Asianet Suvarna News Asianet Suvarna News

ಕೊರೋನಾ ಹೋರಾಟಕ್ಕೆ ಸಾಗರದ ಹಿರಿಯ ಜೀವ ನೀಡಿದ ದೇಣಿಗೆ ಕೋಟಿ ರೂ.ಗೂ ಕಡಿಮೆ ಇಲ್ಲ!

ಕೊರೋನಾ ಲಾಕ್ ಡೌನ್/ ಇಡೀ ದೇಶವೇ ಸ್ಥಬ್ಧವಾಗಿದೆ/ ಉದ್ಯಮಿಗಳು, ರೈತರು ಸಹ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ/ ಈ ಹಿರಿಯ ಜೀವ ಸಹ ನೀಡಿರುವ ದೇಣಿಗೆ ಎಲ್ಲಕ್ಕಿಂದ ಹೆಚ್ಚಿನದು

Shimoga Sagar Senior citizen donates 2800 INR to PM relief Fund
Author
Bengaluru, First Published Apr 29, 2020, 5:50 PM IST

ಶಿವಮೊಗ್ಗ,ಸಾಗರ(ಏ. 29)  'ಇಂದು ಬೆಳಗ್ಗೆ ಎಂದಿನಂತೆ ಪೋಸ್ಟ್ ಆಫೀಸ್ ಕೆಲಸ ನಿರ್ವಹಿಸುತ್ತಿದ್ದೆ . ನಮ್ಮೂರಿನ ವಯಸ್ಸಾದ ಪರಿಚಿತ ಮಹಿಳೆಯೊಬ್ಬರು ಬಂದರು .ಬನ್ನಿ,ಕುಳಿತುಕೊಳ್ಳಿ ಎಂದೆ. ಒಂದು ಮಾಹಿತಿ ಬೇಕಿತ್ತು ಅಂದರು .ಮಾಮೂಲಿ ಕೊರೋನಾ ಬಗ್ಗೆ ಎರಡು ಮಾತನಾಡಿದವರು ಕೊರೋನಾ ಪೀಡಿತರರಿಗೆ ಸಹಾಯಾರ್ಥ ಹಣ ಕಳುಹಿಸಲು ಸಾಧ್ಯವೇ ಎಂದು ವಿಚಾರಿಸಿದರು .

ಖಂಡಿತಾ ಸಾಧ್ಯ .ಮಾನ್ಯ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಣ ಕಳುಹಿಸಬಹುದು .ಅದಕ್ಕೆ ಅಂಚೆ ಇಲಾಖೆಗೆ ಕಮೀಷನ್ ಹಣವನ್ನೂ ಕೊಡಬೇಕಾಗಿಲ್ಲ ಎಂದೆ .ಹಾಗಾದರೆ ಸ್ವಲ್ಪ ಹಣ ತಂದಿದೇನೆ ಕಳಿಹಿಸುತ್ತೀರಾ ಅಂದವರೇ ಇಷ್ಟನ್ನೂ ಕಳುಹಿಸು ಎಂದು ಕೈಯಲ್ಲಿದ್ದ ಒಂದು ಪೊಟ್ಟಣ ನನಗೆ ಕೊಟ್ಟರು .ಅದರಲ್ಲಿ ಮುದುರಿದ್ದ , ಮಡಿಕೆಗಳಾಗಿದ್ದ ಹಣವನ್ನು ಸರಿಯಾಗಿ ಬಿಡಿಸಿ ಎಣಿಸಿ ನೋಡ್ತೇನೆ ,ಆಶ್ಚರ್ಯ ! ರೂಪಾಯಿ 2800 !!! ಯಾವುದಕ್ಕಾದರೂ ಕಷ್ಟಕಾಲಕ್ಕೆ ಬೇಕಾದೀತೆಂದು ಜೋಪಾನವಾಗಿ ತೆಗೆದಿಟ್ಟ ಹಣ !

ಇದೇನಾಗುತ್ತಿದೆ, ಗ್ರೀನ್ ಝೋನ್ ಗೂ ವಕ್ಕರಿಸಿದ ಕೊರೋನಾ

ಅವರ ವಯಸ್ಸಿಗೆ ,ಅವರ ಅಂತಃಕರಣಕ್ಕೆ ,ಅವರ ಧೇಶಸೇವೆಯ ಉದಾತ್ತ ಉದ್ದೇಶಕ್ಕೆ ಅಭಿನಂದಿಸುತ್ತಾ ಎದ್ದುನಿಂತು ಅತ್ಯಂತ ಗೌರವಪೂರ್ವಕವಾಗಿ ಅವರ ಹಣವನ್ನು ಅಂಚೆ ಇಲಾಖೆಯ ಪರವಾಗಿ ಸ್ವೀಕರಿಸಿದೆ .  ಲಕ್ಷ ಲಕ್ಷ ಕೊಟ್ಟವರು ಮಾತ್ರ ದಾನಿಗಳಲ್ಲ .ಇರುವ ಅಲ್ಪ ಹಣದಲ್ಲಿಯೇ ಕೊಡುಗೆ ನೀಡುವವರೂ ಸಹ ದೊಡ್ಡ ದಾನಿಗಳೇ .ಸಾಮಾನ್ಯರಿಗೆ ಇವು ಆದರ್ಶವೂ ಹೌದು 

ಹಿರಿಯ ಜೀವದ ಹೆಸರು ಪದ್ಮಾವತಮ್ಮ ಜಿ .ಊರು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ ಖಂಡಿಕಾ .ಅವರ ದಿವಂಗತ ಪತಿ ಗಣಪತಿಭಟ್ಟರೂ ಸ್ವಾತಂತ್ರ್ಯ ಹೊರಾಟದಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದವರು .

ಪತ್ನಿಗೆ ಹೆರಿಗೆ ಮಾಡಿಸಬೇಕು, ದಂಪತಿಗೆ ಕಿವಿಯೂ ಕೇಳಲ್ಲ, ಮಾತೂ ಬರಲ್ಲ!

ಹೌದು ಇಂಥದ್ದೊಂದು ಬರಹವನ್ನು ಮಂಜಪ್ಪ ಕೆಎಲ್ ಎಂಬುವರು ಸೋಶಿಯಲ್ ಮೀಡಿಯಾದ ಮುಖೇನ ಹಂಚಿಕೊಂಡಿದ್ದಾರೆ. ದೇಣಿಗೆ ನೀಡಿದ ಹಿರಿಯ ಜೀವಕ್ಕೆ ನಮನ ಸಲ್ಲಿಸಿದ್ದಾರೆ. ಹಣ ನೀಡಿದ ಮಹಾತಾಯಿಗೆ ನಮ್ಮಿಂದಲೂ ಅಭಿನಂದನೆ.

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಹ ಈ ಸಂಗತಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. 

Follow Us:
Download App:
  • android
  • ios