಚುನಾವಣೆ ರಣತಂತ್ರದಲ್ಲಿ ಕಾಂಗ್ರೆಸ್ ತೊಡಗಿಸಿಕೊಂಡಿದೆ. ಇದರ ನಡುವೆ ಕಾಂಗ್ರೆಸ್‌ಗೆ ಶಾಕ್ ಎದುರಾಗಿದೆ. ಮೆಘಾಲಯದ ಮಾಜಿ ಸಚಿವೆ, ಕಾಂಗ್ರೆಸ್ ಪ್ರಮುಖ ನಾಯಕಿ ಅಂಪರಿನ್ ಲಿಂಗ್ಡೊ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ನಾಡಿಮಿಡಿತ ಅರಿಯಲು ವಿಫಲವಾಗುತ್ತಿದೆ. ಕಾಂಗ್ರೆಸ್ ಜನರಿಂದ ದೂರವಾಗುತ್ತಿದೆ ಎಂದು ಆರೋಪಿಸಿರುವ ಲಿಂಗ್ಡೋ ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ದಿಕ್ಕು ತಪ್ಪಿದೆ ಎಂದೆನಿಸುತ್ತಿದೆ. ಪಕ್ಷ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಪಕ್ಷಕ್ಕೆ ಪ್ರಬಲ ನಾಯಕತ್ವದ ಅವಶ್ಯಕತೆ ಇದೆ. ಆದರೆ ಕಾಂಗ್ರೆಸ್ ದಿನದಿಂದ ದಿನಕ್ಕ ದುರ್ಬಲವಾಗುತ್ತಿದೆ. ಮೇಘಾಲಯ ಜನತೆಯಿಂದ ಕಾಂಗ್ರೆಸ್ ಬಹು ದೂರವಾಗಿದೆ. ಜನರ ಆಶೋತ್ತರಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಲಿಂಗ್ಡೋ ತಮ್ಮ ರಾಜೀನಾಮೆಯಲ್ಲಿ ಉಲ್ಲೇಖಿಸಿದ್ದಾರೆ.
Karnataka politics : ಬಿಜೆಪಿ, ಕಾಂಗ್ರೆಸ್ ತ್ಯಜಿಸಿ ಜೆಡಿಎಸ್‌ಗೆ ಸೇರ್ಪಡೆ
ಮೇಘಾಲಯದಲ್ಲಿ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಕಾಂಗ್ರೆಸ್ ಮೇಘಾಲಯ ಜನರ ಒಳಿತಿಗಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಸಾಗುತ್ತಿಲ್ಲ ಎಂದು ಲಿಂಗ್ಡೋ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ಪತ್ರ ರವಾನಿಸಿರುವ ಲಿಂಗ್ಡೋ ಟ್ವಿಟರ್ ಮೂಲಕವೂ ಪೋಸ್ಟ್ ಮಾಡಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಟ್ಯಾಗ್ ಮಾಡಿದ್ದಾರೆ.
ಮೂಲಗಳ ಪ್ರಕಾರ ಲಿಂಗ್ಡೋ ನ್ಯಾಷನಲ್ ಪೀಪಲ್ ಪಾರ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಸದ್ಯ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ ಪಾರ್ಟಿ ಆಡಳಿತ ನಡೆಸುತ್ತಿದೆ. 2023ರ ಫೆಭ್ರವರಿಯಲ್ಲಿ ಮೇಘಾಲಯ ವಿಧಾನಸಭಾ ಚುನಾವಣೆ ನಡೆಯಲಿದೆ. 60 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.