Asianet Suvarna News Asianet Suvarna News

ಉಡುಪಿಯಲ್ಲಿ ನಿತ್ಯಾನಂದ ಸ್ವಾಮಿಗಳ ಮಂದಿರ ಉದ್ಘಾಟನೆ

ಉಡುಪಿಯಲ್ಲಿ ಪುನರ್ನಿರ್ಮಿತ ನಿತ್ಯಾನಂದ ಮಂದಿರ ಮಠದ ಲೋಕಾರ್ಪಣೆಯಾಯಿತು. ಈ ವೇಳೆ ಭಾರತದ ಆತ್ಮ ಆಧ್ಯಾತ್ಮ. ಆಧ್ಯಾತ್ಮವನ್ನು ಬೆಳೆಸುವುದಕ್ಕೆ ಮಂದಿರಗಳ ಅವಶ್ಯಕತೆ ಇದೆ. ಅಂತಹ ಅದ್ಬುತವಾದ ಮಂದಿರವನ್ನು ಉಡುಪಿಯಲ್ಲಿ ಸ್ಥಾಪಿಸುವ ಮೂಲಕ ಅದ್ಬುತ ಕೆಲಸವಾಗಿದೆ ಎಂದು ಒಡಿಯೂರು ಶ್ರೀ ಅಭಿಪ್ರಾಯಪಟ್ಟರು

Renovated Nithyananda Swami Mandir Matha inaugurated in Udupi gow
Author
First Published Jan 16, 2023, 9:22 PM IST

ಉಡುಪಿ (ಜ.16): ಭಾರತದ ಆತ್ಮ ಆಧ್ಯಾತ್ಮ. ಆಧ್ಯಾತ್ಮವನ್ನು ಬೆಳೆಸುವುದಕ್ಕೆ ಮಂದಿರಗಳ ಅವಶ್ಯಕತೆ ಇದೆ. ಅಂತಹ ಅದ್ಬುತವಾದ ಮಂದಿರವನ್ನು ಉಡುಪಿಯಲ್ಲಿ ಸ್ಥಾಪಿಸುವ ಮೂಲಕ ಅದ್ಬುತ ಕೆಲಸವಾಗಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಭಾನುವಾರ ನಗರದಲ್ಲಿ ಪುನರ್ನಿರ್ಮಿತ ನಿತ್ಯಾನಂದ ಮಂದಿರ ಮಠದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತ್ಯಾಗ ಮತ್ತು ಸೇವೆ ಸೇರಿಕೊಂಡಾಗ ಇಂತಹ ಅದ್ಬುತ ಕೆಲಸಗಳು ಹೊರಬರಲು ಸಾಧ್ಯವಿದೆ. ಇರವಿನ ಅರಿವನ್ನು ಮೂಡಿಸಲು ಮಂದಿರಗಳ ಅಗತ್ಯವಿದೆ. ಅಜ್ಜ ಓಡಾಡಿದ ಜಾಗದಲ್ಲಿ ಮಂದಿರ ನಿರ್ಮಾಣವಾಗಿದ್ದು, ಅಜ್ಜನನ್ನು ನಾವೆಲ್ಲಾ ಅನುಸರಿಸಬೇಕು ಎಂದರು. 

ಸಭೆಯಲ್ಲಿ ಸಾಗರದ ಶ್ರೀ ವಿನಯ ಗುರೂಜಿ, ಮಾಣಿಲದ ಶ್ರೀ ಮೋಹನದಾಸ ಪರಮಾನಂದ ಸ್ವಾಮೀಜಿ, ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಮಾಗೋಡಿನ ಮಹಾಮಂಡಲೇಶ್ವರ ನಿತ್ಯಾನಂದ ಸರಸ್ವತಿ ಸ್ವಾಮೀಜಿ, ಸ್ವಿಜರ್ ಲ್ಯಾಂಡಿನ ಆಧ್ಯಾತ್ಮ ಗುರೂಜಿ ಮೋಹನ್ ಜೀ ಸಾನಿದ್ಯ ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಮುಂಬೈಯ ನಿತ್ಯಾನಂದ ಸ್ವಾಮೀಜಿ ಭಕ್ತ ಕೆ.ಕೆ.ಆವರ್ಸೆಕರ್ ವಹಿಸಿದ್ದರು.

ವೇದಿಕೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಕ.ಅ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯರಾದ ವಿಜಯ ಕೊಡವೂರು, ರಮೇಶ್ ಕಾಂಚನ್, ಉದ್ಯಮಿಗಳಾದ ಜಿ.ಶಂಕರ್, ಮನೋಹರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಕೆ.ಎಂ.ಕರುಣಾಕರ ಶೆಟ್ಟಿ, ಹರಿಪ್ರಸಾದ್ ಐತಾಳ್, ತೋನ್ಸೆ ಜಯಕರ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ನಾಗರಾಜ ಶೆಟ್ಟಿ, ರಮಾನಾಥ ರೈ, ನಾಗೇಶ್ ಹೆಗ್ಡೆ ಉಪಸ್ಥಿತರಿದ್ದರು. 

ವಿಶ್ವದ ಗರ್ಭಿಣಿಯರಿಗೆ ಬಂಪರ್‌ ಆಫರ್‌, ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದ ನಿತ್ಯಾನಂದ!

ಡಾ. ರಚನಾ ಆಚಾರ್ಯ ಪ್ರಾರ್ಥಿಸಿ, ದೇವಳದ ಅಧ್ಯಕ್ಷರಾದ ತೋಟದ ಮನೆ ದಿವಾಕರ ಶೆಟ್ಟಿ ಸ್ವಾಗತಿಸಿದರು. ರಾಮಚಂದ್ರ ಮಿಜಾರು ಮತ್ತು ಡಾ.ಎಂ. ವಿಜಯೇಂದ್ರ ವಸಂತ್‌ ಕಾರ್ಯಕ್ರಮ ನಿರೂಪಿಸಿದರು.

ಸ್ವಾಮಿ ನಿತ್ಯಾನಂದ ಕೇಸ್‌, ಕೇಂದ್ರ ಗೃಹ ಸಚಿವಾಲಯಕ್ಕೆ ಗುಜರಾತ್‌ ಹೈಕೋರ್ಟ್‌ ಛೀಮಾರಿ!

ಫಿಲಾಸಫಿ ಎಂಬ ಶಬ್ದದ ಬಳಕೆ ಇಲ್ಲದ, ಇಂಟರ್ ನೆಟ್ ಅಸ್ತಿತ್ವದಲ್ಲಿಲ್ಲದ ಕಾಲದಲ್ಲಿಯೂ ತಮ್ಮ ಸರಳತೆ ಜೀವನ ಸಂದೇಶದ ಮೂಲಕವೇ ಬಡವರ ಕಷ್ಟಗಳನ್ನು ದೂರ ಮಾಡಿ, ಆನಂದವನ್ನು ತುಂಬಿದವರು ಅವಧೂತ ನಿತ್ಯಾನಂದ ಸ್ವಾಮೀಜಿ, ಅವರ ತತ್ವಗಳ ಮನನ ಇಂದು ನಡೆಯಬೇಕಾಗಿದೆ.
-ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾವರ್ಯ ಸ್ವಾಮೀಜಿ

Follow Us:
Download App:
  • android
  • ios