ರಾಜ್ಯದಲ್ಲಿ ಭೀಕರ ಬರ ಮಧ್ಯೆ ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋದ ಜನಪ್ರತಿನಿಧಿಗಳು: ಸಂಕಷ್ಟದಲ್ಲಿ ಜನತೆ..!
ಮಳೆ ಇಲ್ಲದೇ ಬೆಳೆ ಇಲ್ಲದೇ ಅನ್ನದಾತ ಕಂಗಾಲಾಗಿದ್ದಾನೆ. ಬಳ್ಳಾರಿ ಜಿಲ್ಲೆಯಲ್ಲಿ 550ಕೋಟಿ ಹೆಚ್ಚು ಬೆಳೆ ಹಾನಿಯಾಗಿದೆ. ಆದ್ರೇ, ಈವರೆಗೂ ರೈತರಿಗೆ ಬಿಡಿಗಾಸು ಬಂದಿಲ್ಲ. ಹೀಗಿರೋವಾಗ ಬಳ್ಳಾರಿಯ ಜನಪ್ರತಿನಿಧಿಗಳು ಸೇರಿದಂತೆ ರಾಜ್ಯದ ಬಹುತೇಕ ಸಚಿವ ಶಾಸಕರನ್ನು ತೆಲಂಗಾಣ ಚುನಾವಣೆಯ ಉಸ್ತುವಾರಿಗಳನ್ನಾಗಿ ಮಾಡೋದ್ರ ಜೊತೆ ಅಲ್ಲಿ ಪ್ರಚಾರಕ್ಕೆ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದೆ. ಆದ್ರೇ, ನಮಗೆ ಮೊದಲು ಪರಿಹಾರ ಕೊಡಿ ನಂತರ ನೀವು ಎಲ್ಲಿಯಾದ್ರೂ ಪ್ರಚಾರಕ್ಕೆ ಹೋಗಿ ಎನ್ನುತ್ತಿದ್ದಾರೆ ಇಲ್ಲಿಯ ರೈತರು.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ನ.16): ರಾಜ್ಯದಲ್ಲಿ ಬೀಕರ ಬರಗಾಲ ಆವರಿಸಿದೆ. ಬೆಳೆದ ಬೆಳೆಗಳೆಲ್ಲ ನೀರಿಲ್ಲದೆ ಒಣಗಿ ಹೋಗಿವೆ. ಒಂದು ಕಡೆ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತೊಂದು ಕಡೆ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡಗಳು ಪ್ರವಾಸ ಮಾಡಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಇಷ್ಟೆಲ್ಲ ಸಂಕಷ್ಟ ಇರೋವಾಗ ರೈತರಿಗೆ ಬೆಳೆ ಪರಿಹಾರ ಕೊಡಿಸಲು ಪ್ರಯತ್ನಿಸಬೇಕಿದ್ದ ರಾಜ್ಯದ ಸಚಿವರು ಮತ್ತು ಶಾಸಕರು ತೆಲಂಗಾಣ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿಯೆನ್ನುವುದು ರೈತರ ಪ್ರಶ್ನೆಯಾಗಿದೆ.
ನೀರಿಲ್ಲದೇ ರಾಜ್ಯದ ರೈತರು ಬೀದಿಯಲ್ಲಿ ಸಚಿವರು, ಶಾಸಕರು ಚುನಾವಣೆ ಪ್ರಚಾರದಲ್ಲಿ
ರಾಜ್ಯದ ರೈತರು ಮಳೆ ಇಲ್ಲದೇ, ಕಾಲೂವೆಯಲ್ಲಿ ನೀರಿಲ್ಲದೇ ಪರದಾಡುತ್ತಿದ್ದಾರೆ… ತುಂಗಭದ್ರಾ ಜಲಾಶಯದಿಂದ ಕಾಲೂವೆಗೆ ನೀರು ಹರಿಸುವಂತೆ ಬಳ್ಳಾರಿಯಲ್ಲಿ ಕಳೆದ ಹದಿನೈದು ದಿನದಲ್ಲಿ ಎರಡು ಬಾರಿ ಪ್ರತಿಭಟನೆ ಒಮ್ಮೆ ಬಳ್ಳಾರಿ ಬಂದ್ ಮಾಡಿದ್ದಾಯ್ತು.. ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ.?…
ಶ್ರೀರಾಮುಲು ಗೆಲ್ಲಿಸುವುದೇ ಬಳ್ಳಾರಿ ಲೋಕಸಭೆ: ಬಿಜೆಪಿಗೆ ಅಸ್ತಿತ್ವದ ಪ್ರಶ್ನೆಯಾದ್ರೆ, ಕಾಂಗ್ರೆಸ್‌ಗೆ ಪ್ರತಿಷ್ಠೆ ಕಣ
ಹೌದು, ಮಳೆ ಇಲ್ಲದೇ ಬೆಳೆ ಇಲ್ಲದೇ ಅನ್ನದಾತ ಕಂಗಾಲಾಗಿದ್ದಾನೆ. ಬಳ್ಳಾರಿ ಜಿಲ್ಲೆಯಲ್ಲಿ 550ಕೋಟಿ ಹೆಚ್ಚು ಬೆಳೆ ಹಾನಿಯಾಗಿದೆ. ಆದ್ರೇ, ಈವರೆಗೂ ರೈತರಿಗೆ ಬಿಡಿಗಾಸು ಬಂದಿಲ್ಲ. ಹೀಗಿರೋವಾಗ ಬಳ್ಳಾರಿಯ ಜನಪ್ರತಿನಿಧಿಗಳು ಸೇರಿದಂತೆ ರಾಜ್ಯದ ಬಹುತೇಕ ಸಚಿವ ಶಾಸಕರನ್ನು ತೆಲಂಗಾಣ ಚುನಾವಣೆಯ ಉಸ್ತುವಾರಿಗಳನ್ನಾಗಿ ಮಾಡೋದ್ರ ಜೊತೆ ಅಲ್ಲಿ ಪ್ರಚಾರಕ್ಕೆ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದೆ. ಆದ್ರೇ, ನಮಗೆ ಮೊದಲು ಪರಿಹಾರ ಕೊಡಿ ನಂತರ ನೀವು ಎಲ್ಲಿಯಾದ್ರೂ ಪ್ರಚಾರಕ್ಕೆ ಹೋಗಿ ಎನ್ನುತ್ತಿದ್ದಾರೆ ಇಲ್ಲಿಯ ರೈತರು. ಇಷ್ಟೇಲ್ಲ ಹಾನಿಯಾಗಿದೆ. ರಾಜ್ಯದವರು ಕೇಂದ್ರದವರೆಂದು ಎರಡೆರುಡು ಬಾರಿ ಸರ್ವೇ ಮಾಡಿಕೊಂಡು ಹೋಗಿದ್ಧಾರೆ. ಆದ್ರೇ, ಈವರೆಗೂ ಯಾರಿಂದಲೂ ಬಿಡಿಗಾಸು ಬಂದಿಲ್ಲ. ಹೀಗೆ ನಾವು ಸಂಕಷ್ಟದಲ್ಲಿರೋವಾಗ ನೀವು ಪ್ರಚಾರಕ್ಕೆ ಹೋದ್ರೇ, ಹೇಗೆ..? ಎನ್ನುತ್ತಿದ್ದಾರೆ ಬಳ್ಳಾರಿಯ ಅನ್ನದಾತರು.
ಬರಗಾಲದಲ್ಲೂ ಕಾಂಗ್ರೆಸ್-ಬಿಜೆಪಿ ನಾಯಕರ ರಾಜಕೀಯ, ಪರಸ್ಪರ ನಿಂದನೆ, ಪರಿಹಾರ ಘೋಷಿಸುತ್ತಿಲ್ಲ!
ಪರಹಾರ ಕೊಡಿಸಬೇಕಾದ ಜನಪ್ರತಿನಿಧಿಗಳು ತೆಲಂಗಾಣ ಚುನಾವಣೆ ಪ್ರಚಾರ ಕಣದಲ್ಲಿ
ಇನ್ನೂ ಈಗಾಗಲೇ ಬಳ್ಳಾರಿ ಜಿಲ್ಲೆಯಾದ್ಯಾಂತ ಸರ್ವೇ ಮಾಡಿರೋ ಸಚಿವ ನಾಗೇಂದ್ರ ಮಾತ್ರ ನಮ್ಮದು ರೈತ ಪರ ಸರ್ಕಾರ ಎನ್ನುತ್ತಿದ್ದಾರೆ. ಜಿಲ್ಲೆಯಲ್ಲಿ ಮೊದಲ ಸರ್ವೇಯಲ್ಲಿ 550 ಕೋಟಿ ಹಾನಿಯ ಬಗ್ಗೆ ವರದಿಯಾಗಿದೆ. ಇದೀಗ ಎರಡನೆ ಬಾರಿ ಸರ್ವೇ ಮಾಡಲಾಗುತ್ತಿದೆ. 700ಕ್ಕೂ ಹೆಚ್ಚು ಹಾನಿಯಾಗಿರೋ ಸಾಧ್ಯತೆ ಇದೆ. ಕೇಂದ್ರದಿಂದ ಪರಿಹಾರ ಬಂದ ಕೂಡಲೇ ರಾಜ್ಯದ್ದು, ಸೇರಿಸಿ ರೈತರಿಗೆ ನೀಡುತ್ತೇವೆ ಎನ್ನುತ್ತಿದ್ದಾರೆ.
ಪಕ್ಷ ಕೊಟ್ಟ ಜವಾಬ್ದಾರಿಯಂತೆ ತೆಲಂಗಾಣ ಚುನಾವಣೆಗೆ ಹೋಗುತ್ತಿರೋದು ನಿಜ. ಮೂರುನಾಲ್ಕು ದಿನ ಮಾತ್ರ ಹೋಗ್ತಿರೋದು. ಬರಗಾಲದ ಬಗ್ಗೆ ಇರೋ ಎಲ್ಲ ಕೆಲಸವನ್ನು ಮಾಡಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿರೋ ಕೊಡುಗೆಯನ್ನು ತೆಲಂಗಾಣದ ಜನರಿಗೆ ಹೇಳುವ ಮೂಲಕ ಅಲ್ಲಿಯೂ ಬದಲಾವಣೆ ತರುತ್ತೇವೆ ಎನ್ನುತ್ತಿದ್ದಾರೆ.
ಪರಿಹಾರಕ್ಕೆ ಅನ್ನದಾತನ ಮನವಿ
ಪಕ್ಷದ ಸೂಚನೆಯಂತೆ ಪ್ರಚಾರಕ್ಕೆ ಹೋಗೋ ವಿಚಾರದಲ್ಲಿ ರೈತರಿಗೆ ಯಾವುದೇ ಅಭ್ಯಂತರವಿಲ್ಲ. ಆದ್ರೇ, ಈವರೆಗೂ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡೋ ಮೂಲಕ ಪರಿಹಾರ ಕೊಡಿಸಿದ ಬಳಿಕ, ಪ್ರಚಾರಕ್ಕೆ ಹೋಗಿ ಎನ್ನುವುದು ರೈತರ ವಾದವಾಗಿದೆ. ಅಲ್ಲದೇ ಬರಗಾಲದ ವೇಳೆ ರೈತರ ಜೊತೆ ಇರೋ ಮೂಲಕ ಮಾದರಿ ಜನಪ್ರತಿನಿಧಿಯಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.