Asianet Suvarna News Asianet Suvarna News

ಗಣರಾಜ್ಯೋತ್ಸವ ಸಂಭ್ರಮ: ಜೈಲು ಹಕ್ಕಿಗಳಿಂದ 'ವಿವಿಧತೆಯಲ್ಲಿ ಏಕತೆ' ನಾಟಕ ಪ್ರದರ್ಶನ

ಇಂದು ದೇಶಾದ್ಯಂತ 75 ನೇ ಗಣರಾಜ್ಯೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಹಲವು ಕಾರ್ಯಕ್ರಮಗಳು ನಡೆದಿವೆ. ಅಂತಯೇ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲೂ ಗಣರಾಜ್ಯೋತ್ಸವದ ಸಂಭ್ರಮದಿಂದ ಆಚರಿಸಲಾಯಿತು.

Republic day 2024 Unity in diversity drama performance by prisoners at Kalaburagi rav
Author
First Published Jan 26, 2024, 6:51 PM IST

ಕಲಬುರಗಿ (ಜ.26): ಇಂದು ದೇಶಾದ್ಯಂತ 75 ನೇ ಗಣರಾಜ್ಯೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಹಲವು ಕಾರ್ಯಕ್ರಮಗಳು ನಡೆದಿವೆ. ಅಂತಯೇ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲೂ ಗಣರಾಜ್ಯೋತ್ಸವದ ಸಂಭ್ರಮದಿಂದ ಆಚರಿಸಲಾಯಿತು.

ಗಣರಾಜ್ಯೋತ್ಸವ ನಿಮಿತ್ತ ಜೈಲು ಹಕ್ಕಿಗಳು ವಿವಿಧೆತೆಯಲ್ಲಿ ಏಕತೆ ಸಾರುವ ನಾಟಕ ಪ್ರದರ್ಶಿಸಿದರು. ಭೂಮಿಯಲ್ಲಿ ದೊರೆತ ಶಿಲೆಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ವೇಷಗಳನ್ನು ತೊಟ್ಟು, ತಮ್ಮ ತಮ್ಮ ಧರ್ಮಕ್ಕೆ ಅನುಗುಣವಾಗಿ ಶಿಲೆಯನ್ನು ಕೆತ್ತಿ ತಮ್ಮದೇ ಆದ ಕಲ್ಪನೆಗೆ ಅನುಗುಣವಾಗಿ ಮೂರ್ತಿ ಮಾಡುತ್ತಾರೆ.  ಅಷ್ಟೇ ಅಲ್ಲ ನಾನೇ ಶ್ರೇಷ್ಠ ನನ್ನ ಧರ್ಮವೇ ಶ್ರೇಷ್ಠ ಎಂದು ಒಬ್ಬರಿಗೊಬ್ಬರು ಜಗಳವಾಡುತ್ತಾರೆ. ಈ ವೇಳೆ ಮಹಾತ್ಮಾ ಗಾಂಧಿಜಿಯವರು ಮಧ್ಯ ಪ್ರವೇಶಿಸಿ ಭಾರತ ವಿವಿಧ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ದೇಶ.‌ ನಾವೆಲ್ಲರೂ ಒಂದೇ. ಪ್ರತಿಯೊಂದು ಧರ್ಮದ ಸಂದೇಶ ಮಾನವಿಯತೆ. ನಾವೆಲ್ಲಾ ಒಂದಾಗಿ ಅಣ್ಣತಮ್ಮಂದಿರಂತೆ ದೇಶದ ಏಕತೆ ಮತ್ತು ಅಭಿವೃದ್ಧಿಗಾಗಿ ಬಾಳಬೇಕು ಎನ್ನುವ ಸಂದೇಶ ನೀಡುತ್ತಾರೆ. ಇದಿಷ್ಟೂ ಸಂದೇಶವನ್ನು ಜೈಲುಹಕ್ಕಿಗಳು ಈ ಮೂಕಭಿನಯ ಪ್ರದರ್ಶನದ ಮೂಲಕ ನೀಡಿ ಎಲ್ಲರ ಶ್ಲಾಘನೆಗೆ ಪಾತ್ರವಾದರು. 

2024 ಜಗತ್ತಿಗೆ ಒಳ್ಳೆದಲ್ಲ! ದುರಂತಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ!

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಮುಖ್ಯ ಅಧಿಕ್ಷಕರಾದ ಡಾ.‌ ಪಿ ರಂಗನಾಥ ಅವರು ಮಾತಮಾಡುತ್ತಾ, ಈ  ಮೂಕಭಿನಯ ನಾಟಕದ ಸಾರಂಶದಂತೆ ತಾವೆಲ್ಲರೂ ಜೈಲಿನಲ್ಲಿ ಒಳ್ಳೆಯ ನಡತೆ ಬೆಳೆಸಿಕೊಳ್ಳಬೇಕು. ನಾವೆಲ್ಲಾ ಭಾರತಾಂಬೆಯ ಮಕ್ಕಳೆನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ಕಾರಾಗೃಹದಲ್ಲಿ ನೀಡಲಾಗುವ ಕೌಶಲ್ಯ ತರಬೇತಿ, ಶಿಕ್ಷಣ ಪಡೆದುಕೊಂಡು ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಬೇಕು. ಆ ಮೂಲಕ ತಮ್ಮ ತಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ಕೊಡುವಂತೆ ಕಿವಿ ಮಾತು ಹೇಳಿದರು.  ಜೈಲುಗಳು ಶಿಕ್ಷಾ ಕೇಂದ್ರಗಳಲ್ಲ. ಮನಸ್ಸು ಪರಿವರ್ತನೆಯ ವೇದಿಕೆಗಳು. ಕೆಟ್ಟ ಗಳಿಗೆಯಲ್ಲಿ ನಡೆದ ಘಟನೆಯನ್ನು ಮರೆತು ಒಳ್ಳೆಯವರಾಗಿ ಬಾಳಿ ತೋರಿಸಿ. ಇದರಿಂದ ನಿಮ್ಮ ಶಿಕ್ಷೆಯ ಅವಧಿಯೂ ಕಡಿಮೆಯಾಗಲಿದೆ ಎಂದು ಸಲಹೆ ನೀಡಿದರು. 

ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಬಿ.ಎಂ.ಕೊಟ್ರೆಶ್ ಮಾತನಾಡುತ್ತಾ ಗಣರಾಜ್ಯೋತ್ಸವದ ಮಹತ್ವ ವಿವರಿಸಿದರು. ಅಲ್ಲದೇ ಉತ್ತಮ ಸೇವೆ ಸಲ್ಲಿಸಿದ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ಶ್ಲಾಘಿಸಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.‌

ಮಕ್ಕಳ ಕೈಯಲ್ಲಿ ಕಮಲದ ಹೂ ಕಂಡು ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ; ಶಿಕ್ಷಕಿ ವಿರುದ್ಧ ಏಕವಚನದಲ್ಲೇ ಮಾತು!

ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ ಅಣ್ಣಾರಾವ್, ಡಾ. ರಾಹುಲ್, ಸಹಾಯಕ ಅಧೀಕ್ಷ಼ಕರಾದ ಹುಸೇನಿ ಪೀರ್, ಸಹಾಯಕ ಆಡಳಿತಾಧಿಕಾರಿಗಳಾದ ಭಿಮಾಶಂಕರ್ ಡಾಂಗೆ, ಜೈಲರ್ ಗಳಾದ ಸುನಂದಾ, ಪರಮಾನಂದ ಹರವಾಳ, ಸಾಗರ ಪಾಟೀಲ್ ಇನ್ನಿತರ ಅಧಿಕಾರಿಗಳು ,  ಸಿಬ್ಬಂದಿಗಳು, ಬಂಧಿ ಖೈದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.‌

Follow Us:
Download App:
  • android
  • ios