Asianet Suvarna News Asianet Suvarna News

‘NRCಯಿಂದ ದೇಶದ ಬಡ ಜನತೆ ಮತ್ತೆ ಸಂಕಷ್ಟಕ್ಕೆ ಹೋಗಬಹುದು’

ದೇಶದಾದ್ಯಂತ NRC ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದ ಸಸಿಕಾಂತ್ ಸೆಂಥಿಲ್| ಕೇಂದ್ರ ಸರ್ಕಾರ ರಾಜಕೀಯ ಕಾರಣದಿಂದ ನೂರಾರು ಕೋಟಿ ಖರ್ಚು ಮಾಡಲು ಮುಂದಾಗುತ್ತಿರುವುದು ಖಂಡನೀಯ| ರಾಷ್ಟ್ರೀಯ ಪೌರತ್ವ ನೋಂದಣಿ ಒಂದು ಜನ ವಿರೋಧಿ ಕೃತ್ಯವಾಗಿದೆ| ಜನರ ನಡುವೆ ರಾಜಕೀಯ ಮಾಡಿ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ ಇದನ್ನು ರಾಷ್ಟ್ರದ ಜನತೆ ವಿರೋಧಿಸಬೇಕು|

Resigned IAS Officer Sasikanth Senthil Against NRC
Author
Bengaluru, First Published Nov 29, 2019, 1:07 PM IST

ಹುಬ್ಬಳ್ಳಿ[ನ.29]: ಕೇಂದ್ರ ಸರ್ಕಾರ ರಾಜಕೀಯ ಉದ್ದೇಶದಿಂದ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮಾಡಿಸಲು ಮುಂದಾಗುತ್ತಿದ್ದು, ಇದರಿಂದ ದೇಶದ ಬಡ ಜನರು ಮತ್ತೆ ಸಂಕಷ್ಟಕ್ಕೆ ಹೋಗಬಹುದು. ಈ ಹಿನ್ನಲೆಯಲ್ಲಿ ಕೂಡಲೇ ಇದನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಅಲ್ಲದೇ ದೇಶದ ಜನತೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಬೇಕು ಎಂದು ಐಎಎಸ್ ವೃತ್ತಿಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಅವರು ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಾದ್ಯಂತ ನುಸುಳುಕೋರರು ಹೆಚ್ಚಿಗೆ ಆಗುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದಾದ್ಯಂತ NRCಯನ್ನು ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳುತ್ತಿದೆ ಇದು ಸರಿಯಾದ ಕ್ರಮವಲ್ಲ. ಅಸ್ಸಾಂನಲ್ಲಿ 1951 ರಲ್ಲೇ NRC ಮಾಡಲಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡಾ 2014 ರಲ್ಲಿ ಈ ಬಗ್ಗೆ ನೋಡಿಕೊಂಡು ಬರುತ್ತಿದೆ. ಇದೀಗ ಅಂತಿಮ ಪಟ್ಟಿ ತಯಾರು ಮಾಡಲಾಗಿದ್ದು, ಅದರಲ್ಲಿ ಮೊದಲು 40 ಲಕ್ಷ, ಇದೀಗ ಅಂತಿಮವಾಗಿ 11 ಲಕ್ಷ 6 ಸಾವಿರ ಜನರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಒಂದು ಕಾರಣದಿಂದಾಗಿ NRC ಸರ್ವೇಯನ್ನು ದೇಶದಾದ್ಯಂತ ಮಾಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಷ್ಟ್ರದಲ್ಲಿ ಬಹುತೇಕ ರಾಜ್ಯಗಳಲ್ಲಿ ನುಸುಳುಕೋರರ ಸಮಸ್ಯೆ 0.05 ರಷ್ಟು ಇದ್ದು, ಕೇಂದ್ರ ಸರ್ಕಾರ ರಾಜಕೀಯ ಕಾರಣದಿಂದ ನೂರಾರು ಕೋಟಿ ಖರ್ಚು ಮಾಡಲು ಮುಂದಾಗುತ್ತಿರುವುದು ಖಂಡನೀಯ. ರಾಷ್ಟ್ರೀಯ ಪೌರತ್ವ ನೋಂದಣಿ (NRC) ಒಂದು ಜನ ವಿರೋಧಿ ಕೃತ್ಯವಾಗಿದ್ದು, ಜನರ ನಡುವೆ ರಾಜಕೀಯ ಮಾಡಿ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಇದರ ಉದ್ದೇಶವಾಗಿದೆ ಇದನ್ನು ರಾಷ್ಟ್ರದ ಜನರು ವಿರೋಧ ಮಾಡಬೇಕು ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios