ಬೆಂಗಳೂರು [ಜ.25]: ಮಾಣೆಕ್‌ ಷಾ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವವರಿಗಾಗಿ ವಿವಿಧ ಬಣ್ಣದ ಪಾಸುಗಳನ್ನು ವಿತರಿಸಲಾಗಿದ್ದು, ಪ್ರವೇಶ ದ್ವಾರಗಳ ಮಾಹಿತಿ ನೀಡಲಾಗಿದೆ. ಪಾಸ್‌ಗಳಲ್ಲಿ ಸೂಚಿಸಿರುವ ಗೇಟ್‌ಗಳಲ್ಲಿಯೇ ಪ್ರವೇಶ ಪಡೆಯುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಮನವಿ ಮಾಡಿದರು.

ಮಾಣೆಕ್‌ ಷಾ ಮೈದಾನದ ದ್ವಾರ 1 (ಹಳದಿ ಬಣ್ಣದ ಪಾಸ್‌): ಸ್ವಾತಂತ್ರ್ಯ ಹೋರಾಟಗಾರರು, ಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆ ಅಧಿಕಾರಿಗಳು- ಕಬ್ಬನ್‌ ರಸ್ತೆಯ ಮೂಲಕ ಮೈದಾನ ಒಳಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ದ್ವಾರ 2 (ಬಿಳಿ ಬಣ್ಣದ ಪಾಸ್‌)- ಅತಿಗಣ್ಯ ವ್ಯಕ್ತಿಗಳು- ಕಬ್ಬನ್‌ ರಸ್ತೆಯ ಮೂಲಕ ಮೈದಾನ ಒಳ ಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ದ್ವಾರ 3 (ಗುಲಾಬಿ ಬಣ್ಣದ ಪಾಸ್‌)- ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್‌ ಯೋಧರು- ಮೈನ್‌ಗಾರ್ಡ್‌ ಕ್ರಾಸ್‌ ರಸ್ತೆ, ಅಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆಯ ಆರ್ಮಿ ಪಬ್ಲಿಕ್‌ ಶಾಲೆ ಮುಂಭಾಗ.

ದ್ವಾರ 4 ಸಾರ್ವಜನಿಕರು (ಹಸಿರು ಪಾಸ್‌) ಹೊಂದಿದವರು ಹಾಗೂ ಪಾಸ್‌ ಇಲ್ಲದ ಎಲ್ಲಾ ಸಾರ್ವಜನಿಕರು ಕಾರುಗಳು ಹಾಗೂ ದ್ವಿಚಕ್ರವಾಹನಗಳನ್ನು ಶಿವಾಜಿ ನಗರ ಬಸ್‌ ನಿಲ್ದಾಣದ 1ನೇ ಮಹಡಿ.

ಶಾಲಾ ಮಕ್ಕಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರನ್ನು ಕರೆತರುವ ಎಲ್ಲಾ ಬಸ್‌ಗಳು ಕಬ್ಬನ್‌ ರಸ್ತೆಯ ಪ್ರವೇಶ ದ್ವಾರ-1ರಲ್ಲಿ ಇಳಿಸಿ ಆ ನಂತರ ಅನಿಲ್‌ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೂ ಎಂ.ಜಿ ರಸ್ತೆಯ ಎಡ ಭಾಗದಲ್ಲಿ ನಿಲ್ಲಿಸಬೇಕು.

ಸಂಚಾರ ನಿರ್ಬಂಧ: ಬದಲಿ ಮಾರ್ಗಗಳು

ಭಾನುವಾರ ಬೆಳಗ್ಗೆ 8.30 ರಿಂದ 10.30ರ ವರೆಗೆ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೂ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಜತೆಗೆ ಮಾಣಿಕ್‌ ಷಾ ಮೈದಾನ ಸುತ್ತಮುತ್ತ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಮಲೆನಾಡಿಗೆ ಪ್ರತಿದಿನ ಉಗಿಬಂಡಿ, ಶಿವಮೊಗ್ಗ-ಯಶವಂತಪುರ ಚುಕು-ಬುಕು ಸ್ಟಾರ್ಟ್!...

ಕಬ್ಬನ್‌ ಪಾರ್ಕ್, ಬಿವಿಆರ್‌ ಜಂಕ್ಷನ್‌ ಕಡೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ಇನ್‌ಫ್ಯಾಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ - ಆಲೀಸ್‌ ಸರ್ಕಲ್‌- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡೆಕನ್‌ಸನ್‌ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ ಬಳಿ ಎಡಕ್ಕೆ ತಿರುವು ಪಡೆದು ಮನಿಪಾಲ್‌ ಸೆಂಟರ್‌ಗೆ ಹೋಗಬಹುದು.

ಮಣಿಪಾಲ್‌ ಸೆಂಟರ್‌ ಕಡೆಯಿಂದ ಬಿಆರ್‌ವಿ ಜಂಕ್ಷನ್‌ ಕಡೆ ಹೋಗುವ ವಾಹನಗಳು ಎಂ.ಜಿ. ರಸ್ತೆಗೆ ತೆರಳಿ ಅನಿಲ್‌ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುವ ಮೂಲಕ ಸಾಗಬಹುದು.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು:  ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣವರೆಗೆ. ಕಬ್ಬನ್‌ ರಸ್ತೆ, ಸಿಟಿಓ ವೃತ್ತ, ಕೆ.ಆರ್‌.ರಸ್ತೆ. ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ರಸ್ತೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.