Asianet Suvarna News Asianet Suvarna News

ಎಂಟಿಬಿ ಪ್ರತಿಷ್ಠೆಯಾಗಿದ್ದ ಹೊಸಕೋಟೆ ಚುನಾವಣೆಗೆ ಮೀಸಲಾತಿ ಪ್ರಕಟ

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಎಂಟಿಬಿ ನಾಗರಾಜ್ ಹಾಗೂ ಶರತ್ ಬಚ್ಚೇಗೌಡ ನಡುವಿನ ಜಿಲ್ಲಾಜಿದ್ದಿಯಲ್ಲಿ ಕೊನೆಗೂ ಜನ ಶರತ್ ಬಚ್ಚೇಗೌಡಗೆ ಮಣೆ ಹಾಕಿದ್ದರು. ಈ ಕ್ಷೇತ್ರದಲ್ಲಿ ಿದೀಗ ಮತ್ತೊಂದು ಚುನಾವಣೆ ನಡೆಯುತ್ತಿದ್ದು, ಮೀಸಲಾತಿ ಕೂಡ ಪ್ರಕಟವಾಗಿದೆ.

Resarvation Anounce Hosakote Town Muncipolity Election
Author
Bengaluru, First Published Jan 23, 2020, 9:20 AM IST

ದೊಡ್ಡಬಳ್ಳಾಪುರ [ಜ.23]: ರಾಜ್ಯ ಚುನಾವಣಾ ಆಯೋಗವು ಹೊಸಕೋಟೆ ನಗರಸಭೆಯ ಎಲ್ಲ 31 ವಾರ್ಡುಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ವಾರ್ಡ್‌ ಕೌನ್ಸಿಲರುಗಳ ಮೀಸಲಾತಿ ವಿವರ ಪ್ರಕಟಗೊಂಡಿದೆ.

1. ವಿವೇಕಾನಂದ ನಗರ-1-ಹಿಂದುಳಿದ ವರ್ಗ(ಎ) ಮಹಿಳೆ, 2. ಕೋಟೆ ರಾಯಸಿಂಗ್‌ ಬಡಾವಣೆ-ಹಿಂದುಳಿದ ವರ್ಗ(ಬಿ) ಮಹಿಳೆ, 3. ಕಮ್ಮವಾರಿಪೇಟೆ-ಸಾಮಾನ್ಯ, 4. ಚಿಕ್ಕತಿಗಳರಪೇಟೆ, ರಾಮಮಂದಿರ ರಸ್ತೆ-ಹಿಂದುಳಿದ ವರ್ಗ(ಬಿ), 5. ಕಿಲಾರಿಪೇಟೆ, ಬ್ರಾಹ್ಮಣರ ಬೀದಿ-ಹಿಂದುಳಿದ ವರ್ಗ(ಎ), 6. ಪಾರ್ವತಿಪುರ-ಪರಿಶಿಷ್ಟಪಂಗಡ,.

7. ಗೌತಮ್‌ ಕಾಲೋನಿ-ಸಾಮಾನ್ಯ ಮಹಿಳೆ, 8. ಶರಾಬ್‌ ಮುನಿಶಾಮಯ್ಯ ಬಡಾವಣೆ-ಸಾಮಾನ್ಯ, 9. ಕುರುಬರಪೇಟೆ-ಸಾಮಾನ್ಯ, 10. ನಾಲಾಗಲ್ಲಿ-ಹಿಂದುಳಿದ ವರ್ಗ (ಎ) ಮಹಿಳೆ, 11. ಮೇಲಿನಪೇಟೆ-ಸಾಮಾನ್ಯ, 12. ಟಿ.ಜಿ.ಬಡಾವಣೆ-ಹಿಂದುಳಿದ ವರ್ಗ(ಎ), 13. ವಿವೇಕಾನಂದ ನಗರ-2-ಸಾಮಾನ್ಯ, 14. ಪಿಡಬ್ಲ್ಯುಡಿ ಕ್ವಾರ್ಟರ್ಸ್‌-ಹಿಂದುಳಿದ ವರ್ಗ(ಎ) ಮಹಿಳೆ.

ಬಿಜೆಪಿ ವಿರುದ್ಧ ಮುನಿಸಿಕೊಂಡರಾ ಎಂಟಿಬಿ?...

15. ಸರ್‌.ಎಂ.ವಿ.ಬಡಾವಣೆ-1-ಸಾಮಾನ್ಯ, 16. ಸರ್‌.ಎಂ.ವಿ.ಬಡಾವಣೆ-2-ಸಾಮಾನ್ಯ, 17. ಅಂಬೇಡ್ಕರ್‌ ಕಾಲೋನಿ-ಹಿಂದುಳಿದ ವರ್ಗ(ಎ), 18. ಖಾಜಿ ಮೊಹಲ್ಲಾ-ಸಾಮಾನ್ಯ ಮಹಿಳೆ, 19. ವರದಾಪುರ-ಹಿಂದುಳಿದ ವರ್ಗ (ಎ) ಮಹಿಳೆ, 20. ದಂಡುಪಾಳ್ಯ-ಪರಿಶಿಷ್ಟಜಾತಿ ಮಹಿಳೆ, 21. ಸರ್‌.ಎಂ.ವಿ. ಬಡಾವಣೆ-3-ಸಾಮಾನ್ಯ, 22. ಸರ್‌.ಎಂ.ವಿ.ಬಡಾವಣೆ-4-ಸಾಮಾನ್ಯ.

ಒಂದೇ ಅಭ್ಯರ್ಥಿಗೆ ಮಣೆ ಹಾಕಿದ ಕೈ, JDS, BJP : ಅವಿರೋಧ ಆಯ್ಕೆ...

 23. ಸರ್‌.ಎಂ.ವಿ.ಬಡಾವಣೆ-5-ಪರಿಶಿಷ್ಟಜಾತಿ, 24. ಸರ್‌.ಎಂ.ವಿ.ಬಡಾವಣೆ-6-ಸಾಮಾನ್ಯ ಮಹಿಳೆ, 25. ಸರ್‌.ಎಂ.ವಿ.ಬಡಾವಣೆ-7-ಹಿಂದುಳಿದ ವರ್ಗ(ಎ), 26. ಸರ್‌.ಎಂ.ವಿ.ಬಡಾವಣೆ-8-ಸಾಮಾನ್ಯ ಮಹಿಳೆ, 27. ಎ.ಐ.ಆರ್‌.ಸ್ಟೇಷನ್‌-ಸಾಮಾನ್ಯ ಮಹಿಳೆ, 28. ಸರ್‌.ಎಂ.ವಿ.ಬಡಾವಣೆ-9 (ಕುವೆಂಪು ನಗರ)- ಸಾಮಾನ್ಯ ಮಹಿಳೆ, 29. ಸರ್‌.ಎಂ.ವಿ.ಬಡಾವಣೆ-10-ಸಾಮಾನ್ಯ ಮಹಿಳೆ, 30. ಸರ್‌.ಎಂ.ವಿ.ಬಡಾವಣೆ-11-ಪರಿಶಿಷ್ಟಜಾತಿ, 31. ಟೀಚ​ರ್ಸ್ ಕಾಲೋನಿ-ಸಾಮಾನ್ಯ ಮಹಿಳೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್‌.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios